ಭೀಮಾ ಕೋರೆಗಾಂವ್ ಪ್ರಕರಣ - ಬಂಧಿತ ಹೋರಾಟಗಾರರ ಲ್ಯಾಪ್‌ಟಾಪ್‌ನಲ್ಲಿ ಹ್ಯಾಕರ್‌ಗಳ ಮೂಲಕ ಸಾಕ್ಷ್ಯ ಸೇರಿಸಲಾಗಿತ್ತು; ದಿ ವಾಶಿಂಗ್ಟನ್ ಪೋಸ್ಟ್ ವರದಿ

Source: VB News | By S O News | Published on 11th February 2021, 9:22 PM | National News |

ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಹೋರಾಟಗಾರರು ಹಾಗೂ ಬುದ್ದಿಜೀವಿಗಳ ವಿರುದ್ಧದ ಪ್ರಮುಖ ಸ್ನಾಕ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದ ಲ್ಯಾಪ್‌ಟಾಪ್‌ನಲ್ಲಿ ಮಾಲ್ವೇರ್ ಬಳಸಿ ಇರಿಸಲಾಗಿತ್ತು ಎಂದು ಫೋರೆನ್ಸಿಕ್ ವರದಿಯಿಂದ ತಿಳಿದು ಬಂದಿರುವುದಾಗಿ 'ದಿ ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಅಮೆರಿಕ ಮೂಲದ ಡಿಜಿಟಲ್ ಫೋರೆನ್ಸಿಕ್  ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್ ವರದಿಯಿಂದ ತಿಳಿದು ಬಂದಂತೆ ಹ್ಯಾಕರ್‌ಗಳ ಮೂಲಕ ಮಾಲ್ವೇರ್ ಅನ್ನು ಬಳಸಿ ಹೋರಾಟಗಾರ ರೋನಾ ವಿಲ್ಸನ್  ಅವರ  ಲ್ಯಾಪ್‌ಟಾಪ್‌ನಲ್ಲಿ ಕನಿಷ್ಠ ಹತ್ತು ಪತ್ರಗಳನ್ನು ಅವರ ಬಂಧನಕ್ಕಿಂತ ಮೊದಲೇ ಇರಿಸಲಾಗಿತ್ತು. ಬಂದೂಕು ಮತ್ತು ಶಸ್ತ್ರಾಸ್ತ್ರಗಳ ಅಗತ್ಯತೆಯ ಕುರಿತು ಹಾಗೂ ಪ್ರಧಾನಿ ಮೋದಿಯ ಹತ್ಯೆ ನಡೆಸುವಂತೆ ನಿಷೇಧಿತ, ಮಾವೋವಾದಿ ಗುಂಪಿಗೆ ವಿಲ್ಸನ್ ಮಾವೋವಾದಿಯೊಬ್ಬರಿಗೆ ಪತ್ರ ಬರೆದು ಆಗ್ರಹಿಸಿದ್ದರು ಹಾಗೂ ಆ ಪತ್ರ ಅವರ ಕಂಪ್ಯೂಟರಿನಿಂದ ದೊರಕಿತ್ತು ಎಂದು ಪೊಲೀಸರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪತ್ರ ಸಹಿತ ಹಲವು ಪತ್ರಗಳನ್ನು ಮಾಲ್ವೇರ್  ಬಳಸಿ ವಿಲ್ಸನ್ ಅವರ ಲ್ಯಾಪ್‌ಟಾಪ್‌ನ ಫೋಲ್ಡರ್ ಒಂದರಲ್ಲಿ ಇರಿಸಲಾಗಿತ್ತು ಎಂದು ಆರ್ಸೆನಲ್ ವರದಿ ಹೇಳಿದೆ.

ಈ ಸೈಬರ್ ದಾಳಿಯ ಹಿಂದೆ ಯಾರಿದ್ದಾರೆಂದು ವರದಿಯಲ್ಲಿ ಹೇಳಿಲ್ಲವಾದರೂ ವಿಲ್ಸನ್ ಒಬ್ಬರೇ ಈ ರೀತಿಯ ಸೈಬರ್ ದಾಳಿಯ ಬಲಿಪಶುವಲ್ಲ ಎಂದು ಹೇಳಿದೆ. ಇದೇ ಹ್ಯಾಕರ್ ಅದೇ ಸರ್ವರ್ ಮತ್ತು ಐಪಿ ಅಡ್ರೆಸ್ ಬಳಸಿ ಈ ಪ್ರಕರಣದ ಇತರ ಆರೋಪಿಗಳನ್ನು ನಾಲ್ಕು ವರ್ಷ ಅವಧಿಯಲ್ಲಿ ಟಾರ್ಗೆಟ್ ಮಾಡಿದ್ದಾನೆ ಎಂದು ವರದಿ ಹೇಳಿದೆ. ವಿಲ್ಸನ್ ಅವರ ಲ್ಯಾಪ್ ಟಾಪ್ ಅನ್ನು 22 ತಿಂಗಳಿಗೂ ಸ್ವಲ್ಪ ಹೆಚ್ಚು ಸಮಯ ಟಾರ್ಗೆಟ್ ಮಾಡಲಾಗಿತ್ತು ಎಂದು ವರದಿ ಹೇಳಿದೆ. ಲ್ಯಾಪ್ಟಾಪ್ನ ಇಲೆಕ್ಟ್ರಾನಿಕ್ ಕಾಪಿಯನ್ನು ವಿಲ್ಸನ್ ಅವರ ವಕೀಲರುಗಳ ಮನವಿಯಂತೆ ಆರ್ಸೆನಲ್ ಪರಿಶೀಲಿಸಿತ್ತು. ಸಂಸ್ಥೆ ನೀಡಿದ ವರದಿಯನ್ನು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಅಪೀಲಿನ ಜತೆಗೆ ವಿಲ್ಸನ್ ಅವರ ವಕೀಲರು ಲಗತ್ತಿಸಿದ್ದು ಅವರ ವಿರುದ್ಧದ ಪ್ರಕರಣ ಕೈಬಿಡಬೇಕೆಂದು ಕೋರಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...