ತೌಹಿದ್ ಶಿಕ್ಷಣ ಸಂಸ್ತೆಯ ವಾರ್ಷಿಕ ಕ್ರೀಡೋತ್ಸವ

Source: SO News | By Laxmi Tanaya | Published on 16th December 2023, 10:38 PM | Coastal News | Don't Miss |

ಗಂಗೊಳ್ಳಿ : ತೌಹಿದ್‌ ಆಂಗ್ಲ ಮಾಧ್ಯಮ ಶಾಲೆ, ತೌಹೀದ್‌ ಹೆಣ್ಮಕ್ಕಳ ಪದವಿಪೂರ್ವ ಕಾಲೇಜು, ತೌಹೀದ್‌ ಹೆಣ್ಣು ಮಕ್ಕಳ ವಾಣಿಜ್ಯ ಪದವಿ ಕಾಲೇಜು, ಗಂಗೊಳ್ಳಿ ಇವರ ಸಹಯೋಗದೊಂದಿಗೆ ಕ್ರೀಡಾಂಗಣದಲ್ಲಿ ವಾರ್ಷಿಕ ಕ್ರೀಡೋತ್ಸವ ಅದ್ದೂರಿಯಾಗಿ ಜರುಗಿತು. 

ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡಾ ಅವಶ್ಯಕವಾದುದು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ  ಅಬ್ದುಲ್‌ ರವೂಫ್‌, ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢ ಶಾಲೆ, ಹೆಸ್ಕತ್ತೂರು ಇವರು ಮಾತನಾಡಿದರು. 
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಗ್ರಾಮಪಂಚಾಯತ್‌ ಗಂಗೊಳ್ಳಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ,  ಪ್ರಾಸ್ತಾವಿಕ ಮಾತುಗಳ ಮೂಲಕ ಕ್ರೀಡೆಯ ಮಹತ್ವದ ಬಗ್ಗೆ ತಿಳಿಸಿದರು. 
ರಾಜ್ಯ ನೆಟ್‌ಬಾಲ್‌ ಚಾಂಪಿಯನ್‌  ಯುವರಾಜ ಖಾರ್ವಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಎನ್‌ಆರ್‌ಐ ಟ್ರಸ್ಟಿ  ಅಬ್ದುಲ್‌ ಖುದ್ದೂಸ್‌ ಎಮ್‌.ಎಚ್‌. ಮತ್ತು  ಅಬ್ದುಲ್‌ ಶುಕುರ್‌ ಜಿ.ಡಿ. ವ್ಯವಸ್ಥಾಪಕರು, ತೌಹೀದ್‌ ಆಂಗ್ಲ ಮಾಧ್ಯಮ ಶಾಲೆ, ಶಿರೂರು ಮತ್ತು  ಮೊಹ್ಮದ್‌ ತಾಹೀರ್‌ ಹಸನ್‌, ವ್ಯವಸ್ಥಾಪಕರು, ತೌಹೀದ್‌ ಎಜ್ಯುಕೇಶನಲ್‌ ಟ್ರಸ್ಟ್‌ (ರಿ.). ಗಂಗೊಳ್ಳಿ  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ತೌಹೀದ್‌ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಇಬ್ರಾಹಿಂ  ಚೌಗುಲೆಯವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು. ತೌಹೀದ್‌ ಪದವಿ ಕಾಲೇಜಿನ ಪ್ರಾಂಶುಪಾಲರಾದ ಆಶಾ ನಾಯ್ಕ್‌, ತೌಹೀದ್‌ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕುಮಾರಿ ಯಶೋಧ, ತೌಹೀದ್‌ ಆಂಗ್ಲ ಮಾಧ್ಯಮ ಶಾಲೆ, ಗಂಗೊಳ್ಳಿಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಭಾ ಭಾನುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳಾದ ಅಬ್ದುರ್‌ ರೆಹಮಾನ್‌ ಮತ್ತು ಅಪಾಫ್‌ ಕಿರಾತ ಗೈಯ್ದರೆ, ಉಪನ್ಯಾಸಕಿ ಬಿಂದುರವರು ಅತಿಥಿಗಳ ಕಿರುಪರಿಚಯ ಮಾಡಿದರು. ಆಕರ್ಷಕ ಪಥಸಂಚಲನ, ಅದ್ಬುತ ಕವಾಯತು ಮತ್ತು ದೈಹಿಕ ಕಸರತ್ತುಗಳ ಪ್ರದರ್ಶನ ಕ್ರೀಡೋತ್ಸವಕ್ಕೆ ಮೆರಗು ತಂದಿತು. ಶಿಕ್ಷಕಿಯರಾದ ಸಫಾ ಮತ್ತು ಸಾದಿಯಾರವರು ಸ್ವಾಗತಿಸಿದರು. ವಿದ್ಯಾರ್ಥಿ ಮುನಾಝ ವಂದಿಸಿದರು

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...