ಭಟ್ಕಳ: ನ.10ರ ಒಳಗೆ ಭಟ್ಕಳ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ; ಫರ್ವೇಜ್, ಕೈಸರ್‍ಗೆ ಪಟ್ಟ ಬಹುತೇಕ ಖಚಿತ

Source: S.O. News Service | By V. D. Bhatkal | Published on 23rd October 2020, 10:15 PM | Coastal News |

ಭಟ್ಕಳ: ಪುರಸಭೆ ಹಾಗೂ ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆ ಆಯ್ಕೆಗೆ ಸಂಬಂಧಿಸಿದಂತೆ ನೀಡಿದ್ದ ತಡೆಯಾಜ್ಞೆಯನ್ನು ಗುರುವಾರ ಹೈಕೋರ್ಟ ತೆರವುಗೊಳಿಸಿದ್ದು, ಭಟ್ಕಳ ಪುರಸಭೆಯ ಮೇಲೆ ಕವಿದಿದ್ದ ಕಾರ್ಮೋಡ ಸರಿದಂತಾಗಿದೆ. 

ಭಟ್ಕಳ ಪುರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿಟ್ಟಿರುವುದರಿಂದ ಸಹಜವಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಪುರಸಭೆಯಲ್ಲಿ ಮಜ್ಲಿಸೇ ಇಸ್ಲಾವ ತಂಜೀಮ್ ಪ್ರಾಬಲ್ಯ ಇದ್ದ ಕಾರಣ ತಂಜೀಮ್ ಮುಖಂಡರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆ ಆಯ್ಕೆಗೆ ಸಂಬಂಧಿಸಿದಂತೆ ತಮ್ಮೊಳಗೇ ಚರ್ಚೆ ನಡೆಸಿದ್ದರು. ಆದರೆ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಆಯ್ಕೆಗೆ ಸಂಬಂಧಿಸಿದಂತೆ ನೀಡಲಾಗಿದ್ದ ತಡೆಯಾಜ್ಞೆ ಮುಂದುವರೆದ ಕಾರಣ ಗುರುವಾರ 2 ಗಂಟೆಗೆ ನಿಗದಿಯಾಗಿದ್ದ ಆಯ್ಕೆ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ಮುಂದೂಡುವುದಾಗಿ ತಹಸೀಲ್ದಾರರು ಬುಧವಾರ ಸಂಜೆಯಷ್ಟೇ ಪ್ರಕಟಣೆ ಹೊರಡಿಸಿದ್ದರು. ಇದೀಗ ಹೈಕೋರ್ಟ ತಡೆಯಾಜ್ಞೆಯನ್ನು ತೆರವುಗೊಳಿಸಿರುವುದರಿಂದ ಹೊಸದಾಗಿ ದಿನಾಂಕವನ್ನು ನಿಗದಿಪಡಿಸುವುದು ಅನಿವಾರ್ಯವಾಗಿದೆ. 

ಫರ್ವೇಜ್ ಅಧ್ಯಕ್ಷ, ಕೈಸರ್ ಉಪಾಧ್ಯಕ್ಷ:
ಈ ಬಾರಿ ಪುರಸಭಾ ಅಧ್ಯಕ್ಷ ಹುದ್ದೆಯನ್ನು ಮಾಜಿ ಅಧ್ಯಕ್ಷ ಫರ್ವೇಜ್ ಕಾಶೀಮ್‍ಜಿ ಹಾಗೂ ಉಪಾಧ್ಯಕ್ಷ ಹುದ್ದೆಯನ್ನು ಕೈಸರ್ ಮೋತೆಶಮ್ ಅಲಂಕರಿಸುವುದು ಬಹುತೇಕ ಖಾತರಿಯಾಗಿದೆ ಎಂದು ತಂಜೀಮ್ ಮೂಲಗಳು ತಿಳಿಸಿವೆ. ಅಧ್ಯಕ್ಷ ಹುದ್ದೆಗೆ ಹಿರಿಯ ಧುರೀಣ ಆಲ್ತಾಫ್ ಖರೂರಿ ಹಾಗೂ ಉಪಾಧ್ಯಕ್ಷ ಹುದ್ದೆಗೆ ಹಿರಿಯ ಸದಸ್ಯ ರವೂಫ್ ನಾಯಿತೇ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಫರ್ವೇಜ್ ಕಾಶೀಮ್‍ಜಿ ಹಾಗೂ ಕೈಸರ್ ಮೊತೇಶಮ್ ಪರವಾಗಿ ತಂಜೀಮ್‍ನ ಹೆಚ್ಚಿನ ಸದಸ್ಯರು ಒಲವು ವ್ಯಕ್ತಪಡಿಸಿರುವುದರಿಂದ, ಇವರಿಬ್ಬರ ಮುಂದಿನ ಹಾದಿ ಸುಗಮವಾಗಲಿದೆ ಎಂದು ತರ್ಕಿಸಲಾಗುತ್ತಿದೆ. 

Read These Next

ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...

ಉ.ಕ.ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಹಕ್ಕು ಹೋರಾಟಗಾರ ಆಗ್ರಹ

ಶಿರಸಿ : ರಾಜ್ಯ ಸರ್ಕಾರದ ಅಧಿಸೂಚನೆ ನಿರ್ಲಕ್ಷಿಸಿ ಅರಣ್ಯ ವಾಸಿಗಳು ಸಾಗುವಳಿ ಮಾಡುತ್ತಿರುವ ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿ ಪ್ರದೇಶ ...