ಮಳಖೇಡಕ್ಕೆ ಹರಿದು ಬಂತು ಜನಸಾಗರ: ತಂಡೋಪತಂಡವಾಗಿ ಹಾಡುತ್ತಾ-ಕುಣಿಯುತ್ತಾ ಬಂದ ಲಂಬಾಣಿ ಮಹಿಳೆಯರು

Source: SO News | By Laxmi Tanaya | Published on 19th January 2023, 9:48 PM | State News | Don't Miss |

ಕಲಬುರಗಿ :  ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮಕ್ಕೆ ಅಮೋಘವರ್ಷ ನೃಪತುಂಗನ ನಾಡು ಮಳಖೇಡಕ್ಕೆ ಗುರುವಾರ ಜನಸಾಗರವೇ ಹರಿದು ಬಂತು.

ಮುಂಜಾನೆ ನಡುಗುವ ಚಳಿ ಆವರಿಸಿ, ಮಧ್ಯಾಹ್ನ ನೆತ್ತಿಯ ಸುಡುವ ಬಿಸಿಲು ಕಲಬುರಗಿ ಜಿಲ್ಲೆಯಲ್ಲಿತ್ತು.  ಇದರ ನಡುವೆ ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕು ಮಳಖೇಡದಲ್ಲಿ ಸುಡುವ ಬಿಸಿಲನ್ನೂ ಲೆಕ್ಕಿಸದೆ,  ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಣ್ಣಾರೆ ಕಂಡು, ಅವರ ಮಾತುಗಳನ್ನು ಆಲಿಸಲು ಸಾಗರೋಪಾದಿಯಲ್ಲಿ ಜನ ಮಳಖೇಡನತ್ತ ಪ್ರಯಾಣ ಬೆಳೆಸಿದರು.
ಅಲೆಮಾರಿ ಬದುಕಿನಲ್ಲಿ ಖಾಯಂ ಸೂರಿಲ್ಲದೆ ಸಂಕಟ ಎದುರಿಸುತ್ತಿದ್ದ ಲಂಬಾಣಿ, ಹಾಡಿ, ಹಟ್ಟಿ ಮುಂತಾದ ಪ್ರದೇಶಗಳ ಜನರಿಗೆ ಸಂಕಷ್ಟ ಕೊನೆಗಾಣಿಸಿ, ಅವರಿಗೂ ಶಾಶ್ವತ ಸೂರು ಕಲ್ಪಿಸಲು ಸರ್ಕಾರ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿಸಿದ್ದರಿಂದ ಬಡ ಅಲೆಮಾರಿ ಸಮುದಾಯಕ್ಕೆ ನೆಲೆಯ ಹಕ್ಕುಪತ್ರ ಪಡೆಯಲು ಸಾಧ್ಯವಾಗಿದೆ.  ಸರ್ಕಾರ ಒಂದೇ ವೇದಿಕೆಯಲ್ಲಿ 5 ಜಿಲ್ಲೆಗಳ 372 ಗ್ರಾಮಗಳ 52,072 ಜನರಿಗೆ ಹಕ್ಕುಪತ್ರ ವಿತರಿಸುವ ಐತಿಹಾಸಿಕ ಹಾಗೂ ದಾಖಲೆಯ ಕಾರ್ಯಕ್ರಮವನ್ನು ಏರ್ಪಡಿಸಿ, ಶತಮಾನಗಳ ಕಾಲ ಅಲೆಮಾರಿಗಳಾಗಿದ್ದವರಿಗೆ ಬದುಕು ಕಟ್ಟಿಕೊಡುವ ಅಪೂರ್ವ ಹಾಗೂ ಶ್ಲಾಘನೀಯ ಕಾರ್ಯ ಮಾಡಿದೆ.
ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಮಳಖೇಡಕ್ಕೆ ಆಗಮಿಸುತ್ತಿದ್ದ ಲಂಬಾಣಿ ಸಮುದಾಯದ ಜನ ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ತಮ್ಮದೇ ಶೈಲಿಯ ಹಾಡುಗಳನ್ನು ಹಾಡುತ್ತ, ವಾದ್ಯಮೇಳಗಳೊಂದಿಗೆ, ನೃತ್ಯ ಮಾಡುತ್ತಾ, ಹಬ್ಬದ ವಾತಾವರಣದೊಂದಿಗೆ ಆಗಮಿಸಿ, ಸಂಭ್ರಮಿಸಿದ್ದು ಕಂಡುಬಂದಿತು.

 ಹುಡುಗರು ಕೈಯಲ್ಲಿ ಸೇವಾಲಾಲ ಮಹಾರಾಜರ ಮತ್ತು ಜೈ ಭವಾನಿ ಮಾತೆಯ ಧ್ವಜ ಹಿಡಿದುಕೊಂಡು ತಮ್ಮ ಆರಾಧ್ಯದೈವ ಸೇವಾಲಾಲ ಮಹಾರಾಜರನ್ನು ಸ್ಮರಿಸುತ್ತಾ ವೇದಿಕೆ ಕಡೆ ಹೆಜ್ಜೆ ಹಾಕಿದರು.

