ಆಯುಷ್ಮಾನ್ ಕಾರ್ಡ್ ಪಡೆಯುವುದು ಎಲ್ಲ ನಾಗರೀಕರ ಹಕ್ಕಾಗಲಿದೆ - ಸುನೀಲ ನಾಯ್ಕ

Source: sonews | By Staff Correspondent | Published on 31st August 2019, 8:08 PM | Coastal News | Don't Miss |

ಭಟ್ಕಳ: ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಒಂದಾಗಿರುವ ಆಯುಷ್ಮಾನ ಕಾರ್ಡ್ ಯೋಜನೆ ಎಲ್ಲ ನಾಗರೀಕರ ಹಕ್ಕಾಗಲಿದೆ ಎಂದು ಶಾಸಕ ಸುನಿಲ್ ನಾಯ್ಕ್ ಹೇಳಿದರು.

ಅವರು ಶುಕ್ರವಾರ ಇಲ್ಲಿನ ತಾಲೂಕಾಸ್ಪತ್ರೆಯಲ್ಲಿ ಆಯುಷ್ಮಾನ ಕಾರ್ಡ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೇಂದ್ರ ಸರಕಾರದ ಅದ್ಬುತ ಯೋಜನೆಯಲ್ಲಿ ಆಯುಷ್ಮಾನ ಕಾರ್ಡ ಸಹ ಒಂದಾಗಿದ್ದು, ರಾಜ್ಯದಲ್ಲಿ ಕೆಲವೊಂದು ಗೊಂದಲವಿದ್ದು ಮುಂದಿನ ದಿನದಲ್ಲಿ ಇದು ಸರಿಪಡಿಸಿಕೊಂಡು ಜನರಿಗೆ ತಲುಪಲಿದೆ ಎಂದ ಶಾಸಕರು 'ಶ್ರೀಮಂತರು ಅವರಿಗೆ ಬೇಕಾದ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಿದ್ದು ಆದರೆ ಮಧ್ಯಮ ಹಾಗು ಬಡ ವರ್ಗದವರಿಗೆ ಇದರ ಸೌಲಭ್ಯ ಸಿಗಬೇಕಾಗಿದೆ. ಹಿಂದಿನ ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆಯಿಂದ ರಾಜ್ಯದಲ್ಲಿ ಕೇಂದ್ರದ ಯೋಜನೆಯು ಸ್ವಲ್ಪ ಗೊಂದಲವಿದ್ದು ಈ ಬಗ್ಗೆ ಮುಖ್ಯಮಂತ್ರಿಗಳಿಗೆ 105 ಶಾಸಕರು ಸಹ ರಾಜ್ಯದ ಜನರಿಗೆ ಗೊಂದಲವಿಲ್ಲದೇ ಕಾರ್ಡ್ ಸೌಲಭ್ಯ ಸರಿಯಾಗಿ ಲಭ್ಯವಾಗುವಂತೆ ಮನವಿ ಸಲ್ಲಿಸಲಾಗಿದೆ. ಅಕ್ಕ ಪಕ್ಕದ ಮಹಾರಾಷ್ಟ್ರ, ಗೋವಾದಂತೆಯೇ ರಾಜ್ಯದ ಜನರಿಗೆ ಆಯುಷ್ಮಾನ ಕಾರ್ಡ ಸೌಲಭ್ಯ ದೊರಕಲಿದೆ. ತಾಲೂಕಾಸ್ಪತ್ರೆಯ ವ್ಯವಸ್ಥೆ ಸಾಕಷ್ಟು ವಿಚಾರದಲ್ಲಿ ಬದಲಾಗಿದ್ದು, ಈಗ ಆಯುಷ್ಮಾನ ಕಾರ್ಡ ವಿತರಣಾ ಘಟಕ ಆರಂಭದಿಂದ ಎಲ್ಲಾ ಸೌಲಭ್ಯ ಸಿಗುವಂತಾಗಲಿದೆ. ಆಸ್ಪತ್ರೆ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಸಾರ್ವಜನಿಕರು ಕಾರ್ಡ ಪಡೆದುಕೊಳ್ಳಬೇಕು. ಈ ಯೋಜನೆ ಎಲ್ಲರು ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಸಹಾಯಕ ಆಯುಕ್ತ ಸಾಜಿದ ಅಹ್ಮದ ಮುಲ್ಲಾ ಮಾತನಾಡಿ, 'ಯೋಜನೆ ಫಲಪ್ರದವಾಗಿ ಸಿಗಬೇಕಾಗಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗಬೇಕು. ಕೇಂದ್ರ ಸರಕಾರದ ಈ ಯೋಜನೆಯೂ ಜನರಿಗೆ ತಲುಪಲು ತಾಲೂಕಾಸ್ಪತ್ರೆಯಲ್ಲಿ ಆರಂಭಗೊಂಡಿದ್ದು, ದಿನಕ್ಕೆ ಒಂದು ಮಿತಿಯಂತೆ ರೋಗಿಗಳಿಗೆ ಅನಾನುಕೂಲವಾಗದಂತೆ ಸೌಲಭ್ಯ ಮುಂದುವರೆಯಲಿ ಎಂದು ಹೇಳಿದರು.

