ರಾಷ್ಟ್ರೀಯ ಯುವಜನೋತ್ಸವದಿಂದ ನಗರದಲ್ಲಿ ಪುಟ್ಟ ಭಾರತ ನಿರ್ಮಾಣ; ಸಾಂಸ್ಕೃತಿಕ ಸೊಬಗು ಸವಿದ 45 ಲಕ್ಷ ಜನ; ಕನ್ನಡದ ಕೀರ್ತಿ ಹೆಚ್ಚಿಸಿದ ಧಾರವಾಡಿಗರು: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ.

Source: SO News | By Laxmi Tanaya | Published on 19th January 2023, 10:07 PM | State News | Don't Miss |

ಧಾರವಾಡ :ರಾಷ್ಟ್ರೀಯ ಯುವಜನೋತ್ಸವವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಕನ್ನಡದ ಕೀರ್ತಿಯನ್ನು ಧಾರವಾಡಿಗರು ರಾಷ್ಟ್ರ ಮಟ್ಟಕ್ಕೆ ಎತ್ತರಿಸಿದ್ದಾರೆ. ಧಾರವಾಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ದೇಶದ ತುಂಬಾ ಪಸರಿಸಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆ ಮತ್ತು ಸಂತೋಷ ತಂದಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಅವರು  ನಗರದ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತವಾಗಿ ಕವಿವಿ ಮತ್ತು ಕೃವಿವಿ ಕುಲಪತಿ ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ದೇಶದ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವೈವಿಧ್ಯಮಯ ಕಲೆ, ಸಂಸ್ಕೃತಿಯನ್ನು  ಧಾರವಾಡದಲ್ಲಿ ಅನಾವರಣಗೊಳಿಸಿ ದೇಶದ ಏಕತೆ, ಸಮಗ್ರತೆ, ವೈವಿಧ್ಯತೆಯನ್ನು ಯುವಕರು ಮೆರೆದರು.

ಉತ್ತರದ ಕಾಶ್ಮೀರದಿಂದ ದಕ್ಷಿಣದ ಕೆರಳ, ತಮಿಳನಾಡು ವರೆಗೆ ವಿಭಿನ್ನ ಸಂಸ್ಕೃತಿ, ಭಾಷೆ ಇರುವ ರಾಷ್ಟ್ರದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಯುವ ಪ್ರತಿನಿಧಿಗಳು ಒಂದೆಡೆ ಸೇರಿ ಊಟ, ಉಪಹಾರ ಮಾಡಿ, ಪರಸ್ಪರ ಬೆರೆತು ಸಮಗ್ರತೆ, ಭಾವೈಕ್ಯತೆ, ಏಕತೆ ಎತ್ತಿ ಹಿಡಿದರು ಎಂದು ಧನ್ಯತೆಯಿಂದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನುಡಿದರು.

ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿನ ತೊಂದರೆ ಆಗಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಒಂದು ಮಹತ್ವದ ರಾಷ್ಟ್ರೀಯ ಉತ್ಸವ ಆಯೋಜಿಸುವಲ್ಲಿ ಇದು ಅನಿವಾರ್ಯ ಆಗಿತ್ತು. ವಿವಿ ವಿದ್ಯಾರ್ಥಿಗಳ ಸಹಕಾರದಿಂದ ಬೇರೆ ರಾಜ್ಯಗಳಿಂದ ಬಂದ ಅತಿಥಿಗಳಿಗೆ ಉತ್ತಮ ವಸತಿ ಕಲ್ಪಿಸಲು ಸಾಧ್ಯವಾಯಿತು.
ರಾಷ್ಟ್ರೀಯ ಯುವಜನೋತ್ಸವವು ಯುವ ಪ್ರತಿಭೆಗಳಿಗೆ ವೇದಿಕೆಯಾಗಿ, ಭಾರತದ ವೈಭವದ ದರ್ಶನ ಮಾಡಿತು. ಉತ್ಸವದ ಹಿನ್ನೆಲೆಯಲ್ಲಿ ನಡೆದ ಯೋಗಾಥಾನ್‍ದಲ್ಲಿ ಧಾರವಾಡ ಜಿಲ್ಲೆಯ ವಿವಿಧ ಆವರಣಗಳಲ್ಲಿ  ಸುಮಾರು 24 ಸಾವಿರ ಜನರು ಭಾಗವಹಿಸಿದ್ದರು. ಯುವಜನೋತ್ಸವ ಸಂದರ್ಭದಲ್ಲಿ ರಾಜ್ಯದಾದ್ಯಂತ ಆಯೋಜಿಸಿದ್ದ ಯೋಗ ಪ್ರದರ್ಶನವು ಹಿಂದಿನ ಯೋಗಾಥಾನ್  ಗಿನ್ನೆಸ್ ದಾಖಲೆಯನ್ನು ಮುರಿದು, ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಇದು ಕೂಡ ನಮ್ಮ ಜಿಲ್ಲೆಯ ಹೆಮ್ಮೆಯ ಸಾಧನೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ಲಾಸ್ಟಿಕ್ ಮುಕ್ತ ಹಾಗೂ ಮರುಬಳಕೆಯ ವಸ್ತುಗಳನ್ನು ಮಾತ್ರ ಉಪಯೋಗಿಸಿ,ಈ ಬಾರಿ ಹಸಿರು ಉತ್ಸವವನ್ನು ಆಚರಿಸಿರುವುದು ಹೆಮ್ಮೆಯ ಸಂಗತಿ, ಬೆಂಗಳೂರಿನ ಒಂದು ಆಡಿಟಿಂಗ್(ಪರಿಶೋಧನಾ) ಸಂಸ್ಥೆಯು ಇದನ್ನು ಪ್ರಮಾಣೀಕರಿಸಿದೆ ಎಂದರು.

ಯುವಜನೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯುವಶೃಂಗ ಸಭೆ ನಡೆದಿದೆ. ವಿವಿಧ ರಂಗಗಳ ಯುವಸಾಧಕರಿಂದಲೇ ಭಾಷಣ, ಚರ್ಚೆ ನಡೆದು ಯುವ ಜನರಿಗೆ ಸ್ಫೂರ್ತಿ ನೀಡಿದೆ ಎಂದರು.

ಯುವಜನೋತ್ಸವವನ್ನು ಖುದ್ದಾಗಿ ಪ್ರತಿದಿನ ಸಹಸ್ರಾರು ಜನ ವೀಕ್ಷಿಸಿದ್ದಾರೆ, ಜೊತೆಗೆ ವೆಬ್‍ಸೈಟ್ ಮೂಲಕ 45 ಲಕ್ಷಕ್ಕೂ ಹೆಚ್ಚು ಜನರು ಉತ್ಸವವನ್ನು ನೋಡಿದ್ದಾರೆ. ಜಿಲ್ಲೆಯ ಎಲ್ಲ ನಾಗರಿಕರು, ರಾಷ್ಟ್ರದ ಸಾಂಸ್ಕೃತಿಕ ಸೊಬಗನ್ನು ಸಂತೋಷದಿಂದ ಅನುಭವಿಸಿದ್ದಾರೆ. ಇದು ನಮ್ಮ ಪ್ರಯತ್ನಕ್ಕೆ ಸಿಕ್ಕ ಮೆಚ್ವುಗೆ ಆಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅವಳಿ ನಗರದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ನಂತಹ ವಿಶೇಷ ಜಲಸಾಹಸ ನಡೆದಿರುವುದು ಹೊಸ ಭರವಸೆ ಮೂಡಿಸಿದೆ. ದೇಶದ ಎಲ್ಲೆಡೆಯ ಕಲೆ ,ಸಾಹಸಗಳ ಪ್ರದರ್ಶನ ಜೊತೆಗೆ ಸ್ಥಳೀಯ ಕಲಾವಿದರಿಗೂ ಪ್ರತ್ಯೇಕ ವೇದಿಕೆ ಕಲ್ಪಿಸಿ,ಅವಕಾಶ ಕಲ್ಪಿಸಲಾಗಿದೆ.
ಯುವಕೃತಿ ಮೇಳದಲ್ಲಿ 200 ಕ್ಕೂ ಹೆಚ್ಚು ಮಳಿಗೆಗಳು, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಆಹಾರ, ಕಲೆ, ಉಡುಪು ವೈವಿಧ್ಯತೆಗಳನ್ನು ಒಂದೇ ಕಡೆ ನೋಡಲು, ಸವಿಯಲು ಅವಕಾಶ ದೊರೆತಿದೆ. 

ಈ ಅಪರೂಪದ ಆತಿಥ್ಯವನ್ನು ರಾಷ್ಟ್ರದ ಸಾಂಸ್ಕತಿಕ ಯುವ  ರಾಯಭಾರಿಗಳಿಗೆ ನೀಡಲು ಅವಕಾಶ ಕಲ್ಪಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಕೃತಜ್ಞತೆಗಳನ್ನು ಧಾರವಾಡ ಜಿಲ್ಲೆಯ ಪರವಾಗಿ ತಿಳಿಸಿದ ಜಿಲ್ಲಾಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲು ನಿರಂತರವಾಗಿ ಮಾರ್ಗದರ್ಶನ, ಸಹಕಾರ ನೀಡಿದ ಮುಖ್ಯಮಂತ್ರಿಗಳಿಗೆ, ಕೇಂದ್ರ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲೆಯ ಸಚಿವರಿಗೆ, ಶಾಸಕರು ಸೇರಿದಂತೆ ಎಲ್ಲ ಜನ ಪ್ರತಿನಿಧಿಗಳಿಗೆ ಹಾಗೂ ಕೇಂದ್ರ, ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳಿಗೆ ಮತ್ತು ಉತ್ತಮ ಪ್ರಾಚಾರ ನೀಡಿ, ಜನರಿಗೆ ಯುವಜನೋತ್ಸವ ಪರಿಚಯಿಸಿದ ಮಾಧ್ಯಮ ಪ್ರತಿನಿಧಿಗಳಿಗೆ, ಸಹಕಾರ ನೀಡಿದ ಅವಳಿನಗರದ ಮಹಾಜನತೆಗೆ ಜಿಲ್ಲಾಡಳಿತದಿಂದ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

