ಹೊನ್ನೆಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಗೆ 75ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮ

Source: so news | By MV Bhatkal | Published on 24th January 2023, 12:50 AM | Coastal News |

ಭಟ್ಕಳ:ತಾಲ್ಲೂಕಿನ ಹೊನ್ನೆಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವೂ ಜನವರಿ 26,27 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ರೋಹಿದಾಸ ನಾಯ್ಕ  ತಿಳಿಸಿದ್ದಾರೆ.
ಅವರು ಇಲ್ಲಿನ ಹೆಬಳೆಯ ಹೊನ್ನೆಗದ್ದೆ ಸರಕಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ 
ಮಾತನಾಡಿದ್ದರು. 
'75ನೇ ವರ್ಷದ ಅಮೃತ ಮಹೋತ್ಸವ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಎರಡೂ ದಿನಗಳ ಕಾಲ ನಡೆವ ಅಮೃತ ಮಹೋತ್ಸವ ಕಾರ್ಯಕ್ರಮವನ್ನು 26 ಗುರುವಾರರಂದು  ಬೆಳಿಗ್ಗೆ : 8-00 ಗಂಟೆಗೆ ಧ್ವಜಾರೋಹಣ,10-00 ಗಂಟೆಗೆ ದ್ವಾರ ಮಂಟಪದ ಉದ್ಘಾಟನೆ, ಮಧ್ಯಾಹ್ನ 1-00 ಗಂಟೆಗೆ “ ಅನ್ನಸಂತರ್ಪಣೆ "ಸಂಜೆ : 5-00 ಗಂಟೆಗೆ ಅಮೃತ ಮಹೋತ್ಸವ ಉದ್ಘಾಟನಾ ಸಮಾರಂಭ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ‌. ಅಧ್ಯಕ್ಷತೆಯನ್ನು ಶಾಸಕ ಸುನೀಲ ನಾಯ್ಕ ವಹಿಸಲ್ಲಿದ್ದಾರೆ. ಮುಖ್ಯ ಅತಿಥಿಗಳಾದ ಹೆಬಳೆ ಗ್ರಾಮ ಪಂಚಾಯತ ಅಧ್ಯಕ್ಷ ಕುಪ್ಪು ಎಂ ಗೊಂಡ,
ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್, ಜಿಲ್ಲಾ ಉಪನಿರ್ದೇಶಕರು ಆಡಳಿ ಕಾರವಾರ, ಈಶ್ವರ ನಾಯ್ಕ,
ಡಿ.ವೈ.ಎಸ್.ಪಿ  ಶ್ರೀಕಾಂತ್ ಕೆ, ಡಾ. ದೇವೇಂದ್ರ ಎನ್ ನಾಯ್ಕ ಬೆಂಗಳೂರು, ಕುಂದಾಪುರ ಭಂಡಾರ್ ಕರ್ಸ ಕಾಲೇಜಿನ  ಪ್ರಾಶುಪಾಲ ಗೋವಿಂದ ಗೊಂಡ ಉಪನ್ಯಾಸವನ್ನು ನೀಡಲಿದ್ದಾರೆ. ಅತಿಥಿಗಳಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ನಿವೃತ್ತಿ ಶಿಕ್ಷಕರು, ಬೋಟ್ ಚಾಲಕರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ನಂತರ ಗುರುವಂದನಾ ಕಾರ್ಯಕ್ರಮ, ದಾನಿಗಳಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ. ರಾತ್ರಿ : 7-00 ಗಂಟೆಗೆ ಶಾಲಾ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ‌. 
ದಿನಾಂಕ 27 ಶುಕ್ರವಾರ ಸಂಜೆ 5 ಗಂಟೆಗೆ ಅಮ್ರತ ಮಹೋತ್ಸವದ ಸಮಾರೋಪ ಸಮಾರಂಭವನ್ನು ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಘಟಕ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ‌. ಅಧ್ಯಕ್ಷತೆಯನ್ನು ಮಾಜಿ ಶಾಸಕ ಮಂಕಾಳ ವೈದ್ಯ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಯಾಗಿ ಪ್ರಬಾರಿ ತಹಸೀಲ್ದಾರ ಅಶೋಕ ಭಟ್, ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಬಿ.ಆರ್.ಸಿ. ಪೂರ್ಣಿಮಾ ಮೊಗೇರ, ಶಾಲಾಭಿವ್ರದ್ದಿಯ ದಾನಿ ಲಚ್ಮಯ್ಯ ಸಿದ್ದನಮನೆ, ಅಬ್ದುಲದ ನಾಸೀರ್ ಸೇರಿದಂತೆ ವಿವಿಧ ಸಮಾಜದ ಅಧ್ಯಕ್ಷರು ಉಪಸ್ಥಿತರಿರಲಿದ್ದಾರೆ‌. 
