ಭಟ್ಕಳ: ಭವಿಷ್ಯದಲ್ಲಿ ನೀರಿಗಾಗಿಯಾದರೂ ಮರಗಳನ್ನು ಬೆಳೆಸಿ-ಗೌಡ

Source: sonews | By Staff Correspondent | Published on 27th July 2017, 8:01 PM | Coastal News | Don't Miss |

ಭಟ್ಕಳ: ಭವಿಷ್ಯದಲ್ಲಿ ಅತಿ ಪ್ರಚಲಿತ ವಿಷಯವಾಗಿ ನಿರಿನ ಸಮಸ್ಯೆಯೇ ಉದ್ಭವಿಸುವದರಿಂದ ಸಾರ್ವಜನಿಕರು ಮುಂಜಾಗೃತೆವಹಿಸಿ ಮರಗಳನ್ನು ಬೆಳೆಸುವ ಮೂಲಕ ಭವಿಷ್ಯದ ಅಪಾಯದಿಂದ ಪಾರಾಗಬೇಕೆಂದು ಹಾಡವಳ್ಳಿ  ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಎಂ.ಡಿ ಪಾರ್ಶ್ವನಾಥ ಗೌಡ ಕರೆ ನೀಡಿದರು. 
ಅವರು ಹಾಡವಳ್ಳಿ ಇಲಾಖೆ ವಿಶ್ರಾಂತಿ  ಗೃಹ ಕುಮದ್ವತಿಯಲ್ಲಿ  ಜರುಗಿದ ಸಸಿ ವಿತರಣಾ  ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಇಂದು ವಿತರಿಸುವ ಸಸಿ ನೆಟ್ಟು ಪೋಷಿಸಿದವರ ಮನೆ-ಮನ ಬೆಳಗಲಿ ಆ ಮೂಲಕ ಕಾಡು-ಉಳಿಸಿ ಬೆಳೆಸುವ ಇಲಾಖೆ ಕಾರ್ಯಕ್ಕೆ ಅಳಿಲು ಸೇವೆ ಸಲ್ಲುವಂತಾಗಲಿ ಎಂದು ಆಶಿಸಿದರು. 
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಾಡವಳ್ಳಿ  ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಕರಿಯಪ್ಪ ನಾಯ್ಕ, “ಪಾಲಿಸಿದರೆ ಪಾಲು” ಎಂಬ ಧ್ಯೇಯ ವಾಕ್ಯ ಹೊಂದಿರುವ ಗ್ರಾಮ ಅರಣ್ಯ ಸಮಿತಿಗೆ ಗುರುತರರವಾದ ಜವಾಬ್ದಾರಿಯಿದೆ. ನೂರಾರು ಹೆಕ್ಟರ್‌ಗಳ ಕಾಡು, ವನ್ಯ ಜೀವಿಗಳು ಮತ್ತು ಜೀವ ವೈವಿದ್ಯತೆಗಳ ರಕ್ಷಣೆ ಬೆರಳಣಿಕೆಯ ಸಿಬ್ಬಂಂದಿಗಳಿಂದ ರಕ್ಷಣೆ ಅಸಾಧ್ಯವಾಗಿದೆ. ಸದಸ್ಯರು ನಾಗರೀಕರಲ್ಲಿ ಪ್ರಜ್ಞೆ ಮೂಡಿಸಿ ಕಾಡು ರಕ್ಷಣೆ ಜೊತೆಗೆ ಅರಣ್ಯ ಬೆಳೆದು ಲಾಭಾಂಶದಲ್ಲಿ ಪಾಲು ಪಡೆದುಕೊಳ್ಳುವಂತೆ ತಿಳಿಸಿದರು. 
ವೇದಿಕೆಯಲ್ಲಿ ಉಪ-ವಲಯಾರಣ್ಯಾಧಿಕಾರಿ ಜಯಂತ ಕಾಂಚ್ರೀಕರ, ಗ್ರಾಮ ಪಂಚಾಯತ ಲೆಕ್ಕ ಸಹಾಯಕ ವಾಸು ಬಿ., ಅರಣ್ಯ ಇಲಾಖೆಯ ರಾಮ ನಾಯ್ಕ, ಗ್ರಾಮಸ್ಥರ ಪರವಾಗಿ ಗಜಾನನ ಭಟ್ ಮಾತನಾಡಿದರು. 
ಅರಣ್ಯ ರಕ್ಷಕ ಮೃತ್ಯುಂಜಯ  ಸ್ವಾಗತಿಸಿ ಕೊನೆಯಲ್ಲಿ  ವಂದಿಸಿದರು. 


 

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...