ಗೌರವ ಸ್ವೀಕರಿಸಿದ ಕವಿವಿ ಕುಲಪತಿ ಡಾ.ಕೆ.ಬಿ.ಗುಡಸಿ ಅವರು ಮಾತನಾಡಿ, ಕೇವಲ 20 ದಿನಗಳಲ್ಲಿ ಅತ್ಯಂತ ದೊಡ್ಡಮಟ್ಟದ ರಾಷ್ಟ್ರೀಯ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸುವ ಮೂಲಕ ಧಾರವಾಡ ಜಿಲ್ಲಾಡಳಿತ ಕನ್ನಡದ ಕೀರ್ತಿಯನ್ನು ರಾಷ್ಟ್ರ ಮಟ್ಟಕ್ಕೆ ಹೆಚ್ಚಿಸಿದೆ ಎಂದು ಅಭಿಮಾನದ ನುಡಿಗಳನ್ನಾಡಿದರು.

ರಾಷ್ಟ್ರೀಯ ಕಾರ್ಯಕ್ರಮ ಯಶಸ್ವಿಗೊಳಿಸುವದರೊಂದಿಗೆ  ಧಾರವಾಡಿಗರ ಪ್ರಬುದ್ಧತೆ ತೋರಿದ್ದಾರೆ. ಭಾμÉ, ಸಂಸ್ಕøತಿ, ಉಡುಗೆತೊಡುಗೆ ವ್ಯತ್ಯಾಸಗಳಿದ್ದರೂ ಹಲವು ರಾಜ್ಯಗಳು ಏಕತೆ, ಸಮಗ್ರತೆ ಮೆರೆದಿದ್ದಾರೆ. ಇದರಿಂದ ಧಾರವಾಡಿಗರು ಸಹನಶೀಲರು, ವಿನಯಶೀಲರು, ಕಠಿಣ ಪರಿಶ್ರಮಿಗಳು ಎಂಬುದನ್ನುಸಾಬೀತು ಪಡಿಸಿದ್ದಾರೆ ಎಂದು ಕುಲಪತಿ ಡಾ.ಗುಡಸಿ ತಿಳಿಸಿದರು.

ಕೃಷಿ ವಿವಿ ಕುಲಪತಿ ಡಾ.ಪಿ.ಎಲ್. ಪಾಟೀಲ ಅವರು ಮಾತನಾಡಿ, ಉತ್ತರ ಕರ್ನಾಟಕದವರು ಮನಸ್ಸು ಮಾಡಿದರೆ ಎನೆಲ್ಲ ಸಾಧಿಸಬಹುದು. ಆ ಸಾಮಥ್ರ್ಯ, ಶಕ್ತಿ ಈ ಮೂಲಕ ಮತ್ತೊಮ್ಮೆ  ಸಾಬೀತಾಗಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಎಲ್ಲ ಅಧಿಕಾರಿಗಳನ್ನು ಒಂದು ತಂಡವಾಗಿಸಿ, ರಾತ್ರಿ ಹಗಲು ಶ್ರಮಿಸಿದ್ದಾರೆ. ಎರಡು ವಿಶ್ವವಿದ್ಯಾಲಯಗಳ ಸಿಬ್ಬಂದಿ, ಅಧಿಕಾರಿಗಳು ಅತ್ಯಂತ ಆತ್ಮೀಯ ಸಹಕಾರ ನೀಡಿ, ಯಶಸ್ವಿಯಾಗಿಸಿದ್ದಾರೆ. ಇಂತ ಅಪರೂಪದ ಉತ್ಸವ ನಡೆಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.

