ಕಾಲ್ನಡಿಗೆಯಲ್ಲೇ ಭಟ್ಕಳಕ್ಕೆ ಆಗಮಿಸಿದ ಉತ್ತರ ಪ್ರದೇಶದ ಯುವಕ

Source: SO News | By MV Bhatkal | Published on 29th August 2023, 12:26 AM | Coastal News | Don't Miss |

ಭಟ್ಕಳ: ಉತ್ತರ ಪ್ರದೇಶದ ಇಂಜಿನಿ ಯರಿಂಗ್ ಪದವೀಧರ ಯುವಕನೋರ್ವ ದೇಶದಲ್ಲಿನ ಆಯಾ ರಾಜ್ಯಗಳ ಆಚಾರ ವಿಚಾರ, ಭಾಷೆ, ಸಂಸ್ಕೃತಿ ಅಲ್ಲಿನ ಕೃಷಿ ಪದ್ಧತಿಯನ್ನು ಅರಿತು ಪುಸ್ತಕ ಬರೆಯಲು ಕಾಲ್ನಡಿಗೆಯಲ್ಲೇ ದೇಶ ಸುತ್ತುವ ದಿಟ್ಟ ಹೆಜ್ಜೆಯಿಟ್ಟು ಭಟ್ಕಳ ಕ್ಕೆ ಆಗಮಿಸಿದ್ದಾರೆ.
ಉತ್ತರ ಪ್ರದೇಶದ ರೋಬಿನ್ ಸನೋಜ್ ಗೋರಕ್ ಪುರದ ಕುಶಿನಗರ, ಧರ್ಮಪುರ ಗ್ರಾಮದ ಯುವಕನಾ ಗಿದ್ದು, ಕಾಲ್ನಡಿಗೆ ಮೂಲಕ ಭಾರತ ದೇಶವನ್ನು ಸುತ್ತ ಬೇಕೆಂದು 21 ಅಕ್ಟೋಬರ್ 2022 ರಂದು ಯಾತ್ರೆ ಆರಂಭಿಸಿ 360 ದಿನಗಳಲ್ಲಿ 6000 ಕೀ.ಮೀ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ, ಬೆಂಗಾಲ್, ಒಡಿಸ್ಸಾ, ಛತ್ತೀಸ್ ಘಡ್, ತೆಲಂಗಾಣ, ಆಂಧ್ರಪ್ರದೇಶ,ಕೇರಳ,ಮುಗಿಸಿ ಕರ್ನಾಟಕಕ್ಕೆ ಪ್ರವೇಶ ಮಾಡಿ,ಮಂಗಳೂರು ಮೂಲಕ,
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕ್ಕೆ ಆಗಮಿಸಿದ್ದಾರೆ.
ಬೆನ್ನಿಗೆ ಒಂದು ಬ್ಯಾಗ್, ಅದರೊಳಗೆ ಭಾರತದ ಭಾವುಟ ಕಟ್ಟಿಕೊಂಡು ರಸ್ತೆಯಲ್ಲಿ ತೆರಳುವ ಸಂದರ್ಭದಲ್ಲಿ  ಮಾರ್ಗಮಧ್ಯೆ ನಮ್ಮ ಪಬ್ಲಿಕ್ ನೆಕ್ಸ್ಟ್ ಭಟ್ಕಳ ವರದಿಗಾರ  ಕಣ್ಣಿಗೆ ಬಿದ್ದ ರೋಬಿನ್ ಸನೋಜ್ ಅವರನ್ನು ಮಾತನಾಡಿಸಿದಾಗ, ದೇಶದ ಎಲ್ಲಾ ಸಂಸ್ಕೃತಿ, ಆಚಾರ, ವಿಚಾರ, ಭಾಷೆ, ಅಲ್ಲಿ ಯಾವ ಬೆಳೆಗಳನ್ನು ಬೆಳೆಯುತ್ತಾರೆ. ಅಲ್ಲಿನ ಜನರ ಪರಿಸ್ಥಿತಿ ಹೇಗಿದೆ, ಆಹಾರ ಪದ್ಧತಿ, ಹೇಗೆ ವಾಸ ಮಾಡುತ್ತಾರೆ ಎಂಬುದನ್ನು ಅರಿಯಲು ಈ ಕಾಲ್ನಡಿಗೆ ಯಾತ್ರೆ ಹಮ್ಮಿಕೊಂಡಿದ್ದೇನೆ
ನಾನು ಹೋದ ಕಡೆಗಳಲ್ಲಿ ಅಲ್ಲಿನ ಸ್ಥಳೀಯರು ಮಾತನಾಡಿಸುತ್ತಾರೆ ಅವರ ಜೊತೆ ಕೆಲ ಸಮಯ ಮಾತುಕತೆ ನಡೆಸಿ ಅಲ್ಲಿನ ಎಲ್ಲಾ ಮಾಹಿತಿಗಳನ್ನು ಪಡೆಯುತ್ತೇನೆ ಎಂದು ಹೇಳಿದರು.
ಪ್ರತೀ ದಿನ 30 ರಿಂದ 35 ಕೀ.ಮೀ. ಕಾಲ್ನಡಿಗೆ ಯಾತ್ರೆ ನಡೆಸುತ್ತೇನೆ. ಎಲ್ಲಿ ದೇವಸ್ಥಾನ ಅಥವಾ ಸಾರ್ವಜನಿಕರು ತಂಗುವ ಸ್ಥಳ ಸಿಗುತ್ತದೋ ಅಲ್ಲಿ ವಾಸ್ತವ್ಯ ಹೂಡುತ್ತೇನೆ. ನಂತರ ಅಲ್ಲಿಂದ ಮತ್ತೊಂದು ಸ್ಥಳಕ್ಕೆ ತೆರಳುತ್ತೇನೆ ಎಂದು ಹೇಳಿದರು.
ಕರ್ನಾಟಕ ನಂತರ ಮಹಾರಾಷ್ಟ್ರ, ಗೋವಾ, ಜಮ್ಮು ಕಾಶ್ಮೀರ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡುತ್ತೇನೆ. ಹೋದ ಕಡೆಯಲ್ಲೆಲ್ಲಾ ಹೊಸ ಹೊಸ ಅನುಭವಗಳಾಗುತ್ತಿವೆ. ಎಲ್ಲವನ್ನೂ ದಾಖಲು ಮಾಡಿಕೊಂಡಿದ್ದೇನೆ. ನನ್ನ ಸಂಪೂರ್ಣ ಯಾತ್ರೆ ಮುಗಿದ ನಂತರ ಒಂದು ಪುಸ್ತಕ ಬರೆಯುತ್ತೇನೆ ಎಂದು ಯಾತ್ರಿಕ ರೋಬಿನ್ ಸನೋಜ್,ತಿಳಿಸಿದ್ದಾರೆ.

Read These Next

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...