ಭಟ್ಕಳ ಸರಕಾರಿ ಆಸ್ಪತ್ರೆಗೆ ಬೆಳಗಾವಿ ವಿಭಾಗೀಯ ಸಹನಿರ್ದೇಶಕಿ ಡಾ. ಶೋಬಾ ಮುಲ್ಲಿಮನೆ ಭೇಟಿ

Source: SO News | By MV Bhatkal | Published on 28th September 2023, 8:58 PM | Coastal News | Don't Miss |

ಭಟ್ಕಳ:ಇಲ್ಲಿನ ಸರ್ಕಾರಿ ಅಸ್ಪತ್ರೆಯಲ್ಲಿ ಒಂದೆ ಸಮನೆ ರೋಗಿಗಳ ಸಂಖ್ಯೆ ಏರುತ್ತಿದೆ. ಇಲ್ಲಿನ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮತ್ತು ಅವರ ತಂಡ ರಾತ್ರಿ ಹಗಲು ಎನ್ನದೆ ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವದು ಕಾರಣ ಎಂದು ಎಂದು ಬೆಳಗಾವಿ ವಿಭಾಗೀಯ ಸಹನಿರ್ದೇಶಕಿ ಡಾ. ಶೋಬಾ ಮುಲ್ಲಿಮನೆ ಹೇಳಿದರು.
ಅವರು  ಭಟ್ಕಳ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ್ದರು. ಇಲ್ಲಿನ ಆಸ್ಪತ್ರೆಯಲ್ಲಿ ರಕ್ತ ತಪಾಸಣೆಗೂ ರೋಗಿಗಳ ಸರತಿ ಸಾಲು ನೋಡಿ ಅವಾಕ್ಕಾದ ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ಕೂಡಲೆ ಕನಿಷ್ಟ ೨ ಆದರೂ ಲ್ಯಾಬ್ ಟೆಕ್ಷಿಶಿಯನ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು. ಆಸ್ಪತ್ರೆಯಲ್ಲಿ ಹಾಸಿಗೆ ಲಬ್ಯವಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊರಗುತ್ತಿಗೆ ಆದಾರದಲ್ಲಾದರೂ ಸಿಬ್ಬಂದಿ ಒದಗಿಸಲು ಪ್ರಯತ್ನಿಸಲಾಗುವದು ಎಂದರು. ಭಟ್ಕಳ ಸರ್ಕಾರಿ ಆಸ್ಪತ್ರೆಯನ್ನು ಬಡರೋಗಿಗಳು ಅವಲಂಬಿಸಿದ್ದು ಅವರಿಗೆ ತೊಂದರೆಯಗದAತೆ ಕ್ರಮ ಕೈಗೊಳ್ಳಲು ಎಲ್ಲಾ ಪ್ರಯತ್ನ ನಡೆಸಲಾಗುವದು ಎಂದರು.
ಈ ಸಂದರ್ವದಲ್ಲಿ ಟಿಎಚ್‌ಒ ಡಾ. ಸವಿತಾ ಕಾಮತ ಮಾತನಾಡಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ ಕುಮಾರ ಶಿರಾಲಿ ಅಸ್ಪತ್ರೆಗೆ ಬೇಟಿ ನೀಡಿ ೨೪ ಹಾಸಿಗೆಗಳ ಬ್ಲಾಕ್ ನಿರ್ಮಿಸಿ ಕೊಡುವದಾಗಿ ಭರವಸೆ ನೀಡಿದ್ದಾರೆ. ಅದಕ್ಕೆ ತಕ್ಕಂತೆ ಸಿಬ್ಬಂದಿ ನೀಡಿದರೆ ಭಟ್ಕಳದ ಸರ್ಕಾರಿ ಆಸ್ಪತ್ರೆ ನಾಡಿನ ಖಾಸಗಿ ಆಸ್ಪತ್ರೆಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆಯಲಿದೆ ಎಂದರು. ಈ ಸಂದರ್ಬದಲ್ಲಿ ಎಫ್‌ಡಿಎ ಪ್ರಹ್ಲಾದ ಕುಲಕರ್ಣಿ, ಸುಪರಿಡಿಯಂಟ್ ಗಂಗಾಧರ ಲಕಮಾಪುರ, ಭಟ್ಕಳ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸತೀಶ ಕುಮಾರ, ಡಾ. ಸುರಕ್ಷಿತ ಶೆಟ್ಟಿ,ಡಾ ಲಕ್ಷಿö್ಮÃಶ, ಡಾ. ಉಮೇಶ, ಡಾ. ಜನಾರ್ದನ ಮೊಗೇರ, ಡಾ. ಕಮಲಾ ನಾಯ್ಕ, ಡಾ. ನಾಜಿಯಾ, ಡಾ. ಸ್ವಾತಿ ಉದ್ಯಾವರ, ಡಾ ವಿದ್ಯಾ ಭಟ್ ಇತರರು ಇದ್ದರು.

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...