ಮೊಗೇರರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ತಡೆ ಖಂಡಿಸಿ ಜ.12ರಿಂದ ಭಟ್ಕಳದಲ್ಲಿ ಮೊಗೇರರಿಂದ ಧರಣಿ ಸತ್ಯಾಗ್ರಹ

Source: S O News service | By I.G. Bhatkali | Published on 8th January 2022, 9:47 PM | Coastal News |

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ ಮೀಸಲು ವಾರ್ಡುಗಳಲ್ಲಿ ಮೊಗೇರ ಹಾಗೂ ಗೊಂಡ ಸಮುದಾಯದವರಿಗೆ ಸ್ಪರ್ಧಿಸಲು ಅವಕಾಶ ನೀಡಿರುವುದನ್ನು ಖಂಡಿಸಿ ದಲಿತ ಸಂಘಟನೆಗಳು ನಡೆಸಿಕೊಂಡು ಬಂದಿರುವ ಹೋರಾಟ ಹಾಗೂ ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕೈಗೊಂಡಿರುವ ಕ್ರಮದ ವಿರುದ್ಧ ತಿರುಗಿಬಿದ್ದಿರುವ ಇಲ್ಲಿನ ಮೊಗೇರ ಸಮುದಾಯದವರು ಪ್ರತಿ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಈ ಕುರಿತು ಶುಕ್ರವಾರ ಸಂಜೆ ಇಲ್ಲಿನ ವೆಂಕಟಾಪುರದಲ್ಲಿರುವ ಶ್ರೀ ಲಕ್ಷ್ಮೀ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮೊಗೇರ ಸಮಾಜದ ಅಧ್ಯಕ್ಷ ಕೆ.ಎಮ್.ಕರ್ಕಿ ಮಾಹಿತಿ ನೀಡಿದರು. ತೀರ ಕಡುಬಡತನದಲ್ಲಿ ಇದ್ದ ಮೊಗೇರ ಸಮಾಜ, 1978ರಿಂದ ಪರಿಶಿಷ್ಟ ಜಾತಿ ಸೌಲಭ್ಯವನ್ನು ಬಳಸಿಕೊಂಡು ಅಭಿವೃದ್ಧಿಯನ್ನು ಕಾಣಲು ಆರಂಭಿಸಿತು. ಮೊಗೇರ ಸಮಾಜಕ್ಕೆ ದೊರೆತ ಈ ಸೌಲಭ್ಯವನ್ನು ವಂಚಿಸಲು ಕೆಲವು ಸಂಘಟನೆಗಳು ಹಲವಾರು ರೀತಿಯಲ್ಲಿ ಅಪಪ್ರಚಾರ ಮಾಡಿ ಸಮಾಜದಲ್ಲಿ ಮತ್ತು ಸರಕಾರಿ ಅಧಿಕಾರಿಗಳಲ್ಲಿ ಸಂಶಯ ಮೂಡುವಂತೆ ಮಾಡುತ್ತಿರುವುದು ಖಂಡನೀಯವಾಗಿದೆ.

ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು 
* ನಾವು ಮಾಡುವ ಮೀನುಗಾರಿಕೆ ವೃತ್ತಿ ಪರಿಶಿಷ್ಟರಾಗಲು ಅನರ್ಹತೆಯನ್ನು ತರುತ್ತದೆ ಎಂದಾದರೆ ಇತರೇ ಪರಿಶಿಷ್ಟ ಸಮುದಾಯಗಳಲ್ಲಿ ಅವರ ಮೂಲ ಕಸುಬನ್ನು ಬಿಟ್ಟು ಬೇರೆ ವೃತ್ತಿ ಮಾಡುವವರಿಗೆ ಈ ಮಾನದಂಡ ಯಾಕೆ ಅನ್ವಯಿಸುವುದಿಲ್ಲ ಎನ್ನುವುದು ನಮ್ಮ ಪ್ರಶ್ನೆಯಾಗಿದೆ.

*ಇತ್ತೀಚಿಗೆ ನಡೆದ ಜಾಲಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೊಗೇರ ಸಮಾಜದ ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರವನ್ನು ಅವಸರದಲ್ಲಿ ರದ್ದುಗೊಳಿಸಿರುವುದು ಸಾಮಾಜಿಕ ನ್ಯಾಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಇದನ್ನು ಮೊಗೇರ ಸಮಾಜದ ಮೇಲಿನ ಸರಕಾರಿ ದೌರ್ಜನ್ಯ ಎಂದು ಭಾವಿಸುತ್ತೇವೆ.