ಅತಿಥಿಗಳಾಗಿದ್ದ ರಾಜ್ಯ ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವಣಪ್ಪ ಅಷ್ಟಗಿ ಮಾತನಾಡಿ, ರಾಷ್ಟ್ರೀಯ ಯುವಜನೋತ್ಸವದ ರುಚಿಯನ್ನು ಧಾರವಾಡ ಜಿಲ್ಲೆಯ ಎಲ್ಲ ಜನ ಸವಿದಿದ್ದಾರೆ. ಸಾಂಸ್ಕøತಿಕ ನೆಲೆಯಾಗಿರುವ ಧಾರವಾಡಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತ್ರತ್ವದಲ್ಲಿ ಎಲ್ಲ ಅಧಿಕಾರಿಗಳು ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಸಂಘಟಿಸುವ ಮೂಲಕ ಮತ್ತೇ ಸಾಂಸ್ಕøತಿಕ ಚಿಲುಮೆಗೆ ಚೈತನ್ಯ ತುಂಬಿದ್ದಾರೆ.  ನಮ್ಮ ಜಿಲ್ಲೆಯ ಸಾಹಿತ್ಯ, ಸಂಸ್ಕøತಿ, ಕಲೆ, ಸಂಗೀತ ಪರಂಪರೆಗೆ ಯುವ ಅಧಿಕಾರಿ ಗುರುದತ್ತ ಮತ್ತಷ್ಟು ಜೀವಂತಿಕೆ ತುಂಬಿದ್ದಾರೆ ಎಂದು ಅಭಿಮಾನದಿಂದ ನುಡಿದರು.

ಕರ್ನಾಟಕ ರಾಜ್ಯ ಜಂಗಲ್ ರೆಸಾರ್ಟ್ ಸಂಸ್ಥೆ ಅಧ್ಯಕ್ಷ ರಾಜು ಕೋಟೆನ್ನವರ ಮಾತನಾಡಿ, ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಕಾರ್ಯಕ್ರಮ ಸಂಘಟಿಸುವದರೊಂದಿಗೆ ಸರಕಾರದ ವಿಶ್ವಾಸವನ್ನು ಜಿಲ್ಲಾಡಳಿತ  ಹೆಚ್ಚಿಸಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಒಂದು ತಂಡವಾಗಿ ಹಗಲಿರುಳು ಶ್ರಮಿಸಿ, ಜಿಲ್ಲೆಗೆ ಹೆಸರು ತಂದಿದ್ದಾರೆ. ಜಿಲ್ಲೆಯ ಎಲ್ಲ ಸಾರ್ವಜನಿಕರ ಪರವಾಗಿ ಕೃತಜ್ಞತೆ ತಿಳಿಸಿದರು. 

ಯುವಜನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಹುಡಾ ಆಯುಕ್ತ ಡಾ.ಸಂತೋಷ ಬಿರಾದಾರ ಸ್ವಾಗತಿಸಿದರು. ಕುಲಸಚಿವರಾದ ಯಶಪಾಲ ಕ್ಷೀರಸಾಗರ ಮತ್ತು ಶಿವಾನಂದ ಕರಾಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ತಹಸಿಲ್ದಾರ ಸಂತೋಷ ಹಿರೇಮಠ ವಂದಿಸಿದರು. ಗ್ರಾಮ ಆಡಳಿತ ಅಧಿಕಾರಿ ಸುವರ್ಣಾ ಚೀಟಿನ  ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಕೆಯುಐಡಿಎಫ್‍ಸಿ ಯ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಡೈಟ್ ಪ್ರಾಚಾರ್ಯರಾದ ಅಕ್ಕಮಹಾದೇವಿ ಬಸಾಪೂರ, ಕೆಸಿಡಿ ಪ್ರಾಚಾರ್ಯರಾದ ಡಾ. ಡಿ. ಬಿ ಕರಡೋಣಿ, ಡಾ.ಎಸ್.ಸಿ. ಚೌಗಲಾ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಎಸ್.ಕೆ.ಪವಾರ, ಯೋಗ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಎಸ್.ಟಿ.ಬಾಗಲಕೋಟಿ, ಇಂಜನಿಯರ್ ಗಿರೀಶ ಜೋಶಿ, ಉದ್ಯಾನ ಅಧಿಕಾರಿ  ಡಾ. ಮುಳುಗುಂದ, ಡಾ.ಎ.ಎನ್. ತಾಮ್ರಗುಂಡಿ, ಡಾ.ಸಂಗೀತಾ ಮಾನೆ, ಡಾ.ಎಸ್.ಆರ್.ಗಣಿ, ಡಾ.ಗುರುರಾಜ ಹಡಗಲಿ, ಡಾ.ಅನಿತಾ ಗುಡಿ, ಡಾ.ಜಗದೀಶ ಕಿವಡನ್ನವರ, ಡಾ.ಪುಷ್ಪಾ ಹೊಂಗಲ, ಡಾ.ಬಿ.ಬಿ. ಬಿರಾದರ, ಡಾ.ಶಿರಾಳಶಟ್ಟಿ ಮತ್ತು ಕೃವಿವಿ ಡಾ.ಕಿರೇಸೂರ, ಡಾ.ಎನ್.ಕೆ.ಬಿರಾದಾರ ಸೇರಿದಂತೆ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಗೌರವ ಸ್ವೀಕರಿಸಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...