ಶಿರೂರು ಟೋಲಗೇಟಲ್ಲಿ ಭಟ್ಕಳ ಪ್ರವಾಸಿ ವಾಹನಗಳಿಗೆ ತೊಂದರೆ. ರೌಡಿಯಂತೆ ವರ್ತಿಸುತ್ತಿರುವ ಸಿಬ್ಬಂದಿಗಳು. ಪ್ರವಾಸಿ ಕಾರು ಚಾಲಕರ ಸಂಘದ ಆರೋಪ.

Source: SO News | By Laxmi Tanaya | Published on 26th October 2020, 4:43 PM | Coastal News |

ಭಟ್ಕಳ : ಭಟ್ಕಳ ಗಡಿಯಲ್ಲಿರುವ ಟೋಲ್ ಗೇಟಿನಲ್ಲಿ ಕಾರು ಚಾಲಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಭಟ್ಕಳದ ಪ್ರವಾಸಿ ಕಾರು ಚಾಲಕ ಮತ್ತು ಮಾಲಕರ ಸಂಘ ಆಗ್ರಹಿಸಿದೆ.

ಈ ಬಗ್ಗೆ ಕಂಪನಿಯ ಅಧಿಕಾರಿಗಳಿಗೆ ಮನವಿ ನೀಡಿದ ಸಂಘದ ಮುಖಂಡರು, ಈ ಹಿಂದೆ ಐಆರ್ಬಿ ಅಧಿಕಾರಿಗಳೊಂದಿಗೆ ನಮ್ಮ ಯುನಿಯನ್ ದವರು ಮಾತನಾಡಿದಾಗ ಭಟ್ಕಳದ ನಮ್ಮ ವಾಹ‌ನಗಳಿಗೆ ರೂ. 40 ಪಡೆಯುವುದಾಗಿ ಹೇಳಿದ್ದರು. ಆದರೆ   ಶಿರೂರು ಟೋಲಗೇಟ್  ಸಿಬ್ಬಂದಿಗಳು ಪಾಲಿಸದೇ ಇರುವುದರಿಂದ ತೊಂದರೆಯಾಗುತ್ತಿದೆ.

ಟೋಲ್ ಗೇಟಲ್ಲಿ ಸಿಬ್ಬಂದಿಗಳ ನೂನ್ಯತೆ ಎದ್ದು ಕಾಣುತ್ತಿದೆ. ಭಟ್ಕಳ ತಾಲೂಕಿನ ಟ್ಯಾಕ್ಸಿ ವಾಹನಗಳಿಗೆ ರೂ. 40/- ಬದಲು ಕ್ಯಾಸ್ ತುಂಬಲು ಹೋದಾಗ ರೂ. 75/- ಪಡೆಯುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ, ವಾಹನ ಹಿಂದಕ್ಕೆ ತೆಗೆಯಲು ಹೇಳುತ್ತಾರೆ. ಕಾರಣ ಅಷ್ಟೊಂದು ವಾಹನದ ಮುಂದೆ ಹೇಗೆ ಹಿಂದಕ್ಕೆ ಬರಲು ಆಗುತ್ತದೆಯೇ ಎಂಬ ಕಾಮನ್‌ಸೆನ್ಸ್ ಇರುವುದಿಲ್ಲ. ಹೀಗಾಗಿ ಭಟ್ಕಳದ ಟ್ಯಾಕ್ಸಿ ವಾಹನಕ್ಕೆ ಕ್ಯಾಶ್ ಕೌಂಟರ್‌ದಲ್ಲಿಯೂ ರೂ. 40/- ಕ್ಯಾಶ್ ಪಡೆಯಲು ತಾವು ಇಂದಿನಿಂದಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ‌.

ನಗದು ಟ್ರಾಕ್ ಮತ್ತು ಪಾಸ್ಟ್ಯಾಗ್ ಟ್ರಾಕ್ ಇರುವ ಕುರಿತು 1000 ಅಥವಾ 500 ಮೀಟರ ಹಿಂದೆ ಏಕೆ ಬೋರ್ಡ್ ಹಾಕಲಿಲ್ಲ. ಹೀಗಾಗಿ ಕೂಡಲೇ 500 ಮೀಟರ್  ಹಿಂದೆ ಬೋರ್ಡ್  ಅಳವಡಿಸಬೇಕು.

ತಮ್ಮ ಕಂಪನಿಯ ಟೋಲ್‌ಗೇಟ್‌ದಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ನಮ್ಮ ಟ್ಯಾಕ್ಸಿ ಚಾಲಕರಿಗೆ ನೆರವು ಕೊಡದೇ ಅಸಭ್ಯವಾಗಿ ರೌಡಿಗಳ ತರಹ ವರ್ತಿಸುತ್ತಾರೆ. ಈ ಕೂಡಲೇ ಅವರಿಗೆ ಸರಿಯಾಗಿ
ಗೌರವದಿಂದ ಕರ್ತವ್ಯ ಸಲ್ಲಿಸಲು ತಿಳಿಸಬೇಕು. ಇನ್ನು ಇಂತಹ ದೂರು ಬಂದಲ್ಲಿ ನ 9886424784 ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಮನವಿ ನೀಡಿದ್ದಾರೆ.

ಸಂಘದ ಉಪಾಧ್ಯಕ್ಷರಾದ ಫೈಸಲ್ ಪಿರ್ಜಾದೆ, ಖಲೀಲ್, ಫಯಾಜ್, ಇಲಿಯಾಸ್, ಪೈರೋಜ್ , ಮಹೇಶ, ರವಿ, ರಮೇಶ ಮತ್ತು ಇತರ ಚಾಲಕರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...