ಢಾಕಾ: ಹಿಂಸಾಚಾರಕ್ಕೆ ತಿರುಗಿದ ಮೋದಿ ವಿರುದ್ದ ಪ್ರತಿಭಟನೆ: ಪೊಲೀಸರ ಗುಂಡಿಗೆ ನಾಲ್ವರ ಸಾವು

Source: VB | By S O News | Published on 27th March 2021, 7:30 PM |

ಢಾಕಾ: ಬಾಂಗ್ಲಾದೇಶ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಹಾಗೂ ದೇಶದ ಸ್ಥಾಪಕ, ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ಶೇಕ್ ಮುಜೀಬುಗ್ರಹಾನ್ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಆಗಮಿಸಿರುವುದನ್ನು ವಿರೋಧಿಸಿ  ನಡೆದ ಪ್ರತಿಭಟನೆ ಸಂದರ್ಭ ಚಿತ್ಗಾಂಗ್ ನಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಕನಿಷ್ಠ ನಾಲ್ವರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ.

ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದಾಗ ಪ್ರತಿಭಟನಾಕಾರರನ್ನು ಚದುರಿಸಲು ನಾವು ರಬ್ಬರ್ ಗುಂಡು ಹಾಗೂ ಅಶ್ರುವಾಯ ಸೆಲ್‌ಗಳನ್ನು ಪ್ರಯೋಗಿಸಬೇಕಾಯಿತು ಎಂದು ಪೊಲೀಸ್ ಅಧಿಕಾರಿ ರಫೀಕ್ಉಲ್ ಇಸ್ಲಾಂ ಹೇಳಿದ್ದಾರೆ. ಗುಂಡಿನಿಂದ ಗಾಯಗೊಂಡ 8 ಮಂದಿಯನ್ನು ನಗರದ ಆಸ್ಪತ್ರೆಗೆ ತರಲಾಗಿತ್ತು. ಅವರಲ್ಲಿ 4 ಮಂದಿ ಸಾವನ್ನಪ್ಪಿದರು ಎಂದು ಚಿತ್ಗಾಂಗ್‌ನ ಇನ್ನೋರ್ವ ಪೊಲೀಸ್ ಅಧಿಕಾರಿ ಮುಹಮ್ಮದ್ ಅಲಾವುದ್ದೀನ್ ತಿಳಿಸಿದ್ದಾರೆ.

ನರೇಂದ್ರ ಮೋದಿ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಲು ಹೆಫಝತ್-ಎ-ಇಸ್ಲಾಂನ ಸಾವಿರಾರು ಕಾರ್ಯಕರ್ತರು ಶುಕ್ರವಾರದ ಪ್ರಾರ್ಥನೆ ಮುಗಿಸಿ ಚಿತ್ರಾಂಗ್‌ನಲ್ಲಿ ಸೇರಿದ್ದರು. ಇನ್ನೊಂದೆಡೆ ಪೊಲೀಸರು ತಡೆ ಬೇಲಿಗಳನ್ನು ಹಾಕಿದ್ದರು ಹಾಗೂ ರಸ್ತೆ ತಡೆದಿದ್ದರು. ಪ್ರತಿಭಟನಾಕಾರರು ತಡೆಬೇಲಿಯನ್ನು ಕಿತ್ತು ಹಾಕಲು ಪ್ರಯತ್ನಿಸಿದರು. ಇದರಿಂದಾಗಿ ಪೊಲೀಸರೊದಿಗೆ ಘರ್ಷಣೆ ಏರ್ಪಟ್ಟಿತು. ಟ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್, ರಬ್ಬರ್ ಗುಂಡುಗಳನ್ನು ಬಳಸಿದ್ದರು ಹಾಗೂ ಲಾಠಿ ಪ್ರಹಾರ ನಡೆಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆಕ್ರೋಶಿತರಾದ ಪ್ರತಿಭಟನಾಕಾರರು ಹಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಸುಮಾರು ಎರಡು ಗಂಟೆಗಳ ಬಳಿಕ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಸಫಲರಾದರು.

ನಾಲ್ವರ ಸಾವು

ನರೇಂದ್ರ ಮೋದಿ ಭೇಟಿ ವಿರೋಧಿಸಿ ಢಾಕಾ ವಿಶ್ವವಿದ್ಯಾ
ನಿಲಯದ ಕ್ಯಾಂಪಸ್‌ನಲ್ಲಿ ಗುರುವಾರ ನಡೆದ ಪ್ರತಿಭಟನೆ ಸಂದರ್ಭ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರು ಪತ್ರಕರ್ತರು, ಸರಕಾರದ ಪರ ಬಾಂಗ್ಲಾದೇಶ ಛಾತ್ರ ಲೀಗ್ (ಬಿಸಿಎಲ್)ನ ಇಬ್ಬರು ಕಾರ್ಯಕರ್ತರು ಕೂಡ ಒಳಗೊಂಡಿದ್ದಾರೆ.

ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳತ್