ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ ಪ್ರಕರಣ; ಕೇಂದ್ರ ಸರಕಾರಕೆ ಸುಪ್ರೀಂ ನೋಟಿಸ್

Source: Vb | By I.G. Bhatkali | Published on 14th January 2022, 7:21 AM | National News |

ಹೊಸದಿಲ್ಲಿ: ಹೊಸ ದಿಲ್ಲಿ ಹಾಗೂ ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಎರಡು ಕಾರ್ಯಕ್ರಮಗಳಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಬಗ್ಗೆ ತನಿಖೆ ಹಾಗೂ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ಕುರಿತಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರಕಾರ ಹಾಗೂ ಇತರರಿಂದ ಪ್ರತಿಕ್ರಿಯೆ ಕೋರಿದೆ.

ದ್ವೇಷ ಭಾಷಣ ಆರೋಪದ ಕುರಿತಂತೆ ಎಸ್‌ಐಟಿಯಿಂದ ಸ್ವತಂತ್ರ, ವಿಶ್ವಾಸಾರ್ಹ ಹಾಗೂ ಪಹಪಾತರಹಿತ ತನಿಖೆಗೆ ನಿರ್ದೇಶ ನೀಡುವಂತೆ ಕೋರಿ ಪತ್ರಕರ್ತ ಖುರ್ಬಾನ್ ಅಲಿ ಹಾಗೂ ಪಾಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ, ಹಿರಿಯ ವಕೀಲ ಅಂಜನಾ ಪ್ರಕಾಶ್ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಈ ನೋಟಿಸು ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಟ್ಟ ಅವರನ್ನು ಕೂಡ ಒಳಗೊಂಡ ಪೀಠ, ಭವಿಷ್ಯದಲ್ಲಿ ಧರ್ಮ ಸಂಸದ್ ನಡೆಸುವ ವಿರುದ್ಧ ಸ್ಥಳೀಯ ಪ್ರಾಧಿಕಾರಕ್ಕೆ ಅಹವಾಲು ಸಲ್ಲಿಸಲು ದೂರುದಾರರಿಗೆ ಅನುಮತಿ ನೀಡಿದೆ. ಈ ಪ್ರಕರಣದ ವಿಚಾರಣೆಯ ನ್ನು ನ್ಯಾಯಾಲಯ 10 ದಿನ ಮುಂದೂಡಿದೆ.

ಹರಿದ್ವಾರ ಹಾಗೂ ದಿಲ್ಲಿಯಲ್ಲಿ 2021 ಡಿಸೆಂಬರ್ 17 ಹಾಗೂ 19ರ ನಡುವೆ ದ್ವೇಷ ಭಾಷಣ ಮಾಡಿರುವುದನ್ನು ಈ ಮನವಿ ನಿರ್ದಿಷ್ಟ ವಾಗಿ ಉಲ್ಲೇಖಿಸಿದೆ. ಇಂತಹ ದ್ವೇಷ ಭಾಷಣಗಳನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಅದು ಕೋರಿದೆ.

ಒಂದು ಕಾರ್ಯಕ್ರಮವನ್ನು ಯತಿ ನರಸಿಂಹಾನಂದ ಅವರು ಹರಿ ದ್ವಾರದಲ್ಲಿ ಆಯೋಜಿಸಿದ್ದರು. ಇನ್ನೊಂದು ಕಾರ್ಯಕ್ರಮವನ್ನು ದಿಲ್ಲಿ ಯಲ್ಲಿ 'ಹಿಂದೂ ಯುವ ವಾಹಿನಿ' ಆಯೋಜಿಸಿತ್ತು. ಈ ಎರಡೂ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಲಾಗಿತ್ತು.

Read These Next

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಗೆ ವರ್ಣರಂಜಿತ ತೆರೆ: 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕದೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಗೆ ವರ್ಣರಂಜಿತ ತೆರೆ: 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕದೊಂದಿಗೆ ಭಾರತಕ್ಕೆ ನಾಲ್ಕನೇ ...

ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೂ ಮಾತನಾಡಲು ಬಿಡಿ, ನಿಮ್ಮಲ್ಲಿ ತಾಳ್ಮೆಯಿಲ್ಲದಿದ್ದರೆ ರೋಗಿಗಳಾಗಿಬಿಡುತ್ತೀರಿ': ನಿರ್ಗಮಿತ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೂ ಮಾತನಾಡಲು ಬಿಡಿ, ನಿಮ್ಮಲ್ಲಿ ತಾಳ್ಮೆಯಿಲ್ಲದಿದ್ದರೆ ರೋಗಿಗಳಾಗಿಬಿಡುತ್ತೀರಿ': ನಿರ್ಗಮಿತ ಉಪ ...