ಮೀನುಗಾರಿಕೆ ಮೊಗೇರ ಸಮಾಜದ ವೃತ್ತಿಯಾಗಿದ್ದು, ಇದಕ್ಕೆ ಕಾರಣ ಸ್ಥಳೀಯವಾಗಿ ಇರುವ ಉದ್ಯೋಗದ ಅವಕಾಶ ಹಾಗೂ ಸರಕಾರದ ವಿವಿಧ ಇಲಾಖೆಗಳು ನೀಡುತ್ತಿರುವ ಸಹಕಾರವೇ ಹೊರತೂ ಬೇರೆ ಏನೂ ಅಲ್ಲ. ನಾವು ಮಾಡುವ ಮೀನುಗಾರಿಕೆ ವೃತ್ತಿ ಪರಿಶಿಷ್ಟರಾಗಲು ಅನರ್ಹತೆಯನ್ನು ತರುತ್ತದೆ ಎಂದಾದರೆ ಇತರೇ ಪರಿಶಿಷ್ಟ ಸಮುದಾಯಗಳಲ್ಲಿ ಅವರ ಮೂಲ ಕಸುಬನ್ನು ಬಿಟ್ಟು ಬೇರೆ ವೃತ್ತಿ ಮಾಡುವವರಿಗೆ ಈ ಮಾನದಂಡ ಯಾಕೆ ಅನ್ವಯಿಸುವುದಿಲ್ಲ ಎನ್ನುವುದು ನಮ್ಮ ಪ್ರಶ್ನೆಯಾಗಿದೆ. ಕಳೆದ 2018, ಮೇ31ರಂದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಕರ್ನಾಟಕ ಸರಕಾರವು ಮೊಗೇರ ಜಾತಿಯು, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗ ಎರಡರಲ್ಲಿಯೂ ಇರುವುದರಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಾಗ ಪರಿಶೀಲಿಸಿ ನೀಡತಕ್ಕದ್ದು ಎಂದು ಆದೇಶ ಹೊರಡಿಸಿದೆ. ಈ ಆದೇಶವನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ಸರಕಾರವು ತನ್ನ ಸುತ್ತೋಲೆಯನ್ನು ಹಿಂತೆಗೆದುಕೊಂಡು ಕಳೆದ 2019, ನ4ರಂದು ಕರ್ನಾಟಕದಲ್ಲಿರುವ ಮೊಗೇರ ಜಾತಿಯವರಿಗೆ ಪರಿಶಿಷ್ಟ ಜಾತಿಯ ಸೌಲಭ್ಯವನ್ನು ವಿಸ್ತರಿಸಲು ಸುತ್ತೋಲೆಯನ್ನು ಹೊರಡಿಸಿರುತ್ತದೆ. ಈ ಮೇಲಿನ ಸ್ಪಷ್ಟ ಆದೇಶ ಇದ್ದರೂ ಮೊಗೇರ ಸಮಾಜಕ್ಕೆ ಅನ್ಯಾಯವಾಗಿ ಪರಿಶಿಷ್ಟ ಜಾತಿ ಸೌಲಭ್ಯವನ್ನು ತಡೆ ಹಿಡಿಯಲಾಗಿರುತ್ತದೆ. ಪ್ರಸ್ತುತ ಮೊಗೇರ ಸಮಾಜವನ್ನು ಒತ್ತಾಯಪೂರ್ವಕವಾಗಿ ಕತ್ತಲಿಗೆ ದೂಡಲಾಗಿದೆ. ನ್ಯಾಯಾಲಯಗಳ ಆದೇಶಗಳನ್ನು ಪಾಲಿಸದೇ ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮೊಗೇರ ಜನಾಂಗದವರು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ ಎಂದು ಜಾತಿ ಪ್ರಮಾಣ ಪತ್ರವನ್ನೇ ರದ್ದುಗೊಳಿಸುತ್ತಿರುವುದು ಮೊಗೇರ ಸಮಾಜದ ಮೇಲೆ ಸರಕಾರಿ ದೌರ್ಜನ್ಯ ಎಂದು ಭಾವಿಸುತ್ತೇವೆ. ಇತ್ತೀಚಿಗೆ ನಡೆದ ಜಾಲಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೊಗೇರ ಸಮಾಜದ ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರವನ್ನು ಅವಸರದಲ್ಲಿ ರದ್ದುಗೊಳಿಸಿರುವುದು ಸಾಮಾಜಿಕ ನ್ಯಾಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಮೊಗೇರ ಸಮಾಜದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ಈ ಅಕ್ರಮ, ಅನ್ಯಾಯದ ವಿರುದ್ಧ ಜ.12ರಿಂದ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದೇವೆ, ಕೋವಿಡ್ ಕಾರಣ ಕೇಳಿಕೊಂಡು ಪ್ರತಿಭಟನೆಯನ್ನು ನಾವು ಕೈ ಬಿಡುವುದಿಲ್ಲ, ಇದು ನಮ್ಮ ಉಸಿರಿನ ಪ್ರಶ್ನೆಯಾಗಿದೆ ಎಂದು ವಿವರಿಸಿದರು. ಭಟ್ಕಳ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ದಾಸಿ ಮೊಗೇರ, ಅನಂತ ಮೊಗೇರ, ಜಟಗಾ ಮೊಗೇರ ಉಪಸ್ಥಿತರಿದ್ದರು.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...