ಜಿಲ್ಲಾ ಕಾರಾಗೃಹಕ್ಕೆ ಎಸ್‌ಎಚ್‌ಆರ್‌ಸಿ ಅಧ್ಯಕ್ಷೆ  ಮೀರಾ ಸಕ್ಸೇನಾ  ದಿಢೀರ್ ಭೇಟಿ

Source: S O News service | By Staff Correspondent | Published on 20th October 2016, 10:13 PM | Coastal News | Don't Miss |


ಕಾರವಾರ : ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಅವರು ಗುರುವಾರ ಸಂಜೆ ಜಿಲ್ಲಾ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರಾಗೃಹದಲ್ಲಿರುವ ಮಹಿಳಾ ಕೈದಿಗಳನ್ನು ಭೇಟಿ ಮಾಡಿದ ಅವರು ಅಹವಾಲುಗಳನ್ನು ವಿಚಾರಿಸಿದರು. ಜೈಲಿನಲ್ಲಿ ಯಾವುದೇ ರೀತಿಯ ಕಿರುಕುಳ, ದೌರ್ಜನ್ಯ ನಡೆಯುತ್ತಿದ್ದರೆ ಮುಕ್ತವಾಗಿ ಹಂಚಿಕೊಳ್ಳುವಂತೆ ಅವರು ಮಹಿಳಾ ಕೈದಿಗಳಿಗೆ ತಿಳಿಸಿದರು. ಬಳಿಕ ಅಡುಗೆ ಕೋಣೆ, ತರಕಾರಿ ದಾಸ್ತಾನು ಕೊಠಡಿ, ಆರೋಗ್ಯ ಕೇಂದ್ರ, ವಿಡಿಯೊ ಕಾನ್ಫರೆನ್ಸ್ ಕೊಠಡಿ, ಜೈಲಿನಲ್ಲಿ ಕೈದಿಗಳು ಬೆಳೆಸಿರುವ ಉದ್ಯಾನ ಮತ್ತು ತರಕಾರಿ ತೋಟಗಳನ್ನು ವೀಕ್ಷಿಸಿದರು.
ಕೈದಿಗಳಿಗೆ ಸಿದ್ಧಪಡಿಸಲಾಗಿರುವ ರಾತ್ರಿ ಊಟವನ್ನು ಪರೀಕ್ಷಿಸಿದ ಅವರು, ಚಪಾತಿ ಹಾಗೂ ಸಾಂಬಾರ್‌ನ ಗುಣಮಟ್ಟವನ್ನು ಉತ್ತಮಗೊಳಿಸುವಂತೆ ಸೂಚನೆ ನೀಡಿದರು. ಜೈಲಿನಲ್ಲಿ ವಿಡಿಯೊ ಕಾನ್ಫರೆನ್ಸ್ ನಡೆಸಲು ಉಪಕರಣಗಳನ್ನು ಸರಬರಾಜು ಮಾಡಿದ್ದರೂ, ಅದನ್ನು ಕಾರ್ಯಾರಂಭ ಮಾಡಲು ಇನ್ನೂ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದ ಅವರು ತಕ್ಷಣ ಜಿಲ್ಲಾಡಳಿತದ ತಾಂತ್ರಿಕ ನೆರವು ಪಡೆದು ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲು ತಾಕೀತು ಮಾಡಿದರು.
ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಬೇಕರಿ ಕೆಲಸದ ತರಬೇತಿಯನ್ನು ನೀಡಬೇಕು. ಇದಕ್ಕಾಗಿ ಕಾರಾಗೃಹಕ್ಕೆ ಒದಗಿಸಲಾಗಿರುವ ಮೈಕ್ರೋ ಓವನ್ ಇತ್ಯಾದಿಗಳು ಉಪಯೋಗಿಸದೇ ಹಾಗೆ ಬಿಟ್ಟಿರುವುದು ಸರಿಯಲ್ಲ. ಬೇಕರಿ ಉತ್ಪನ್ನ ತಯಾರಿಕೆಗೆ ತರಬೇತಿ ನೀಡಲು ತರಬೇತುದಾರರನ್ನು ನಿಯೋಜಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ್, ಡಿವೈ‌ಎಸ್ಪಿ ಪ್ರಮೋದ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...