ಭಟ್ಕಳ ಜಾಲಿ ಪಪಂ ಚುನಾವಣೆ ; 64.58% ಮತದಾನ

Source: S O News service | By I.G. Bhatkali | Published on 28th December 2021, 6:15 PM | Coastal News |

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ 13 ವಾರ್ಡುಗಳಿಗೆ ಸೋಮವಾರ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, 64.58% ಮತದಾನ ದಾಖಲಾಗಿದೆ.

13 ವಾರ್ಡುಗಳ ಪೈಕಿ 8 ಮತಗಟ್ಟೆಗಳಲ್ಲಿ ತುರುಸಿನ ಮತದಾನ ನಡೆಯಿತು. ಮತಗಟ್ಟೆಗಳ ಹೊರಗೆ ಮತದಾರರ ಓಲೈಸುವ ಪ್ರಯತ್ನ ಅಲ್ಲಲ್ಲಿ ನಡೆದುಕೊಂಡು ಇರುವುದು ಕಂಡು ಬಂತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಾಲಿಕೋಡಿಯಲ್ಲಿ 80.98% ಗರಿಷ್ಠ ಮತದಾನವಾಗಿದ್ದರೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮದೀನಾ ಕಾಲೋನಿ (ಉತ್ತರಭಾಗ) ಮತಗಟ್ಟೆಯಲ್ಲಿ ಕನಿಷ್ಠ 37.54% ಮತದಾನ ದಾಖಲಾಗಿದೆ.

ಇನ್ನುಳಿದಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೆಂಕ್ಟಾಪುರ (73.88%), ಮಕ್ತಾಬ್ ಜಾಮೀಯಾ ಇಸ್ಲಾಮಿಯಾ ಭಟ್ಕಳ ,ಪೂರ್ವಭಾಗ (64.90%), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಡೆಕೋಡ್ಲು (79.86%), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುರುಳಿಸಾಲ, ಪೂರ್ವ ಭಾಗ (62.81%), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರಭಾಗ (54.06%), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಾಲಿ, ಪೂರ್ವಭಾಗ (68.05%), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಾಲಿ ಪಶ್ಚಿಮಭಾಗ (71%), ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜಾಲಿಕೋಡಿ (ಪಶ್ಚಿಮಭಾಗ ) ಹೊಸ ಆರ್‍ಸಿಸಿ ಕಟ್ಟಡ ( 76.79%), ಅಂಜುಮನ್ ಆಝಾದ್ ಪ್ರೈಮರಿ ಸ್ಕೂಲ್ (ಉತ್ತರ ಭಾಗ) (55.21%), ಹಿರಿಯ ಪ್ರಾಥಮಿಕ ಶಾಲೆ ಬೆಂಡೇಕಾನ್, ಪೂರ್ವಭಾಗ (56.37%), ಹಿರಿಯ ಪ್ರಾಥಮಿಕ ಶಾಲೆ ಬೆಂಡೆಕಾನ, ಪಶ್ಚಿಮಭಾಗ (50.83%) ಮತದಾನ ದಾಖಲಾಗಿದೆ.

ಮತಗಟ್ಟೆಯ ವ್ಯಾಪ್ತಿಯಲ್ಲಿ ಶಾಂತಿ ಭಂಗವಾಗದಂತೆ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಮತಗಟ್ಟೆಯನ್ನು ಪ್ರವೇಶಿಸುವ ಮುನ್ನ ಆರೋಗ್ಯ ಸಿಬ್ಬಂದಿಗಳು ಮತದಾರರನ್ನು ಸೆನಿಟೈಸೇಶನ್‍ಗೆ ಒಳಪಡಿಸಿದರು. ಇಲ್ಲಿನ ಶ್ರೀಗುರುಸುಧೀಂದ್ರ ಕಾಲೇಜಿನಲ್ಲಿ ಮತಪೆಟ್ಟಿಗಳನ್ನು ಇಡಲಾಗಿದ್ದು, ಡಿ.30 ರಂದು ಮತ ಎಣಿಕೆ ನಡೆಯಲಿದೆ. 

Read These Next