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನ್ರತ್ಯ ತಂಡ "ಅಮೇಜಿಂಗ್ ಸ್ಟೆಪ್ಪರ್ಸ ಡಾನ್ಸ್ ಕ್ರಿವ್ ಕಂಚಗೋಡು ಇವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದರು.

ನಂತರ ಮಾತನಾಡಿದ ಶಾಲಾ ಅಮ್ರತ ಮಹೋತ್ಸವ ಸಮಿತಿ 
ಗೌರವಾಧ್ಯಕ್ಷ  ಕ್ರಷ್ಣ ಮೊಗೇರ '1948ರಲ್ಲಿ ಪ್ರಸ್ತುತ ಭೂಸುರರ ಮನೆಯಿರುವ ಸ್ಥಳದಲ್ಲಿ ಬಾಪು ಸಾಹೇಬರ ಮಾಲ್ಕಿ ಕಟ್ಟಡದಲ್ಲಿ ಪ್ರಾರಂಭವಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆಗದ್ದೆಯು ಕೆಲ ವರ್ಷಗಳ ನಂತರ ಗುಂಡಿಗದ್ದೆಗೆ ಸ್ಥಳಾಂತರಗೊಂಡಿತು. ತದನಂತರ ಸುಮಾರು 2 ವರ್ಷಗಳ ನಂತರ ರಾಮಾ ಮಾದೇವ ಶೆಟ್ಟರ ಶಿಕ್ಷಣಾಭಿಮಾನದಿಂದ ಅವರ ಮಾಲ್ಕಿ ಜಾಗದಲ್ಲಿ ಸ್ವತಃ ಎರಡು ಕೊರಡಿಯನ್ನು ನಿರ್ಮಿಸಿ ಶಾಲೆಯನ್ನು ಪ್ರಾರಂಭಿಸಿದರು. 
ನಂತರ ಸರಕಾರದಿಂದ ಅಧೀಕೃತ ಎರಡು ಕೊಠಡಿಗಳು ನಿರ್ಮಾಣಗೊಂಡು ಹಲವಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಶಾಲಾ ಸ್ಥಳವು ಸರಕಾರಿ ಜಾಗವಲ್ಲವಾದ್ದರಿಂದ ಹೆಚ್ಚಿನ ಕೊಠಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಸಮಸ್ಯೆಯಾಯಿತು. ನಂತರದಲ್ಲಿ ಸ್ಥಳವು ಶಾಲೆಗಾಗಿ ಮೀಸಲು ನಾಮಧೇಯದಡಿಯಲ್ಲಿ ಇದ್ದದ್ದನ್ನು ಗಮನಿಸಿದ ಮುಖ್ಯಾಧ್ಯಾಪಕರು 2006-07 ರಲ್ಲಿ ಜಿಲ್ಲಾ ಪಂಚಾಯತ ಅನುದಾನದಿಂದ ಮೊದಲು ತೆರೆದ ಬಾವಿಯನ್ನು ನಿರ್ಮಿಸಿಕೊಂಡರು. ನಂತರ 2007-08 ರಲ್ಲಿ ಎಸ್.ಎಸ್.ಎ. ಅಡಿಯಲ್ಲಿ ಎರಡು ಕೊಠಡಿಯ ಅನುದಾನ ಬಿಡುಗಡೆಯಾಗಿದ್ದು, ಪ್ರಸ್ತುತ ಸ್ಥಳದಲ್ಲಿ ಕೊಠಡಿ ನಿರ್ಮಿಸಲಾಯಿತು. ನಂತರ 2008-09 ರಲ್ಲಿ ಮತ್ತೊಂದು ಕೊಠಡಿಯನ್ನು ನಿರ್ಮಿಸಿ ಹಳೆ ಶಾಲೆಯ ಜೀರ್ಣಾವಸ್ಥೆಯಲ್ಲಿದಿದ್ದನ್ನು ಗಮನಿಸಿ ಹೊಸ ಕಟ್ಟಡಕ್ಕೆ ಸ್ಥಳಾಂತರಮಾಡಲಾಯಿತು. 

