ಬಾಯಿ ತೆರೆದುಕೊಂಡು ಜೀವ ತೆಗೆಯಲು ಕಾದು ಕುಳಿತಿರುವ ಹೆದ್ದಾರಿ ಪಕ್ಕದ ‘ಮೋರಿ’

Source: SOnews | By Staff Correspondent | Published on 20th May 2023, 9:56 PM | Coastal News |

 

ಭಟ್ಕಳ: ರಾಷ್ಟಿçÃಯ ಹೆದ್ದಾರಿ ಪುರವರ್ಗದಲ್ಲಿ ಹೆದ್ದಾರಿ ಪಕ್ಕದಲ್ಲಿ ಐ.ಆರ್.ಬಿ. ಕಂಪೆನಿಯ ವತಿಯಿಂದ ನೀರು ಹೋಗಲು ಮೋರಿಯನ್ನು ತೆಗೆಯಲಾಗಿದ್ದು ಮೋರಿಯ ಬಾಯಿ ಯಾವುದೇ ಮುಂಜಾಗ್ರತೆಯಿಲ್ಲದೇ ಹಾಗೆಯೇ ಬಿಟ್ಟಿದ್ದು ಮಳೆಗಾಲ ಸಮೀಪಿಸುತ್ತಿದ್ದಂತೆಯೇ ಆತಂಕದ ಛಾಯೆ ಮೂಡಿದೆ. 

ಕಳೆದ ಕೆಲವು ತಿಂಗಳ ಹಿಂದೆ ಐ.ಆರ್.ಬಿ. ಕೆಂಪೆನಿಯವರು ಪುರವರ್ಗ ಚರ್ಚ ಎದುರು ಭಾರೀ ಹೊಂಡವನ್ನು ತೋಡಿದ್ದು ಹೆದ್ದಾರಿಯ ಅಡಿಯಿಂದ ನೀರು ಸರಾಗವಾಗಿ ಹೋಗುವಂತೆ ದೊಡ್ಡದೊಂದು ಮೋರಿಯನ್ನು ಮಾಡಿದ್ದು ಮೋರಿಯ ಎರಡೂ ಕಡೆಯಲ್ಲಿ ಬಾಯ್ತೆರೆದುಕೊಂಡಿದ್ದನ್ನು ಮುಚ್ಚದೇ ಅಪಾಯಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. 

ಕಳೆದ ಹಲವು ತಿಂಗಳಿನಿAದ ಹಾಗೆಯೇ ಬಿಟ್ಟಿರುವುದನ್ನು ಪ್ರಶ್ನಿಸಿದರೆ ಅದು ಹಗೆಯೇ ಇರುವುದಾಗಿ ಹೇಳುತ್ತಿದ್ದು ಮುಂದೆ ದೊಡ್ಡ ಅಪಾಯ ಕಾದಿದಿದೆ ಎಂದೂ ನಾಗರೀಕರು ದೂರಿದ್ದಾರೆ. ಹತ್ತಿರದಲ್ಲಿಯೇ ಕನ್ನಡ ಶಾಲೆ ಇದ್ದು, ಪಕ್ಕದಲ್ಲಿ ಚರ್ಚ ಇದೆ. ಪ್ರತಿ ರವಿವಾರ ನೂರಾರು ಜನರು ಪ್ರಾರ್ಥನೆಗಾಗಿ ಸೇರುತ್ತಾರೆ. ದಿನಾಲೂ ಮಕ್ಕಳು ಇದೇ ದಾರಿಯಲ್ಲಿ ಓಡಾಡುತ್ತಾರೆ ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುವುದರಿಂದ ಚಿಕ್ಕ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಕೂಡಾ ಇದೆ ಎಂದು ದೂರಿರುವ ನಾಗರೀಕರು ತಕ್ಷಣ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಭಾರೀ ದೊಡ್ಡ ಹೊಂಡಕ್ಕೆ ಕಾಯಕಲ್ಪ ವದಗಿಸಬೇಕು ಎಂದೂ ಆಗ್ರಹಿಸಿದ್ದಾರೆ. ಕನಿಷ್ಟ ಎದುರುಗಡೆಯಲ್ಲಿ ನೀರು ಸರಾಗವಾಗಿ ಹೋಗುವ ಸ್ಥಳದಲ್ಲಿ ಕಬ್ಬಿಣದ ಗ್ರಿಲ್ಸ್ ಅಡವಡಿಸಬೇಕು. ಹಾಗೂ ನೀರು ಹೋಗುವ ಮೋರಿಯ ಮೇಲೆಯೂ ಕೂಡಾ ಯಾವುದೇ ಅಪಾಯವಾದಂತೆ ಗ್ರಿಲ್ಸ ಹಾಕಬೇಕು ಎಂದೂ ಒತ್ತಾಯಿಸಿದ್ದಾರೆ. 

