ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಕೋಣಗಳ ಸಾಗಾಟ:ಆರೋಪಿಗಳ ಬಂಧನ

Source: so news | By MV Bhatkal | Published on 17th June 2021, 8:37 PM | Coastal News |

ಭಟ್ಕಳ:ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ನಲ್ಲಿ ಬೊಲೆರೊ ವಾಹಯ ಯೊಂದರಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕೋಣಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ‌ಪೋಲಿಸರು ವಶಕ್ಕೆ ಪಡೆದು ಕೋಣಗಳನ್ನು ರಕ್ಷಿಸಿದ ಘಟನೆ ನಡೆದಿದೆ.
ಚೆಕ್‌ ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ
ಸುಮಾರು 27 ಸಾವಿರದ  ಮೌಲ್ಯದ 2 ಕಪ್ಪು ಬಣ್ಣದ ಕೋಣಗಳನ್ನು ಹಾಗೂ ಆಕಳು ಕರುವನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಬೊಲೆರೊ ವಾಹಯಲ್ಲಿದ್ದವರನ್ನು ವಿಚಾರಿಸಿದಾಗ ಕೋಣಗಳನ್ನು ಸಾಗಾಟ ಮಾಡಲು ಯಾವುದೇ ಪರವಾನಿಗೆ ಇಲ್ಲದಿರುವುದು ತಿಳಿದು ಬಂದಿದ್ದು,ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಹಿಂಸ್ಮಾತಕವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಭಟ್ಕಳ ಬದ್ರಿಯಾ ಕಾಲೋನಿಯ ಅಬ್ದುಲ್ ಖಾದರ ಶಫಿ ಅಹ್ಮದ ಬೆಳಗಾಂ ಮತ್ತು ಹೆಬಳೆ ಪಿದೋಶ ನಗರದ ಅಬ್ದುಲ್ ಬಾಯಿಸ್ ಅಬ್ದುಲ್ ಬಾಂದ್ ಅಕ್ಟರ್‌
ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳನ್ನು ಹಾಗೂ ವಾಹನಯನ್ನು ವಶಕ್ಕೆ ಪಡೆದಿದ್ದು ಕೋಣಗಳನ್ನು ರಕ್ಷಿಸಲಾಗಿದೆ.ಈ ಕುರಿತು ಗ್ರಾಮೀಣ ಠಾಣೆಯ ಪಿ.ಎಸ್.ಐ ಭರತ ಕುಮಾರ್ ವಿ.ದೂರು ನೀಡಿದ್ದು ಹೆಡ್ಕಾ ನ್‌ಸ್ಟೆಬಲ್ ಮಹೇಶ್ ಜೆ ಪಟಾಗಾರ ಗೋ ಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡ ತನಿಖೆ ಕೈಗೊಂಡಿದ್ದಾರೆ‌.

 

Read These Next

ಕಾರವಾರ: ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಧನಂಜಯ ಹೆಗಡೆ ಅವರಿಗೆ ಬೀಳ್ಕೊಡುಗೆ

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಧನಂಜಯ ಹೆಗಡೆ ಅವರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸನ್ಮಾನಿಸಿ ಬೀಳ್ಕೊಡುಗೆ ...