ಈ ವೇಳೆ ಸಾಂಕೇತಿಕವಾಗಿ ಆಯುಷ್ಮಾನ ಕಾರ್ಡ ಫಲಾನುಭವಿಗಳಿಗೆ ಶಾಸಕ ಸುನೀಲ ನಾಯ್ಕ ಕಾರ್ಡ ವಿತರಿಸಿದರು. 

ಇದೇ ವೇಳೆ ತಾಲೂಕಾಸ್ಪತ್ರೆಗೆ ಜಿ.ಎಸ್.ಬಿ. ಮಹಿಳಾ ಮಂಡಲದಿಂದ ಎಲ್.ಇ.ಡಿ. ಬಲ್ಪ್ ದೇಣಿಗೆಯಾಗಿ ನೀಡಲಾಯಿತು. ಹಾಗೂ ಒಳರೋಗಿಗಳ ವಾರ್ಡಗಳಿಗೆ 14 ಫ್ಯಾನಗಳನ್ನು ದಾನಿ ಮೋಸಿನ್ ಕಾಸರಗೋಡ ಅವರು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ ಅವರಿಗೆ ನೀಡಿದರು.

ಇದೇ ವೇಳೆ ಶಾಸಕ ಸುನೀಲ ನಾಯ್ಕ ಸಾರ್ವಜನಿಕರಿಂದ ಅಹವಾಲು ಆಲಿಸಿದ ವೇಳೆ ತಿರುಮಲ ನಾಯ್ಕ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಆಸ್ಪತ್ರೆ ಹಾಗೂ ತಾಲೂಕಿನಲ್ಲಿ ಬ್ಲಡ ಬ್ಯಾಂಕ ಸ್ಥಾಪನೆಯೆ ಬಗ್ಗೆ ಮನವಿಯನ್ನು ಮುಂದಿಟ್ಟಿದ್ದು, ಈ ಬಗ್ಗೆ ಮುಂದಿನ ದಿನದಲ್ಲಿ ಜನರ ಬೇಡಿಕೆಯನ್ನು ಸರಕಾರದ ಮುಂದಿಟ್ಟು ಕಾರ್ಯ ಮಾಡಿಸುವ ಬಗ್ಗೆ ತಿಳಿಸಿದರು. 

ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್. ಆರ್.ಮುಂಜಿ, ತಾಲೂಕಿನ ಹಿರಿಯ ವೈದ್ಯ ಡಾ.ಸುರೇಶ ನಾಯಕ, ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತಾಲೂಕಾಸ್ಪತ್ರೆ ವೈದ್ಯರು, ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.  

Read These Next