ಭಟ್ಕಳ ಪುರಸಭಾ ಚುನಾವಣೆಗೆ ಇಂದು ಅಧಿಸೂಚನೆ

Source: S.O. News Service | By V. D. Bhatkal | Published on 9th May 2019, 12:26 AM | Coastal News |

ಭಟ್ಕಳ: ಭಟ್ಕಳ ಪುರಸಭಾ ಚುನಾವಣೆಗೆ ಗರುವಾರ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಶಾಂತಿಯುತವಾಗಿ ಮತದಾನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ ಎನ್.ಬಿ.ಪಾಟೀಲ್ ಹೇಳಿದರು.

ಅವರು ಬುಧವಾರ ಸಂಜೆ ತಹಸೀಲ್ದಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ 12133 ಗಂಡು ಹಾಗೂ 11787 ಹೆಣ್ಣು ಸಏರಿದಂತೆ 23920 ಮತದಾರರಿದ್ದಾರೆ. ಇಲ್ಲಿ ಒಟ್ಟೂ 23 ವಾರ್ಡುಗಳಿದ್ದು, 4 ಸಹಾಯಕ ಮತಗಟ್ಟೆ ಸೇರಿದಂತೆ ಒಟ್ಟೂ 27 ಮತಗಟ್ಟೆಗಳನ್ನು ತೆರೆಯಲಾಗುತ್ತದೆ.

3 ಚುನಾವಣಾಧಿಕಾರಿಗಳೊಂದಿಗೆ ಮೂವರು ಸಹಾಯ ಚುನಾವಣಾಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಪುರಸಭಾ ಕಾರ್ಯಾಲಯದ 2ನೇ ಮಹಡಿಯಲ್ಲಿ ಚುನಾವಣಾಧಿಕಾರಿಗಳ ಕಾರ್ಯಾಲಯವನ್ನು ತೆರೆಯಲಾಗಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಗರಿಷ್ಠ 1.50 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬರುವ ವ್ಯಕ್ತಿಯು ಮೀಸಲಾತಿಗೆ ಅನುಸಾರವಾಗಿ ಯಾವುದೇ ವಾರ್ಡಿನಲ್ಲಿ ಸ್ಪರ್ಧಿಸಬಹುದಾಗಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ವಾರ್ಡಿನ ಮತದಾರರು ಸೂಚಕರಾಗಿರಬೇಕಾಗಿರುವುದು ಕಡ್ಡಾಯವಾಗಿದೆ. ನಾಮಪತ್ರ ಸಲ್ಲಿಸಲು ಬಯಸುವ ಅಭ್ಯರ್ಥಿಯು ರು.100ರ ಮುಖಬೆಲೆ ಇ-ಸ್ಟಾಂಪ್ ಪೇಪರ್‍ನಲ್ಲಿ ಆಫಿಡೇವಿಟ್ ಸಲ್ಲಿಸಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ರು.1000 ಹಾಗೂ ಪರಿಶಿಷ್ಟ ಜಾತಿ, ಪ.ಪಂಗಡ, ಇತರೇ ಹಿಂದುಳಿದ ಅಭ್ಯರ್ಥಿಗಳ ರು.500 ಅಭ್ಯರ್ಥಿ ಶುಲ್ಕವನ್ನು ಭರಣ ಮಾಡಬೇಕು.

ತಿಂಗಳ ಎರಡನೆಯ ಶನಿವಾರವೂ ಚುನಾವಣಾ ಕಾರ್ಯ ನಡೆಯಲಿದೆ. ಮೇ16 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಮೇ.17ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಮೇ.29ರಂದು ಮತದಾನ ಹಾಗೂ ಮೇ.31ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ವಿವರಿಸಿದರು.

Bhatkal Tahsildar N B Paatil, Full Press meet Video

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...