ಭಟ್ಕಳದಲ್ಲಿ ನೀರಸ ಮತದಾನ: 50.74% ದಾಖಲು

Source: S O News Service | By I.G. Bhatkali | Published on 29th May 2019, 11:33 PM | Coastal News |

ಭಟ್ಕಳ: ಭಟ್ಕಳ ಪುರಸಭೆಯ 11 ವಾರ್ಡುಗಳ ಸದಸ್ಯರ ಆಯ್ಕೆಗಾಗಿ ಬುಧವಾರ ನಡೆದ ಚುನಾವಣೆಯಲ್ಲಿ 50.74% ಮತದಾನ ದಾಖಲಾಗಿದೆ.

ಒಂದೆರಡು ಕಡೆ ನಡೆದ ಮಾತಿನ ಚಕಮಕಿಯನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿತ್ತು. ಬೆಳಿಗ್ಗೆ ಮತಗಟ್ಟೆಯಲ್ಲಿ ಸ್ವಲ್ಪ ಉತ್ಸಾಹ ಕಂಡು ಬಂದಿದ್ದರೆ, ನಂತರದ ಅವಧಿ ನೀರಸವಾಗಿತ್ತು. ರಮಜಾನ್ ಉಪವಾಸ ಹಾಗೂ ಬಿರು ಬೇಸಿಗೆಯಿಂದಾಗಿ ಹೆಚ್ಚಿನ ಮತದಾರರು ಮತಗಟ್ಟೆಗೆ ಬರಲು ಹಿಂದೇಟು ಹಾಕಿದರು. ಭಟ್ಕಳ ಪುರಸಭೆಯ 23 ವಾರ್ಡುಗಳ ಪೈಕಿ ಈಗಾಗಲೇ 12 ವಾರ್ಡುಗಳಲ್ಲಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 11 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ 27 ಜನರು ಕಣದಲ್ಲಿ ಇದ್ದಾರೆ. ಮತಗಟ್ಟೆ ವ್ಯಾಪ್ತಿಯಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.

ಮತದಾನ ವಿವರಗಳು ಕೆಳಗಿವೆ:

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...