ಬಿಜೆಪಿ ಟಿಕೆಟ್ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣ; ಒಡಿಶಾದಲ್ಲಿ ಹಾಲಶ್ರೀ ಬಂಧನ

Source: Vb | By I.G. Bhatkali | Published on 20th September 2023, 7:42 AM | Coastal News | State News |

ಬೆಂಗಳೂರು: ಬಿಜೆಪಿ ಟಿಕೆಟ್ ಹೆಸರಿ ನಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣದ ಆರೋಪಿ ಹೊಸ ಪೇಟೆಯ ಹಿರೇಹಡಗಲಿಯ ಅಭಿನವ ಹಾಲಶ್ರೀ ಮಠದ ಹಾಲವೀರಪ್ಪ ಸ್ವಾಮೀಜಿ ಒಡಿಶಾದಲ್ಲಿ ಸಿಸಿಬಿ ಪೊಲೀ ಸರ ಕೈಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಭಯದಲ್ಲಿ ಖಾವಿ ಬಟ್ಟೆ ತೆಗೆದು ಟೀ- ಶರ್ಟ್ ಧರಿಸಿ ಸಾಮಾನ್ಯನಂತೆ ರೈಲಿನಲ್ಲಿ ಅಡ ಗಿದ್ದ ಮಾಹಿತಿ ಹೊರಬಿದ್ದಿದೆ.

ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸಿದ್ದ ಪ್ರಕರಣದ ಆರೋಪಿ ಹಾಲವೀರಪ್ಪ ಸ್ವಾಮೀಜಿ ಸಹ ದೂರುದಾರರಿಂದ 1.50 ಕೋಟಿ ರೂ. ಪಡೆದಿರುವ ಆರೋಪವಿದ್ದು, ಇದು ಬೆಳಕಿಗೆ ಬಂದ ಬೆನ್ನಲ್ಲೇ ಸ್ವಾಮೀಜಿ ತಲೆಮರೆಸಿಕೊಂಡಿದ್ದರು.

ಅದರಂತೆ ಮಠದಿಂದ ಸ್ವಾಮೀಜಿ ಮೈಸೂರಿಗೆ ಹೋಗಿ ಅಲ್ಲಿನ ಮಠವೊಂದರಲ್ಲಿ ಒಂದು ರಾತ್ರಿ ಕಳೆದು ನಂತರ ಕಾರು ಚಾಲಕನಿಂದ ನಾಲ್ಕು ಹೊಸ ಸಿಮ್‌ಗಳು ಹಾಗೂ ತಲೆಮರೆಸಿಕೊಳ್ಳಲು ಖರ್ಚಿಗೆ ಬೇಕಾದಂತಹ ಹಣವನ್ನು ತರೆಸಿಕೊಂಡಿದ್ದರು. ನಂತರ ಮೈಸೂರಿನಿಂದ ಹೈದರಾಬಾದ್‌ಗೆ ಹೋಗಿ ಅಲ್ಲಿಂದ ಶ್ರೀಶೈಲಕ್ಕೆ ತೆರಳಿದ್ದು, ಅಲ್ಲಿಂದಲೂ ಜಾಗ ಬದಲಿಸಿ ಒಡಿಶಾಕ್ಕೆ ಹೋಗಿದ್ದಾರೆ.

ಪ್ರತಿಯೊಂದು ಮೊಬೈಲ್ ಕರೆಗೂ ಮೊಬೈಲ್ ಸಿಮ್ ಬದಲಿಸುತ್ತಿದ್ದರು. ಒಂದು ಸಿಮ್ ಬಳಸಿದ ನಂತರ ಆ ಸಿಮ್ ಅನ್ನು ಮತ್ತೆ ಬಳಸುತ್ತಿರಲಿಲ್ಲ. ಹಾಗಾಗಿ ಇವರ ಬಂಧನ ಪೊಲೀಸರಿಗೆ ತಲೆನೋವಾಗಿತ್ತು. ಬಳಿಕ ತನಿಖಾಧಿಕಾರಿಗಳು ಸ್ವಾಮೀಜಿಯ ಕಾರು ಚಾಲಕನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸ್ವಾಮೀಜಿಯ ಬಗ್ಗೆ ಕೆಲವೊಂದು ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

ಹಾಲಶ್ರೀ ಸ್ವಾಮೀಜಿ ಕರ್ನಾಟಕದ ಆಪ್ತರೊಬ್ಬರಿಗೆ ಕರೆ ಮಾಡಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ವಿಶೇಷ ತಂಡ ಒಡಿಶಾಗೆ ಹೋಗಿತ್ತು. ಅದು ಗೊತ್ತಾಗುತ್ತಿದ್ದಂತೆ, ಸ್ವಾಮೀಜಿ ಭುವನೇಶ್ವರದಿಂದ ಭೋದ್ ಗಯಾಗೆ ರೈಲಿನಲ್ಲಿ ತೆರಳುತ್ತಿದ್ದರು. ಈ ಮಾಹಿತಿ ಸಿಗುತ್ತಿದ್ದಂತೆ,

ರೈಲು ಪ್ರಯಾಣದ ವೇಳೆಯಲ್ಲೇ ಸ್ವಾಮೀಜಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಮಂಗಳವಾರ ವಿಶೇಷ ತಂಡದ ಸಿಬ್ಬಂದಿ, ಸ್ವಾಮೀಜಿಯನ್ನು ಬೆಂಗಳೂರಿಗೆ ಕರೆತಂದು ಇಲ್ಲಿನ ಶಿವಾಜಿಗನರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ವಶಕ್ಕೆ ಪಡೆಯಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read These Next

ಜು.21 ರಿಂದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಿಂದ ಚಾತುರ್ಮಾಸ್ಯ ವೃತಾಚರಣೆ ಆರಂಭ

ಭಟ್ಕಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ...

ಅಂಕೋಲಾ ಗುಡ್ಡ ಕುಸಿದು ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ; ಸರ್ಕಾರದಿಂದ ಘೋಷಣೆ

ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5ಲಕ್ಷ ರೂ.ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ...

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತೆಯಾದ ಆಯೇಷಾ ಖಾನಂ ಅಧಿಕಾರ ಸ್ವೀಕಾರ

ಬೆಂಗಳೂರು: ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತೆಯಾದ ಆಯೇಷಾ ಖಾನಂ ಅವರು ಅಧಿಕಾರ ಸ್ವೀಕರಿಸಿದರು.