ಬೀದಿ ದೀಪಕ್ಕೆ ಅಳವಡಿಸಿದ್ದ ಬ್ಯಾಟರಿ ಕಳುವು; ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

Source: sonews | By Staff Correspondent | Published on 15th December 2018, 6:37 PM | Coastal News | Don't Miss |

ಭಟ್ಕಳ: ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಬೇಂಗ್ರೆ ಹಾಗೂ ಶಿರಾಲಿ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳಲ್ಲಿ  ಸೋಲಾರ್ ಬೀದಿ ದೀಪಗಳಿಗೆ ಅಳವಡಿಸಿರುವ ಬ್ಯಾಟರಿಗಳನ್ನು ಕಳ್ಳವು ಮಾಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಶಿರಾಲಿ, ಬೇಂಗ್ರ, ಉತ್ತರಕೊಪ್ಪ ಗಳಲ್ಲಿ ಕಳೆದ ಹಲವು ದಿನಗಳಿಂದ ಸ್ಟ್ರೀಟ್ ಲೈಟ್ಸ್ ಗಳಿಗೆ ಅಳವಡಿಸಿದ್ದ ಸೋಲಾರ್ ಬ್ಯಾಟರಿಗಳು ಕಳುವು ಆಗಿದ್ದು ಈ ಕುರಿತಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಮಂದಿರದ ಬಳಿ ಇರುವ ಕಂಬಕ್ಕೆ ಅಳವಡಿಸಿದ್ದ ಸೋಲಾರ್ ಬ್ಯಾಟರಿಯನ್ನು ಕದಿಯುವ ದೃಶ್ಯಾವಳಿಗಳು ಆ ಮಂದಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲಾ ತಾಣಾದಲ್ಲಿ ವೈರಲ್ ಆಗಿದೆ. 

ಇದರಿಂದಾಗಿ ಬ್ಯಾಟರಿ ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯ ಸುಲಭವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಸಿಸಿಟಿವಿ ಫೋಟೇಜ್ ನಲ್ಲಿ ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ ಬಂದು ಕಂಬಕ್ಕೆ ಅಳವಡಿಸಿದ್ದ ಬ್ಯಾಟರಿಯನ್ನು ತೆಗೆಯುತ್ತಿದ್ದಾರೆ. ವ್ಯಕ್ತಿಗಳ ಮುಖ ಅಸ್ಪಷ್ಟವಾಗಿದ್ದು ಬೈಕ್ ನ ನಂಬರ್ ಪ್ಲೇಟ್ ಆಧಾರದಲ್ಲಿ ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯ ಸುಲಭವಾಗಿ ಮಾಡಬಹುದಾಗಿದ್ದು ಪೊಲೀಸರು ಈ ಕುರಿತಂತೆ ಶೀಘ್ರ ಕ್ರಮ ಜರಗಿಸಬೇಕು ಎಂದು ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.  
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...