2009-10 ರಲ್ಲಿ ಎಸ್.ಎಸ್.ಎ. ವತಿಯಿಂದ ಒಂದು ಕೊಠಡಿ, ಅಕ್ಷರಾ ದಾಸೋಹದ ಉಗ್ರಾಣ ಕೊಠಡಿ, ಹೆಣ್ಣು ಮಕ್ಕಳ ಶೌಚಾಲಯ ಹಾಗೂ ಗ್ರಾಮ ಪಂಚಾಯತಿಯಿಂದ ಒಂದು ಕಟ್ಟಡ ನಿರ್ಮಿಸಲಾಯಿತು. 2016-17 ರಲ್ಲಿ ಶಾಲೆಯ ಹೆಸರಿಗೆ 1 ಎಕರೆ 16 ಗುಂಟೆ ಜಾಗವನ್ನು ಅರಣ್ಯ ಇಲಾಖೆಯಿಂದ ಪಟ್ಟ ಸಿಕ್ಕಿತು.  2018-19ರಲ್ಲಿ ಸರಕಾರದಿಂದ ಒಂದು ಕೊಠಡಿಯ ಜೊತೆಗೆ ಸಧ್ಯ 5 ಕೊಠಡಿಯಿರುವ ಶಾಲೆಯಲ್ಲಿ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು. 
ಶಾಲೆಯ ಪದೋನ್ನತ ಮುಖ್ಯೋಪಾಧ್ಯಾಯಕ ದೇವಪ್ಪ ಕೆ. ಅಳ್ವೇಕೋಡಿ ಮಾತನಾಡಿ 'ಈ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿನ ವಿಧ್ಯಾರ್ಥಿಗಳ ಸಾಧನೆ ಹಾಗೂ ಶಾಲೆಯ ಸರ್ವತೋಮುಖ ಅಭಿವೃದ್ಧಿಯನ್ನು ಜಿಲ್ಲೆ ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಮಕ್ಕಳಿಂದ ಮೊದಲ ಬಾರಿಗೆ ನಾಟಿ ಮಾಡಿರುವ ಶಾಲೆಯ ಜೊತೆಗೆ ಸೈಕಲ್ ಇಂದ ನೀರು ಎತ್ತುವ ಯಂತ್ರ ತಯಾರಿಸಿದ ಹಿನ್ನೆಲೆ ರಾಜ್ಯ ಮಟ್ಟದ ಇನ್ಸಪೈಯರ ಅವಾರ್ಡ ಸಿಕ್ಕಿರುವುದು ಉತ್ತಮ ಸಾಧನೆಯಾಗಿದೆ. ಮೊದಲ ಬಾರಿಗೆ ನಾನು ಮುಖ್ಯೋಪಾಧ್ಯಾಯನಾಗಿ ಬಂದಾಗ ಕಟ್ಟಡವನ್ನು ನೋಡಿ ಬೇಸರವಾಗಿತ್ತು ಆದರೆ ಹಳೆ ವಿದ್ಯಾರ್ಥಿಗಳ, ಶಾಲಾಭಿವ್ರದ್ದಿ ಮಂಡಳಿಯ ಸಹಕಾರದಿಂದ ಬೆಳವಣಿಗೆಯಾಗುತ್ತಾ ಬಂದಿದೆ. ಶೇ. 90ರಷ್ಟು ಅಂಕ ಗಳಿಕೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಇದೆ. ಶಾಲೆಯ ಶಿಸ್ತು, ಬದ್ದತೆ ಇವೆಲ್ಲವು ಜಿಲ್ಲೆ ರಾಜ್ಯ ಮಟ್ಟಕ್ಕೆ ತಲುಪಬೇಕಾಗಿದೆ ಎಂದರು. 
ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಿತಿ ಕಾರ್ಯದರ್ಶಿ ಹರೀಶ  ಮೋಗೆರ, ಶಾಲೆಯ ಮುಖ್ಯೋಪಾಧ್ಯಾಯ ದೇವಪ್ಪ ಕೆ ಅಳ್ವೆಕೋಡಿ, ಹಳೆ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ಲಕ್ಷಣ ಬಿ ಮೊಗೇರ, ಎಸ್.ಡಿ.ಎಂ.ಸಿ ಅಧ್ಯಕ್ಷ ಗಜಾನನ ಎಸ್ ಮೊಗೇರ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಲಕ್ಷ್ಮೀ ನಾಯ್ಕ,ಎಸ್.ಡಿ ಎಂ.ಸಿ ಸದಸ್ಯರಾದ  ಮೋಹನ ನಾಯ್ಕ,ಶಿವರಾಮ ನಾಯ್ಕ, ಸತೀಸ ಶೆಟ್ಟಿ, ಗಿರೀಶ ಶೆಟ್ಟಿ, ಕುಪ್ಪಯ್ಯ ಗೊಂಡ, ಹನುಮಂತ ಮೊಗೇರ, ನಾಗರಾಜ ಮೊಗೇರ,ಶಿಕ್ಷಕ ವಸಂತ ನಾಯ್ಕ ಸೇರಿದಂತೆ ಮುಂತಾದವರು ಉಪಸ್ಥಿತಿ ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...