ಈ ಭಾಗದಲ್ಲಿ ಹೆಚ್ಚಿನ ಜನರು ಓಡಾಡುವುದರಿಂದ ಮೋರಿಯ ಭಾಗದ ಹೊಂಡಕ್ಕೆ ಸೂಕ್ತ ಕಾಯಕಲ್ಪ ಕಲ್ಪಿಸಬೇಕು, ಮಳೆಗಾಲಕ್ಕೂ ಮೊದಲು ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ. 

ಐ.ಆರ್.ಬಿ. ಕಂಪೆನಿಯವರು ಮೋರಿ ಮಾಡುವ ನೆಪದಲ್ಲಿ ದೊಡ್ಡ ಹೊಂಡ ತೋಡಿ ಇಟ್ಟಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಭಾಗದಲ್ಲಿ ಚರ್ಚ, ಸರಕಾರಿ ಪ್ರಾಥಮಿಕ ಶಾಲೆ, ಸಾರ್ವಜನಿಕರು ಸದಾ ಓಡಾಡುವ ಸ್ಥಳವಾಗಿದ್ದು, ಹೆದ್ದಾರಿಯು ಕೂಡಾ ಸ್ವಲ್ಪ ತಿರುವು ಹೊಂದಿರುವುದರಿ0ದ ಅಪಘಾತವಾಗುವ ಸಾಧ್ಯತೆ ಕೂಡಾ ಹೆಚ್ಚಿದೆ. ತಕ್ಷಣದ ಕ್ರಮ ಅಗತ್ಯವಾಗಿದ್ದು ಅಧಿಕಾರಿಗಳು ಪರಿಶೀಲಿಸಿ ಸಂಬ0ಧ ಪಟ್ಟವರ ಮೇಲೆ ಒತ್ತಡ ಹಾಕಬೇಕಾಗಿದೆ.

-ಸೈಮನ್ ಡಿಸೋಜ, ವಕೀಲರು, ಭಟ್ಕಳ. 

ರಾಷ್ಟಿçÃಯ ಹೆದ್ದಾರಿಯ ಪಕ್ಕದಲ್ಲಿ ಅಪಾಯಕಾರಿಯಾಗಿ ಮೋರಿಯನ್ನು ಬಾಯ್ತೆರೆದು ಇಡಲು ಐ.ಆರ್.ಬಿ. ಹವಣಿಸುತ್ತಿದ್ದು ಎಷ್ಟು ಮಾತ್ರಕ್ಕೂ ನಾವು ಬಿಡುವುದಿಲ್ಲ. ಇದೊಂದು ಮುಖ್ಯ ಪ್ರದೇಶವಾಗಿದ್ದು ಸದಾ ಜನ ತಿರುಗಾಡುವ ಸ್ಥಳವಾಗಿದೆ. ಅಪಾಯವಾಗುವ ಸಾಧ್ಯತೆ ಇದ್ದು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. -ಸಾರ್ವಜನಿಕರು, ಪುರವರ್ಗ, ಭಟ್ಕಳ. 
                

Read These Next

ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರಾಸಾಯನಿಕ ಬಳಕೆ ಕುರಿತು ವ್ಯಾಪಕವಾಗಿ ಪರಿಶೀಲಿಸಿ : ಜಿಲ್ಲಾಧಿಕಾರಿ

ಕಾರವಾರ :ಜಿಲ್ಲೆಯಲ್ಲಿನ ಆಹಾರ ತಯಾರಿಕಾ ಘಟಕಗಳು, ಬೀದಿ ಬದಿ ವ್ಯಾಪಾರಿಗಳು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಸಾರ್ವಜನಿಕರ ಆರೋಗ್ಯದ ...

ಮಳೆಗಾಲದಲ್ಲಿ ಮುನ್ನೆಚ್ಚರಿಕೆ; ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರವಹಿಸಲು ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ

ಮಳೆಗಾಲದಲ್ಲಿ ಕಂಡು ಬರಬಹುದಾದ ಡೆಂಗಿ, ಚಿಕುನ್ ಗುನ್ಯಾ, ಮಲೇರಿಯಾ, ಮಿದುಳು ಜ್ವರ ಮತ್ತಿತರ ರೋಗಗಳ ಲಕ್ಷಣಗಳು, ಅವುಗಳ ಹರಡುವಿಕೆ ಹಾಗೂ ...

ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಭಟ್ಕಳ ತಾಲೂಕು

ನೀರಿನ ಸಮಸ್ಯೆಯಿಂದಾಗಿ ಭಟ್ಕಳದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿಗಾಗಿ ಸರತಿ ...