ಇದರಿಂದ ಮಳಖೇಡ ಗ್ರಾಮದಲ್ಲಿ ಸಂಪೂರ್ಣ ಹಬ್ಬ ಮತ್ತು ಸಂಭ್ರಮದ ಮನೆ ಮಾಡಿತ್ತು. ವೇದಿಕೆ, ಊಟದ ಮೈದಾನ, ಕಲಬುರಗಿ-ಸೇಡಂ ರಸ್ತೆ ಹೀಗೆ ಎಲ್ಲೆಡೆ ಜನವೋ ಜನ. ಪ್ರಧಾನಿ, ಮುಖ್ಯಮಂತ್ರಿಗಳ ಸ್ವಾಗತಕ್ಕೆ ಕಟೌಟ್ ಗಳ ರಾರಾಜಿಸಿದ್ದವು.

ಊಟಕ್ಕೆ ಪಲಾವ್, ಮೈಸೂರು ಪಾಕ್: ವಾಗ್ಧರಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ-10ಕ್ಕೆ ಹೊಂದಿಕೊಂಡಂತೆ ಸ್ಥಾಪಿಸಲಾದ ದಿ. ರವಿ ಬಿರಾದಾರ ಮರಗೋಳ ಪಾಕ್ ಶಾಲೆಯಲ್ಲಿ ಸಾರ್ವಜನಿಕರಿಗೆ, ಫಲಾನುಭವಿಗಳಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. 

ಪಲಾವ್, ಕಡ್ಲೆಕಾಯಿ, ಸಾರು, ಮಜ್ಜಿಗೆ, ಅರ್ಧ ಲೀಟರ್ ಕುಡಿಯುವ ನೀರಿನ ಜೊತೆಗೆ ರುಚಿಯಾದ ಮೈಸೂರು ಪಾಕ್ ನೀಡಲಾಯಿತು. ಎಲ್ಲೆಡೆ ಶುಚಿತ್ವ ಕಾಪಾಡಿಕೊಂಡಿದ್ದು ವಿಶೇಷ. 200 ಊಟದ ಕೌಂಟರ್ ಸ್ಥಾಪಿಸಲಾಗಿತ್ತು, ಪ್ರತಿ ಕೌಂಟರ್‍ಗೆ ಪೆÇಲೀಸ್, ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಿದ್ದರಿಂದ ಯಾವುದೆ ತೊಂದರೆ ಆಗಲಿಲ್ಲ. 
ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಆದ್ಯತೆ: ಊಟ ಮಾಡಿದ ತಟ್ಟೆ, ನೀರಿನ ಬಾಟಲ್ ತೆಗೆಯುವಲ್ಲಿ ಸ್ವಚ್ಚತಾ ಸಿಬ್ಬಂದಿ ನಿರತರಾಗಿದ್ದರು. ಸ್ವಚ್ಛತಾ ವಾಹನಗಳು ಎಲ್ಲೆಡೆ ತಿರುಗತ್ತಾ ಕಸ ತೆಗೆಯುವಲ್ಲಿ ನಿರತರಾಗಿದ್ದವು. ಪೌರ ಕಾರ್ಮಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಇದಲ್ಲದೆ ಕುಡಿಯುವ ನೀರಿನ ಸಮಾನ್ಯ ತೊಟ್ಟಿಗಳ ವ್ಯವಸ್ಥೆ, ಬಯೋ ಟಾಯಲಟ್ ವ್ಯವಸ್ಥೆ ಸಹ ಮಾಡಲಾಗಿತ್ತು. ಒಟ್ಟಾರೆ ಲಕ್ಷಾಂತರ ಜನ ಸೇರುವಿಕೆ ನಡುವೆಯೂ ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಇಲ್ಲಿ ಕಂಡುಬಂತು.

ಸುಗಮ ಸಂಚಾರ, ಖಾಕಿ ಸರ್ಪಗಾವಲು: ಮಳಖೇಡಕ್ಕೆ 5 ಜಿಲ್ಲೆಗಳ ಲಕ್ಷಾಂತರ ಜನ ಬಂದರೂ ಎಲ್ಲಿಯೂ ರಸ್ತೆ ಜಾಮ್ ಅಗಲಿಲ್ಲ. ಕಲಬುರಗಿ-ಸೇಡಂ ರಸ್ತೆಯಲ್ಲಿ ಸಂಚಾರ ಮಾರ್ಗವನ್ನು ಎಸ್.ಪಿ. ಇಶಾ ಪಂತ್ ಅವರು ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮೊದಲೇ ಪರ್ಯಾಯ ಮಾರ್ಗದ ಸಂಚಾರದ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ಸಮಸ್ಯೆ ಕಂಡುಬರಲಿಲ್ಲ. 
ಕಲಬುರಗಿ ಮತ್ತು ಬೆಳಗಾವಿ ಐ.ಜಿ.ಪಿ., ಕಲಬುರಗಿ ಎಸ್.ಪಿ., ನಾಗನಹಳ್ಳಿ ಪಿ.ಟಿ.ಸಿ. ಎಸ್.ಪಿ. ಸೇರಿದಂತೆ 9 ಜನ ಐ.ಪಿ.ಎಸ್ ಅಧಿಕಾರಿಗಳು, 13 ಡಿ.ಎಸ್ಪಿ, 30 ಸಿಪಿಐ, 108 ಪಿ.ಎಸ್.ಐ., 1,200 ಪೇದೆ, 16 ಕೆಎಸ್.ಆರ್.ಪಿ. ತುಕಡಿ, 6 ಡಿಎಆರ್ ತುಕುಡಿಗಳು ಸೇರಿ ಹೆಚ್ಚುರಿಯಾಗಿ ಗರುಡಾ ಫೆÇೀರ್ಸ್ ಸಹ ಬಂದೋ ಬಸ್ತ್ ಗೆ ನಿಯೋಜಿಸಲಾಗಿತ್ತು

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...