ಹದಗೆಟ್ಟ ರಸ್ತೆ; ರಸ್ತೆ ತಡೆ ನಡೆಸಿದ ಹಳೆ ದಾಂಡೇಲಿ ನಿವಾಸಿಗಳು

Source: SOnews | By Staff Correspondent | Published on 11th January 2024, 5:19 PM | Coastal News |

ದಾಂಡೇಲಿ: ಹಳಿಯಾಳ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಹಳೆ ದಾಂಡೇಲಿಯಲ್ಲಿ ಮುಖ್ಯ  ರಸ್ತೆಯಲ್ಲಿ  ನೀರಿನ ಪೈಪ್ ಲೈನ ಕಾಮಗಾರಿ ಹಾಗೂ ಯುಜಿಡಿ  ಪೈಪಲೈನ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು ಇದಕ್ಕಾಗಿ ಮುಖ್ಯ ರಸ್ತೆಯನ್ನು ಅಗೆದು ಹಾಕಿದ ಪರಿಣಾಮ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು  ನಿತ್ಯ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕಾರಣ  ಬೇಸತ್ತ ಹಳೇ ದಾಂಡೇಲಿಯ ನಿವಾಸಿಗಳು  ಮಂಗಳವಾರ  ನಗರದ ಪಟೇಲ ವೃತ್ತದಲ್ಲಿ  ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಸುಮಾರ ಮೂರು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾ ನಿರಂತರು  ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಅನಂತರ ಸ್ಥಳಕ್ಕೆ ಆಗಮಿಸಿದ ಹಳಿಯಾಳದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರತಿಭಟನಾ ನಿರಂತರೊಂದಿಗೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ತೆರಳುವಂತೆ ಒತ್ತಾಯಿಸಿ ಜೊತೆಗೆ ಕರೆದುಕೊಂಡು ಕಾಮಗಾರಿ ಅವಾಂತರವನ್ನು ತೋರಿಸಿದರು.

ಜನವರಿ ಅಂತ್ಯಕ್ಕೆ ಸಂಪೂರ್ಣ ಕಾಮಗಾರಿ ಹಾಗೂ ರಸ್ತೆ ರಿಪೇರಿ ಕಾರ್ಯವನ್ನು ಮಾಡುವುದಾಗಿ ಲೋಕೋಪಯೋಗಿ ಇಲಾಖೆ ಅಭಿಯಂತರರಾದ ಸುಧಾರಕ ಕಟ್ಟಿಮನಿ ಭರವಸೆ ನೀಡಿ ನಂತರ  ಪ್ರತಿಭಟನೆ ಹಿಂದಕ್ಕೆ ಪಡೆದರು .

 
ಕಳೆದ 2 ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿದ್ದು ನವಂಬರ್ ಅಂತ್ಯದಲ್ಲಿ ಕೆಲಸ ಮುಗಿಸಿ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದ ಅಧಿಕಾರಿಗಳು ಜನವರಿ ಬಂದರೂ ರಸ್ತೆ ದುರಸ್ಥಿ ಮಾಡದ ಕಾರಣ ಹಳೆದಾಂಡೇಲಿ ನಿವಾಸಿಗಳು ತೀರ್ವ ತೊಂದರೆ  ಅನುಭವಿಸುವಂತಾಗಿದೆ.


ಈ ಕಾರವಾರ ಹಾಗೂ ಉಳವಿ ಸಂಪರ್ಕ ರಸ್ತೆಯಾಗಿದೆ.ಬಸ್ ಡಿಪೋ ಇರುವ ಕಾರಣ ಸಂಖ್ಯೆಯಲ್ಲಿ ಬಸ್ ಗಳು ಸಂಚರಿಸುವದರಿಂದ ರಸ್ತೆಯ ಪಕ್ಕದಲ್ಲಿರುವ ಮನೆ, ಅಂಗಡಿಯವರು ಧೂಳಿನೊಂದಿಗೆ ಕಾಲ ಕಳೆಯಬೇಕಾಗಿದೆ ಸ್ಥಿತಿ ಉಂಟಾಗಿದೆ.
ಈ ದೂಳಿನ ಸಮಸ್ಯೆಯಿಂದ ಕೆಮ್ಮು-ಕಫದಿಂದ ಬಳಲುತಿದ್ದು ಆರೋಗ್ಯದ ಮೇಲೆ ಪರಿಣಾಮ ಬಿರಿದೆ ಹಾಗೂ  ನಿತ್ಯದ ಕೆಲಸಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಹಳೆ ದಾಂಡೇಲಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಸಮಯದಲ್ಲಿ  ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಹಾಗೂ ತಹಶೀಲ್ದಾರ ಶೈಲೇಶ ಪರಮಾನಂದ ಸ್ಥಳೀಯರ ಸಮಸ್ಯೆಯನ್ನು ಆಲಿಸಿ ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕರ ಅಭಿಯಂತರ ಅವರಿಗೆ ಪೋನ್ ಮೂಲಕ ಸಂಪರ್ಕಿಸಿ  ಸೋಮವಾರದಿಂದ ರಸ್ತೆ ದುರಸ್ಥಿ ಮಾಡುವ ಕಾಮಾಗಾರಿಯನ್ನು ಪ್ರಾರಂಭಿಸಬೇಕು ಸೂಚನೆ ನೀಡಿದರು ಆದರೆ ಮಂಗಳವಾರವಾದರೂ ರಸ್ತೆ  ದುರಸ್ತಿ ಮಾಡದ ಕಾರಣ ಇಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ನಿವಾಸಿಗಳಾದ ಆರೀಫ್  ಖಾಜಿ, ಅನ್ವರ ಪಟಾನ, ವಿಷ್ಣು ಕಾಮತ್,ವಿನೋದ್ ಬಾಂದೇಕರ, ರಾಜೇಂದ್ರ ಕೊಡ್ಕಣಿ, ಇಲಿಯಾಸ್ ಅಹ್ಮದ್, ಅಫ್ತಾಬ್ ಖಾಜಿ,ಸರ್ಫರಾಜ್ ಬಾಬು ಮುಲ್ಲಾ, ಇಮ್ತಿಯಾಜ್ ಸೈಯದ್, ತೌಫಿಕ್ ಸೈಯದ್ ಇದ್ದರು.

Read These Next