ಭಟ್ಕಳ ಹುರುಳಿಸಾಲಿನಲ್ಲಿ ಸರಕಾರಿ ಹಾಡಿ ಭೂಮಿ ಸರ್ವೇ ಖಂಡಿಸಿ ಅತಿಕ್ರಮಣದಾರರ ಪ್ರತಿಭಟನೆ

Source: S O News Service | By I.G. Bhatkali | Published on 9th June 2020, 11:28 AM | Coastal News |

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಹುರುಳಿಸಾಲಿನ ಸರಕಾರಿ ಹಾಡಿ ಭೂಮಿ ಸರ್ವೇ ಕಾರ್ಯಕ್ಕೆ ಅಲ್ಲಿನ ಅತಿಕ್ರಮಣದಾರರು ವಿರೋಧ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದಿದೆ.

ಸೋಮವಾರ ಮುಂಜಾನೆ ಹುರುಳಿಸಾಲ ಸರಕಾರಿ ಹಾಡಿ ಸರ್ವೇ ಸಂಖ್ಯೆ 105, 106, 107ರಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರ್ವೇಗೆ ಮುಂದಾದರು. ಆದರೆ ತಮ್ಮನ್ನು ತೆರವುಗೊಳಿಸಲು ಕಂದಾಯ ಇಲಾಖೆ ಈ ಕಾರ್ಯಕ್ಕೆ ಮುಂದಾಗಿದೆ ಎಂದು ಆತಂಕ ಹೊರ ಹಾಕಿರುವ ಅತಿಕ್ರಮಣದಾರರು, ಸರ್ವೇಯ ಉದ್ದೇಶವನ್ನು ಹೇಳದೇ ಸರ್ವೇ ನಡೆಸಲು ಬಿಡುವುದಿಲ್ಲ ಎಂದು

ರಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಮೇರೆಗೆ ಹುರುಳಿಸಾಲ ಪ್ರದೇಶದಲ್ಲಿ ಸರ್ವೇ ಕಾರ್ಯವನ್ನು ನಡೆಸಲಾಗಿದೆ. ಇದನ್ನು ತಡೆಯುವುದು ಕಾನೂನು ಬಾಹೀರವಾಗುತ್ತದೆ. 
- ಎಸ್.ರವಿಚಂದ್ರ, ತಹಸೀಲ್ದಾರರು, ಭಟ್ಕಳ

ಸರಕಾರಿ ಹಾಡಿ ಭೂಮಿಯಲ್ಲಿ ಕಳೆದ 25-30 ವರ್ಷಗಳಿಂದ ಬಡವರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಈಗ ಕಂದಾಯ ಅಧಿಕಾರಿ, ಸಿಬ್ಬಂದಿಗಳು ಏಕಾಏಕಿಯಾಗಿ ಸರ್ವೇ ಕಾರ್ಯಕ್ಕೆ ಆಗಮಿಸಿದ್ದಾರೆ. ಅವರ ಉದ್ದೇಶ ಏನು ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ. ನಮಗೆ ಆತಂಕವಾಗುತ್ತಿದೆ.
  ಮೋಹನ, ಅತಿಕ್ರಮಣದಾರ

ಪ್ರತಿಭಟಿಸಿದರು. ನಾವು ಕಳೆದ 25-30 ವರ್ಷಗಳಿಂದ ಇಲ್ಲಿಯೇ ಮನೆ ಕಟ್ಟಿಕೊಂಡು ವಾಸವಾಗಿದ್ದು, ತೆರಿಗೆಯನ್ನೂ ಭರಣ ಮಾಡುತ್ತಲೇ ಇದ್ದೇವೆ. ಸರಕಾರವೇ ನಮಗೆ ವಿದ್ಯುತ್ ಸಂಪರ್ಕ, ನೀರು ಎಲ್ಲವನ್ನೂ ಕೊಟ್ಟಿದ್ದು, ನಾವು ಇಲ್ಲಿಯವರೆಗೂ ಶುಲ್ಕವನ್ನು ಪಾವತಿಸುತ್ತ ಬಂದಿದ್ದೇವೆ. ಅಲ್ಲದೇ ಸರಕಾರ ಈ ಭಾಗದಲ್ಲಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಲಕ್ಷಾಂತರ ರುಪಾಯಿ ವಿನಿಯೋಗಿಸಿದೆ. ಜನಪ್ರತಿನಿಧಿಗಳು ಅಕ್ರಮ ಸಕ್ರಮದ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ಆದರೆ ನಮಗೆ ಯಾವುದೇ ನೋಟಿಸ್ ನೀಡದೇ, ಏಕಾಏಕಿಯಾಗಿ ಸರ್ವೇ ನಡೆಸುವುದು ಏತಕ್ಕಾಗಿ, ತಹಸೀಲ್ದಾರರೇ ಸ್ಥಳಕ್ಕೆ ಬಂದು ನಮ್ಮ ಮನವಿಯನ್ನು ಆಲಿಸಬೇಕು ಎಂದು ಆಕ್ರೋಶವನ್ನು ಹೊರ ಹಾಕಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ಕರೆಸಿಕೊಂಡು, ಆಕ್ರೋಶಿತರನ್ನು ಚೆದುರಿಸಿ ಸರ್ವೇ ಕಾರ್ಯವನ್ನು ಮುಂದುವರೆಸಲಾಯಿತು. 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...