ಫೆ.೨೧ ರಿಂದ ಐ.ಸಿ.ಎಸ್.ಇ ಹತ್ತನೇ ತರಗತಿ ಪರೀಕ್ಷೆ ಆರಂಭ
ಭಟ್ಕಳ ತಾಲೂಕಿನಲ್ಲಿ ೧೪೪ ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆ ಎದುರಿಸಲಿದ್ದಾರೆ
ಭಟ್ಕಳ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ (COUNCIL FOR THE INDIAN SCHOOL CERTIFICATE EXAMINATIONS) ನ ಐ.ಸಿ.ಎಸ್.ಇ ಹತ್ತನೇ ತರಗತಿಯ ಪರೀಕ್ಷೆಗಳು ಫೆ.೨೧ರಿಂದ ಮಾ.೨೮ರ ವರೆಗೆ ದೇಶದಾದ್ಯಂತ ನಡೆಯಲಿದ್ದು ಭಟ್ಕಳ ತಾಲೂಕಿನಲ್ಲಿ ಒಟ್ಟು ೧೪೪ ವಿದ್ಯಾರ್ಥಿಗಳು ಈ ಬಾರಿ ಹತ್ತನೇ ತರಗತಿ ಪರೀಕ್ಷೆ ಎದುರಿಸಲಿದ್ದಾರೆ.
ಭಟ್ಕಳ ತಾಲೂಕಿನಲ್ಲಿ ಕೇವಲ ಮೂರು ಐ.ಸಿ.ಎಸ್.ಇ ಪಠ್ಯಕ್ರಮವನ್ನು ಬೋಧಿಸುವ ಶಾಲೆಗಳಿದ್ದು ಅದರಲ್ಲಿ ಭಟ್ಕಳದ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ನಲ್ಲಿ ೫೦ ವಿದ್ಯಾರ್ಥಿನೀಯರು ೩೫ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಮುರುಢೇಶ್ವರದ ಬೀನಾವೈದ್ಯ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ೨೦ ಹೆಣ್ಣು, ೧೫ ಗಂಡು ಒಟ್ಟು ೩೫ ವಿದ್ಯಾರ್ಥಿಗಳು, ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ನಲ್ಲಿ ೮ಹೆಣ್ಣು ೧೬ ಗಂಡು ಒಟ್ಟು ೨೪ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಎದುರಿಸಲಿದ್ದಾರೆ.