ಭಟ್ಕಳ ಪುರಸಭಾ 21 ಅಂಗಡಿ ಹರಾಜು ಪ್ರಕ್ರಿಯೆ ಮುಂದೂಡಿಕೆ; ಹರಾಜು ನಡೆಸಲು ಸದಸ್ಯರ ಪಟ್ಟು ; ಹಿಂದೆ ಸರಿದ ಅಧಿಕಾರಿಗಳು

Source: S O News service | By V. D. Bhatkal | Published on 23rd October 2021, 10:34 AM | Coastal News |

ಭಟ್ಕಳ: ಅ.25ರಂದು ನಿಗದಿಯಾಗಿದ್ದ ತಾಲೂಕಿನ ಪುರಸಭಾ ವ್ಯಾಪ್ತಿಯ 21 ಅಂಗಡಿಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಲು ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಆದೇಶ ನೀಡಿದ್ದಾರೆ. ಆದರೆ ಯಾವಾಗ ಹರಾಜು ಪ್ರಕ್ರಿಯೆ ನಡೆಸಬೇಕು ಎನ್ನುವ ಬಗ್ಗೆ ಆದೇಶದಲ್ಲಿ ತಿಳಿಸದ ಕಾರಣ ಮತ್ತೆ ವಿವಾದ ಭುಗಿಲೆದ್ದಿದ್ದು, ಸೋಮವಾರ ಇದಕ್ಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತರೊಂದಿಗೆ ಚರ್ಚಿಸಲು ಶನಿವಾರ ಸಂಜೆ ನಡೆದ ತುರ್ತು ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಂಗಡಿ ಹರಾಜಿಗೆ ಈ ಹಿಂದೆ ಇದ್ದ ಅಂಗಡಿಕಾರರ ವಿರೋಧ ಇದೆ, ದೀಪಾವಳಿ ಆಚರಣೆಯೂ ಸದ್ಯದಲ್ಲಿಯೇ ಇದ್ದು, ಅ.25ರಂದು ಹರಾಜು ಪ್ರಕ್ರಿಯೆ ನಡೆಸುವುದರಿಂದ ಒಟ್ಟಾರೆಯಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವ

ಹೈಕೋರ್ಟ ಆದೇಶದಂತೆ  ಅ.25ರಂದು 21 ಅಂಗಡಿ ಮಳಿಗೆಗಳ ಹರಾಜು ನಡೆಸಲು ಪುರಸಭಾ ಆಡಳಿತ ನಿರ್ಣಯಿಸಿತ್ತು. ಆದರೆ ಹರಾಜು ಪ್ರಕ್ರಿಯೆಯನ್ನು ಮುಂದೂಡುವಂತೆ ಸಹಾಯಕ ಆಯುಕ್ತರು ಆದೇಶ ನೀಡಿದ್ದಾರೆ. ಆದರೆ ಯಾವಾಗ ನಡೆಸಬೇಕು ಎನ್ನುವುದಿಲ್ಲ ತಿಳಿಸಿಲ್ಲ. ಇದು ಗೊಂದಲಕ್ಕೆ ಕಾರಣವಾಗಿದೆ.
  - ಫರ್ವೇಜ್ ಕಾಶೀಮ್‍ಜಿ, ಅಧ್ಯಕ್ಷರು, ಪುರಸಭೆ ಭಟ್ಕಳ

