ಜಾಲಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಪಕ್ಷೇತರರೇ ಮೇಲುಗೈ

Source: SO NEWS | By MV Bhatkal | Published on 31st December 2021, 12:01 AM | Coastal News |

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್‍ನ 20 ಸ್ಥಾನಗಳಿಗೆ ಒಟ್ಟೂ 13 ಜನ ಪಕ್ಷೇತರರೇ ಆಯ್ಕೆಯಾಗಿದ್ದು ಕಳೆದ ಬಾರಿಯಂತೆ ಈ ಬಾರಿಯೂ ಪಕ್ಷೇತರರೇ ಮೇಲುಗೈ ಸಾಧಿಸಿದಂತಾಗಿದೆ. ಒಟ್ಟೂ 20 ಸ್ಥಾನಗಳಲ್ಲಿ 4 ಕಾಂಗ್ರೆಸ್, 3 ಬಿ.ಜೆ.ಪಿ. ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು 13 ಪಕ್ಷೇತರರಲ್ಲಿ 12 ಜನ ಪಕ್ಷೇತರರು ತಂಝೀಮ್ ಬೆಂಬಲಿತ ಪಕ್ಷೇತರರಾಗಿದ್ದಾರೆ. 
ವಾರ್ಡ ನಂ.1ರಲ್ಲಿ ಈಶ್ವರ ಮೊಗೇರ (ಕಾಂಗ್ರೆಸ್-315), 2ರಲ್ಲಿ ಪದ್ಮಾವತಿ ಸುಬ್ರಾಯ ನಾಯ್ಕ (ಬಿ.ಜೆ.ಪಿ-184), 3ರಲ್ಲಿ ರಮೇಶ ಮಾದೇವ ನಾಯ್ಕ (ಕಾಂಗ್ರೆಸ್-511), 4ರಲ್ಲಿ ಶಹಿನಾ ಶೇಖ್ (ಕಾಂಗ್ರೆಸ್-170) 5ರಲ್ಲಿ ಇಕ್ಕೇರಿ ಫರ್ಹಾನಾ (ಪಕ್ಷೇತರ-ಅವಿರೋಧ) 6ರಲ್ಲಿ ಮಿಸ್ಬಾವುಲ್ ಹಕ್ ಶೇಖ್ ಉಮರ್ (ಪಕ್ಷೇತರ-187), 7ರಲ್ಲಿ ಇರ್ಷಾದ್ ಬಾನು (ಪಕ್ಷೇತರ-ಅವಿರೋಧ), 8ರಲ್ಲಿ ಲೀಲಾವತಿ ಗಜಾನನ ಆಚಾರಿ (ಬಿ.ಜೆ.ಪಿ-400), 9ರಲ್ಲಿ ದಯಾನಂದ ನಾಯ್ಕ (ಬಿ.ಜೆ.ಪಿ.-212), 10ರಲ್ಲಿ ನಾಗರಾಜ ನಾಯ್ಕ (ಪಕ್ಷೇತರ-311), 11ರಲ್ಲಿ ರಮೇಶ ಈರಯ್ಯ ಗೊಂಡ (ಕಾಂಗ್ರೆಸ್-411), 12ರಲ್ಲಿ ಸೈಯದ್ ಇಮ್ರಾನ್ ಅಹಮ್ಮದ್ ಲಂಕಾ (ಪಕ್ಷೇತರ-ಅವಿರೋಧ), 13ರಲ್ಲಿ ಖತೀಬ ಫಾತಿಮಾ ತನಿಮ್ (ಪಕ್ಷೇತರ-ಅವಿರೋಧ), 14ರಲ್ಲಿ ಮೊಮಿನ್ ಶೈನಾಜ್ ಬೇಗಂ (ಪಕ್ಷೇತರ-256), 15ರಲ್ಲಿ ಮುನೀರ್ ಅಹಮ್ಮದ್ (ಪಕ್ಷೇತರ_ಅವಿರೋಧ), 16ರಲ್ಲಿ ಖಾಜಿಯಾ ಅಪ್ಸಾ (ಪಕ್ಷೇತರ-ಅವಿರೋಧ), 17ರಲ್ಲಿ ಬಿಬಿ ಶಮೀಮ್ (ಪಕ್ಷೇತರ-ಅವಿರೋಧ), 18ರಲ್ಲಿ ವಸೀಮ್ ಅಹಮ್ಮದ್ ಮನೆಗಾರ್ (ಪಕ್ಷೇತರ-209), 19ರಲ್ಲಿ ಮಹಮ್ಮದ್ ತೌಫೀಕ್ ಬ್ಯಾರಿ (ಪಕ್ಷೇತರ_333), 20ರಲ್ಲಿ ಇರ್ಫಾನ್ ಅಹಮ್ಮದ್ (ಪಕ್ಷೇತರ-419) ಆಯ್ಕೆಯಾದವರಾಗಿದ್ದಾರೆ.

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...