ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಬೆಳ್ಳಿವರ್ಷದ ಸಂಭ್ರಮ

Source: S O News service | By Staff Correspondent | Published on 24th October 2016, 5:35 PM | Coastal News | Don't Miss |


ಭಟ್ಕಳ: ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ೨೦೧೭ರಲ್ಲಿ ೨೫ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಇದರ ಸವಿ ನೆನಪಿಗಾಗಿ ೨೦೧೭ನೆ ಇಸವಿಯನ್ನು ಬೆಳ್ಳಿಹಬ್ಬದ ವರ್ಷವನ್ನಾಗಿ ಆಚರಿಸಲು ತೀರ್ಮಾನಿಸಿದ್ದು ಈ ಕುರಿತು ವಿಶೇಷ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷ ರಾಧಕೃಷ್ಣ ಭಟ್ ತಿಳಿಸಿದರು. 

ಅವರು ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ನಡದ ಸರ್ವಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. 

೧೯೯೩ನೇ ಇಸವಿ ಜನವರಿಯಲ್ಲಿ ಉದ್ಘಾಟನೆಯಾದ ಸಂಘ ೨೪ ವರ್ಷಗಳನ್ನು ಯಶಸ್ವೀಯಾಗಿ ಪೂರೈಸಿ ೨೫ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಬೆಳ್ಳಿಹಬ್ಬದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ನಂತರ ಇಡೀ ವರ್ಷದ ಪ್ರತಿ ತಿಂಗಳೂ ಒಂದೊಂದು ಕಾರ್ಯಕ್ರಮದಂತೆ ೧೨ ಕಾರ್ಯಕ್ರಮಗಳನ್ನು ನಡೆಸಿ ೨೦೧೮ರ ಜನವರಿಯಲ್ಲಿ ಬೆಳ್ಳಿ ವರ್ಷಾಚರಣೆಯ ಸಮಾರೋಪ ಸಮಾರಂಭವನ್ನು ನಡೆಸಲಾಗುವುದು ಸಮಾರಂಭಕ್ಕೆ ನಾಡಿನ ಖ್ಯಾತ ಸಾಹಿತಿಗಳು, ವಿವಿಧ ಕ್ಷೇತ್ರದ ವಿದ್ವಾಂಸರನ್ನು ಆಹ್ವಾನಿಸಲಾಗುವುದು ಎಂದರು. 

ಬೆಳ್ಳಿ ಹಬ್ಬ ಆಚರಣೆಯ ಹಾಗೂ ವಿವಿಧ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ಸಮಾಜದ ವಿವಿಧ ಕ್ಷೇತ್ರದ  ಗಣ್ಯರನ್ನು ಸೇರಿಸಿಕೊಂಡುಸಮಿತಿಗಳನ್ನು ರಚಿಸಿ ಅರ್ಥಪೂರ್ಣ ಆಚರಣೆಯನ್ನು ಮಾಡಲು ತೀರ್ಮಾನಿಸಿದ್ದು, ಸಂಘದ ವತಿಯಿಂದ ತಾಲೂಕಿನ ಗ್ರಾಮವೊಂದನ್ನು ದತ್ತು ತೆಗೆದುಕೊಂಡು ಬೆಳ್ಳಿಹಬ್ಬದ ಸವಿನೆನಪಿಗಾಗಿ ಗ್ರಾಮದಲ್ಲಿ ಅಗತ್ಯದ ಮೂಲ ಭೂತ ಸೌಕರ್ಯ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ವಿಧದದಲ್ಲಿಯೂ ಕೂಡಾ ನೆರವು ನೀಡಲು ಚಿಂತಿಸಲಾಗಿದೆ ಎಂದೂ ತಿಳಿಸಲಾಗಿದೆ. 

ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಸಂಘದ ವತಿಯಿಂದ ಉತ್ತಮ ದರ್ಜೆಯ ಸ್ಮರಣ ಸಂಚಿಕೆಯೊಂದನ್ನು ಕೂಡಾ ಹೊರ ತರಲು ನಿರ್ಧರಿಸಲಾಗಿದ್ದು ಸ್ಮರಣ ಸಂಚಿಕೆಯಲ್ಲಿ ವಿವಿಧ ರೀತಿಯ ಲೇಖನಗಳು, ಭಟ್ಕಳ ತಾಲೂಕಿಗೆ ಸಂಬಂಧ ಪಟ್ಟಂತೆ ಚಿತ್ರಗಳು,  ಜನ ಜೀವನ ಇತ್ಯಾದಿಗಳ ಕುರಿತು ವಿವರಣೆಗಳನ್ನೊಳಗೊಂಡಿದ್ದು ಕನ್ನಡ ಹಾಗೂ ಉರ್ದು ವಿಭಾಗವನ್ನು ಹೊಂದಿರುತ್ತದೆ. 

ಬೆಳ್ಳಿ ಹಬ್ಬದ ಪ್ರಯುಕ್ತ ಹಿರಿಯ ಪತ್ರಕರ್ತರು ಸೇರಿದಂತೆ ಸಮಾಜದ ೨೫ ಜನರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದ್ದು, ಪತ್ರಕರ್ತರಿಗಾಗಿ ಸಮಾಜದ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಲೂ ಕೂಡಾ ಚಿಂತನೆ ನಡೆಸಲಾಗಿದೆ.  ಬೆಳ್ಳಿಹಬ್ಬದ ವರ್ಷದಿಂದಲೇ ದತ್ತಿ ನಿಧಿ ಪ್ರಶಸ್ತಿ ನೀಡಲು  ಆರಂಭಿಸಲೂ ಕೂಡಾ ಚಿಂತನೆ ನಡೆಸಲಾಗಿದೆ ಎಂದೂ ತಿಸಲಾಗಿದೆ.  ಇದೇ ಬರುವ ೨೦೧೭ರ ಜನವರಿಯಲ್ಲಿ ಬೆಳ್ಳಿ ಹಬ್ಬ ಸಮಾರಂಭದ ಉದ್ಘಾಟನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಿದ್ದು ಅಂದೇ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಭಟ್ಕಳದ ಜನತೆಗೆ ಸಾಂಸ್ಕೃತಿಕ ಸಿಂಚನ ನೀಡುವ ಕುರಿತು ನಿರ್ಧರಿಸಲಾಗಿದೆ. 

ಸಭೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಹೆಬ್ಬಾರ್,  ಪ್ರಧಾನ ಕಾರ್ಯದರ್ಶಿ ಭಾಸ್ಕರ ನಾಯ್ಕ, ಹಿರಿಯ ಉಪಾಧ್ಯಕ್ಷ ಎಂ. ಆರ್. ಮಾನ್ವಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಫಯ್ಯಾಜ್ ಮುಲ್ಲಾ, ಭವಾನಿಶಂಕರ ನಾಯ್ಕ, ಅನ್ಸಾರ್ ಅಝೀಜ್ ನದ್ವಿ, ಸೈಯದ್ ಅಹಮ್ಮದ್ ಸಾಲಿಕ್, ಪ್ರಸನ್ನ ಭಟ್, ರಾಘವೇಂದ್ರ ಮಲ್ಯ ಮುಂತಾದವರು ಉಪಸ್ಥಿತರಿದ್ದರು. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...