ಸಾಧ್ಯತೆ ಇದೆ, ಪೊಲೀಸರು ಹರಾಜು ಪ್ರಕ್ರಿಯೆಗೆ ರಕ್ಷಣೆ ಒದಗಿಸಲು ಹಿಂದೇಟು ಹಾಕಿರುವುದರಿಂದ ಹರಾಜು ಪ್ರಕ್ರಿಯೆಯನ್ನು ಮುಂದೂಡುವಂತೆ ಸಹಾಯಕ ಆಯುಕ್ತರು ಆದೇಶ ನೀಡಿದ್ದು, ಆ ಬಗ್ಗೆ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಉಪಾಧ್ಯಕ್ಷ ಕೈಸರ್ ಮೊತೇಶಮ್, ಸ್ಥಾಯಿ ಸಮಿತಿಯ ಅಧ್ಯಕ್ಷ ಫಯಾಜ್, ಸದಸ್ಯ ರವೂಫ್ ನಾಯಿತೇ, ಆಲ್ತಾಫ್ ಖರೂರಿ ಮತ್ತಿತರರು, ಕಳೆದ 6 ವರ್ಷಗಳಿಂದ ಅಂಗಡಿ ಹರಾಜು ಪ್ರಕ್ರಿಯೆನ್ನು ಮುಂದೂಡಿಕೊಂಡು ಬರಲಾಗುತ್ತಿದೆ, ಪದೇ ಪದೇ ಮುಂದೂಡುವುದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ, ಪದೇ ಪದೇ ಹರಾಜಿನಲ್ಲಿ ಭಾಗವಹಿಸಲು ಡಿಡಿ ನೀಡಿದವರು ಏನು ಮಾಡಬೇಕು, ಅವರಿಗೆ ಏನು ಉತ್ತರ ನೀಡುವುದು, ಹರಾಜು ನಡೆಸುವಂತೆ ಹೈ ಕೋರ್ಟ ಆದೇಶ ನೀಡಿದರೂ ಪಾಲನೆಯಾಗುತ್ತಿಲ್ಲ, ಸೋಮವಾರ ಪೂರ್ವ ನಿಗದಿಯಂತೆ ಹರಾಜು ಪ್ರಕ್ರಿಯೆಯನ್ನು ನಡೆಸಬೇಕು, ಸಹಾಯಕ ಆಯುಕ್ತರು ಬಾರದೇ ಇದ್ದರೆ ಮುಂದೆ ನಿಯಮದಂತೆ ಮುಂದುವರೆಯೋಣ ಎಂದು ತಿಳಿಸಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೃಷ್ಣಾನಂದ ಪೈ ಮತ್ತಿತರರು, ಹರಾಜು ಪ್ರಕ್ರಿಯೆ ಒಂದೆರಡು ವಾರ ಮುಂದೆ ಹೋಗುವುದರಿಂದ ಅಂತಹ ಸಮಸ್ಯೆಯೇನೂ ಆಗುವುದಿಲ್ಲ, ಹಿರಿಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದುವರೆಯೋಣ ಎಂದರು. ನಂತರ ಸೋಮವಾರ ಸಹಾಯಕ ಆಯುಕ್ತರನ್ನು ಭೇಟಿಯಾಗಿ ಚರ್ಚಿಸಿದ ನಂತರ ಮುಂದಿನ ಹೆಜ್ಜೆ ಇಡುವ ಬಗ್ಗೆ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭಾ ಅಧ್ಯಕ್ಷ ಫರ್ವೇಜ್ ಕಾಶೀಮ್‍ಜಿ, ಹರಾಜು ಪ್ರಕ್ರಿಯೆಯನ್ನು ಮುಂದೂಡುವಂತೆ ಸಹಾಯಕ ಆಯುಕ್ತರು ಆದೇಶ ನೀಡಿದ್ದಾರೆ, ಆದರೆ ಯಾವಾಗ ನಡೆಸಬೇಕು ಎನ್ನುವ ಬಗ್ಗೆ ಸೂಚಿಸಿಲ್ಲ, ಇದು ಗೊಂದಲಕ್ಕೆ ಕಾರಣವಾಗಿದೆ, ಆ ಬಗ್ಗೆ ಅವರನ್ನೇ ಭೇಟಿ ಮಾಡಿ ಮಾಹಿತಿ ನೀಡುತ್ತೇವೆ, ಅವರ ಪ್ರತಿಕ್ರಿಯೆಯನ್ನು ನೋಡಿಕೊಂಡು ಹೈಕೋರ್ಟ ಗಮನಕ್ಕೆ ತರುವ ಬಗ್ಗೆಯೂ ಕೆಲವು ಸದಸ್ಯರು ಪ್ರಸ್ತಾಪಿಸಿದ್ದಾರೆ, ಅಂಗಡಿಗಳ ಹರಾಜಿಗಾಗಿ ಸ್ವೀಕೃತವಾದ ಡಿಡಿಗಳಿಗೆ ಸಂಬಂಧಿಸಿದಂತೆ ಕಾನೂನಿನಂತೆ ಮುಂದುವರೆಯಲಾಗುವುದು ಎಂದು ತಿಳಿಸಿದರು. ಪುರಸಭಾ ಮುಖ್ಯಾಧಿಕಾರಿ ರಾಧಿಕಾ ಉಪಸ್ಥಿತರಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...