ಭಟ್ಕಳ ಪುರಸಭೆ ಕಲ್ಲು ತೂರಾಟ; ರಾಮಸೇನೆಯ ಶಂಕರ್ ನಾಯ್ಕ ಬಂಧನ

Source: sonews | By Staff Correspondent | Published on 21st September 2017, 6:57 PM | Coastal News | State News | Don't Miss |

ಭಟ್ಕಳ: ಪ್ರತಿಭಟನೆಯ ವೇಳೆ ಪುರಸಭಾ ಕಟ್ಟದ ಮೇಲೇ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆಯಲ್ಲಿ ದಿನೆ ದಿನೆ ಹೆಚ್ಚಳವಾಗುತ್ತಿದ್ದು ಗುರುವಾರ ರಾಮಸೇನೆ ಉತ್ತರ ಪ್ರಾಂತ ವಕ್ತಾರ ಶಂಕರ್ ನಾಯ್ಕ ಚೌಥನಿ ಹಾಗೂ ಮುಂಡಳ್ಳಿಯ ದೇವೆಂದ್ರ ನಾಯ್ಕ ಎಂಬುವವರನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾಗಿ ವರದಿಯಾಗಿದೆ. 
ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ೧೫ಜನರನ್ನು ಬಂಧಿಸಿದ್ದು ಇನ್ನೂ ೫೦ಕ್ಕೂ ಹೆಚ್ಚು ಜನರ ಬಂಧನವಾಗಬೇಕಿದೆ ಎಂದು ತಿಳಿದುಬಂದಿದೆ. ರಾಜಕೀಯ ನಾಯಕರು, ಸಮಾಜದ ಮುಖಂಡರು ಉತ್ತರಕನ್ನಡ ಜಿಲ್ಲಾದ್ಯಂತ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಂಘಪರಿವಾರದವರನ್ನು ಬಂಧಿಸದಿರುವ ಪೊಲೀಸರ ಮೇಲೆ ಒತ್ತಡ ಹೇರಿದ ಬೆನ್ನಲ್ಲೆ ಈ ಬಂಧನ ನಡೆದಿದೆ. 
ಬಂಧಿತನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಹೇಳಲಾಗುತ್ತಿದೆ. 

Read These Next

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...