ಭಟ್ಕಳದಲ್ಲಿ ದಂತ ಚಿಕಿತ್ಸಾ ಶಿಬಿರ; ಧೂಮಪಾನ ಗುಟಕಾ ಆರೋಗ್ಯವನ್ನು ಹದಗೆಡಿಸುತ್ತದೆ: ಡಾ.ಗಣೇಶ ಶೆಣೈ

Source: S O News Service | By I.G. Bhatkali | Published on 24th September 2017, 9:29 PM | Coastal News | Don't Miss |

ಭಟ್ಕಳ: ವಿದ್ಯಾರ್ಥಿಗಳು ದಂತ ಸಂರಕ್ಷಣೆ ಸೇರಿದಂತೆ ದೇಹದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಗುಟಕಾ, ಧೂಮಪಾನದ ಅಭ್ಯಾಸಗಳು ಆರೋಗ್ಯವನ್ನು ಹದಗೆಡಿಸುತ್ತದೆ ಎಂದು ಮಂಗಳೂರಿನ ಎನ್ನಾಪೋಯಾ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಗಣೇಶ ಶೆಣೈ ಹೇಳಿದರು.

 ಅವರು ಇಲ್ಲಿನ ಬಂದರೋಡ್ ಆಫ್ರಾ ಶಾದಿ ಮಹಲ್‍ನಲ್ಲಿ ದಿವಂಗತ ಸೈಫುಲ್ಲಾ ಶಾಬಂದ್ರಿ ಸ್ಮರಣಾರ್ಥ ಆಯೋಜಿಸಲಾದ ದಂತ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಊಟದ ಮೊದಲು ಹಾಗೂ ನಂತರ ಕೈ ಬಾಯಿ ತೊಳೆಯುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಡಾ.ನಾಜಿಯಾ ಸೈಫುಲ್ಲಾ ದಿವಂಗತ ತನ್ನ ತಂದೆಯ ಸ್ಮರಣಾರ್ಥ ಇಂತಹ ಶಿಬಿರವನ್ನು ಆಯೋಜಿಸುವುದರ ಮೂಲಕ ಇಲ್ಲಿನ ಸಂಸ್ಕøತಿಯನ್ನು ತ್ತಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು. ಪ್ರೊ.ನಾಗೇಶ ನಾಯ್ಕ ಮಾತನಾಡಿ, ಪ್ರತಿಯೊಬ್ಬರಿಗೂ ನೆಮ್ಮದಿಯ ಬದುಕು ಬಹಳ ಮುಖ್ಯವಾಗಿದೆ. ಇದಕ್ಕಾಗಿ ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಮಾ ಜದ ಬಗ್ಗೆ ಕಾಳಜಿಯನ್ನು ಹೊಂದುವುದು ಅತ್ಯಗತ್ಯವಾಗಿದೆ ಎಂದು ವಿವರಿಸಿದರು. ಇನಾಯಿತುಲ್ಲಾ ಶಾಬಂದ್ರಿ ಮಾತನಾಡಿ, ಜನರು ಅಗತ್ಯಕ್ಕಿಂತ ಹೆಚ್ಚಾಗಿ ವೈದ್ಯಕೀಯ ಚಕಿತ್ಸೆ ಪಡೆಯಲು ಖರ್ಚು ಮಾಡುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಪಡೆಯುವುದರ ಬಗ್ಗೆ ಜನರು ಆಲೋಚಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಮುರುಡೇಶ್ವರ ಹಾಗೂ ಹೊನ್ನಾವರದಲ್ಲಿ ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಡಾ.ನಾಜಿಯಾ ಶಾಬಂದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದಾಮುದಿ ಅಬ್ದುಲ್ಲಾ ಉಪಸ್ಥಿತರಿದ್ದರು. ರಬಿ ಕಾರ್ಯಕ್ರಮ ನಿರೂಪಿಸಿದರು.
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...