ಕಾರವಾರ: ಬಜಾರಕುಣಂಗ ಕುಗ್ರಾಮದ ಅಭಿವೃದ್ದಿಯ ಭರವಸೆ ಜಿಲ್ಲಾಧಿಕಾರಿ ಜನತಾ ದರ್ಶನ

Source: S O News | By I.G. Bhatkali | Published on 19th December 2023, 4:21 PM | Coastal News | Don't Miss |

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ತಾಲೂಕಾದ ಜೋಯಿಡಾದ ಕ್ಯಾಸಲ್‌ರಾಕ್ ಹೋಬಳಿಯ ಬಜಾರಕುಣಂಗ ಗ್ರಾಮ ಪಂಚಾಯತ್‌ನಲ್ಲಿನ ಗ್ರಾಮಸ್ಥರ ವಿವಿಧ ಸಮಸ್ಯೆಗಳನ್ನು ಆಲಿಸಿ,. ಆ ಗ್ರಾಮದ ಸರ್ವತೋಮುಖ ಅಭಿವೃಧ್ದಿಯ ಉದ್ದೇಶದಿಂದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರ ಜನತಾ ದರ್ಶನ ಕಾರ್ಯಕ್ರಮವು ಡಿಸೆಂಬರ್ 19 ರಂದು ಅಸುಳ್ಳಿ ಗ್ರಾಮದ ಗವಳಾದೇವಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪ್ರಮುಖ ಸಮಸ್ಯೆಗಳಾದ, ಮಾಲ್ಕಿ ಜಮೀನಿನಲ್ಲಿ ಬೆಳೆದ ಗಿಡಮರಗಳನ್ನು ಕಟಾವು ಮಾಡಲು ಅನುಮತಿ ನೀಡುವುದು, ಕುಂಬ್ರಿ ಜಮೀನಿನಲ್ಲಿ ನಾಗುವಳಿ ಮಾಡಲು ಅನುಮತಿ ನೀಡುವುದು, ಬಜಾರಕುಣಂಗ ಮುಖ್ಯ ರಸ್ತೆಯಿಂದ ಡಿಗ್ಗಿ ಹೋಗುವ ರಸ್ತೆಗೆ ಘಟ್ಟಾವ ಹಳ್ಳಕ್ಕೆ ರಸ್ತೆ ನಿರ್ಮಿಸುವ ಬಗ್ಗೆ, ಬಜಾರಕುಣಂಗ ಗ್ರಾಮ ಪಂಚಾಯತಿಯಲ್ಲಿ ಅವಶ್ಯವಿರುವ ಮುಖ್ಯ ರಸ್ತೆಗಳು/ಸೇತುವೆಗಳು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ. ಡಿಗ್ಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿಗಳ ವಸತಿಗಾಗಿ ವಸತಿ ಮನೆ ಮಂಜೂರಿ ಮಾಡುವ ಬಗ್ಗೆ, ಕಾರ್ಟೋಳ್ಳಿಯಿಂದ ಡಿಗ್ಗಿಯವರೆಗೆ ರಸ್ತೆ ಡಾಂಬರಿಕರಣ ಮಾಡುವ ಬಗ್ಗೆ, ಬಜಾರಕುಣಂಗದಿAದ ಡಿಗ್ಗಿ ಹೋಗುವ ಮುಖ್ಯ ರಸ್ತೆಯನ್ನು ಡಾಂಬರಿಕರಣ ಮಾಡುವ ಬಗ್ಗೆ, ಧುದಮಾಳ (ಸಕಲವಾಡಾ) ಅಂಗನವಾಡಿ ಶಾಲೆ ಮಂಜೂರಿ ಮಾಡುವ ಬಗ್ಗೆ, ಡಿಗ್ಗಿ ವೈಲ್ ವಾಡ ಗ್ರಾಮದಿಂದ ಶಾಲೆಗೆ ಬರುವ ದಾರಿಯಲ್ಲಿನ ನೇತುವೆ ವಿಸ್ತಾರ ಮಾಡುವ ಬಗ್ಗೆ, ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳ ರಸ್ತೆಯ ನಕಾಶೆ ನೀಡುವ ಬಗ್ಗೆ, ಕಾರ್ಟೋಳ್ಳಿಯಿಂದ ಪಣಸಗಾಳಿ ಡಿಗ್ಲಿವರೆಗೆ ರಸ್ತೆ ಡಾಂಬರಿಕರಣ ಮಾಡುವ ಬಗ್ಗೆ, ಶ್ರೀ ಗೌಳಾದೇವಿ ಮಾಯರೆ ರಸ್ತೆಗೆ ಸೇತುವೆ ನಿರ್ಮಾಣ ಮಾಡುವ ಬಗ್ಗೆ, ಯಂಗ ಸ್ಪರ ಕ್ಲಬ್ ಡಿಗ್ಗಿ ಕಾಳಿ ಮೈದಾನದಲ್ಲಿ ಸಭಾ ಭವನ ನಿರ್ಮಾನ ಮಾಡುವ ಬಗ್ಗೆ, ಶ್ರೀ ಗೌಳಾದೇವಿ ಕೆರೆ ಅಭಿವೃದ್ಧಿ ಮಾಡುವ ಬಗ್ಗೆ, ಡಿಗ್ಗಿಯಿಂದ ಬೊಂಡೆಲಿಗೆ ಹೋಗುವ ಹಳ್ಳಕ್ಕೆ ಬ್ರಿಜ್ ನಿರ್ಮಾಣ ಮಾಡುವ ಬಗ್ಗೆ, ಮ್ಹಾಯರೆ ಗ್ರಾಮದ ಸ.ಕಿ.ಪ್ರಾ.ಕ ಶಾಲೆಗೆ ಮೂಲ ಸೌಕರ್ಯ ಮತ್ತು ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡದ ಬಗ್ಗೆ ಡಿಗ್ಗಿ ಗ್ರಾಮದ ಸ.ಕಿ.ಪ್ರಾ.ಕ ಶಾಲೆಗೆ ಮೂಲ ಸೌಕರ್ಯ ಕುರಿತಂತೆ ಗ್ರಾಮದ ಎಲ್ಲಾ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿನ ಸಂಬAದಪಟ್ಟ ಇಲಾಖೆಗಳ ಅಧಿಕಾರಿಗಳ ತಂಡ ಸ್ಥಳದಲ್ಲೇ ಹಾಜರಿದ್ದು, ಗ್ರಾಮಸ್ಥರ ಬಹುಕಾಲದ ಸಮಸ್ಯೆಗಳಿಗೆ ಅಗತ್ಯ ಪರಿಹಾರ ಒದಗಿಸಲಿದ್ದಾರೆ.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಮನವಿಗಳನ್ನು ಆದ್ಯತೆಯ ನೆಲೆಯಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಈ ಹಿಂದೆ ಬನವಾಸಿಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಶೇ.94 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಎಲ್ಲಾ ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿರುವ ತಮ್ಮ ಇಲಾಖೆ ವ್ಯಾಪ್ತಿಯ ಸಮಸ್ಯೆಗಳನ್ನು ಮೊದಲೇ ಪರಿಶೀಲಿಸಿ, ಅವುಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಮಂಜೂರು ಮಾಡುವಂತೆ ಹಾಗೂ ಜನತಾ ದರ್ಶನ ಕಾರ್ಯಕ್ರಮ ಸದುದ್ದೇಶವನ್ನು ಕಾರ್ಯಗತಗೊಳಿಸುವಂತೆ ಸೂಚನೆ ನೀಡಲಾಗಿದೆ. : ಗಂಗೂಬಾಯಿ ಮಾನಕರ , ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...