ಭಟ್ಕಳ: ದೇಶಪಾಂಡೆ ಮುಖದಲ್ಲಿ ನಗುವಿದ್ದರೆ ಆನಂದ ಗೆಲ್ಲುತ್ತಾರೆ: ಆರ್.ಎನ್.ನಾಯ್ಕ

Source: S O News Service | By I.G. Bhatkali | Published on 20th April 2019, 12:28 AM | Coastal News | Don't Miss |

ಭಟ್ಕಳ: ಈ ಬಾರಿ ಆನಂದ ಆಸ್ನೋಟಿಕರ್ ಗೆಲ್ಲಲಿದ್ದಾರೆ. ಅದಕ್ಕೆ ಸಚಿವ ಆರ್.ವಿ.ದೇಶಪಾಂಡೆ ಮುಖದಲ್ಲಿನ ನಗುವೇ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಆರ್.ಎನ್.ನಾಯ್ಕ ಹೇಳಿದರು.

ಆನಂದ ಆಸ್ನೋಟಿಕರ್ ಗೆಲುವಿಗೆ ಕಾಂಗ್ರೆಸ್ ಜೆಡಿಎಸ್ ಮುಖಂಡರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ. ದೇಶಪಾಂಡೆಯವರನ್ನು ಅಂಟಿಕೊಂಡೇ ಮುಖಂಡರು ಕುಳಿತುಕೊಂಡರೆ ಕೆಲಸ ಆಗುವುಲ್ಲ. ಅಲ್ಲಿಂದ ಹೊರಗೆ ಬಂದು ಜನರ ಸಂಪರ್ಕ ಸಾಧಿಸಬೇಕು.

ಸಂಸದರಾಗಿದ್ದ ಅನಂತಕುಮಾರ ಹೆಗಡೆ ಅಲ್ಲಿಂದ ಇಲ್ಲಿಯವರೆಗೂ ಸುಸಂಸ್ಕøತರಾಗಿ ಬದುಕಿಲ್ಲ. ಅವರ ಭಾಷೆಯೇ ಅವರ ಸಂಸ್ಕøತಿಯನ್ನು ಹೇಳುತ್ತದೆ. ದುರಾದೃಷ್ಟವಶಾತ್ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರಾಗಲೀ ಅಥವಾ ಅವರ ಸ್ವಪಕ್ಷ ಬಿಜೆಪಿಯ ಹಿರಿಯರೇ ಆಗಲೀ ಪ್ರತಿಭಟಿಸುವ ಅಥವಾ ತಿಳಿ ಹೇಳುವ ಕೆಲಸ ಮಾಡದಿರುವುದರಿಂದ ಅನಂತಕುಮಾರ ಹೆಗಡೆ ಬಾಯಿಗೆ ಬಂದಂತೆ ಮಾತನಾಡುತ್ತ ನಡೆದಿದ್ದಾರೆ. ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮೇಲೆಯೂ ಜವಾಬ್ದಾರಿ ಇದೆ. ಅನಂತಕುಮಾರ ಬಾಯಿಯಿಂದ ಹಿಂದುಳಿದ ಮತ್ತು ದಲಿತರು ತಪ್ಪಿಸಿಕೊಳ್ಳಲು ನಿವೇ ಮುಂದೆ ನಿಂತು ಸಹಾಯ ಮಾಡಿ ಎಂದು ವಿನಂತಿಸಿಕೊಂಡರು.

Read These Next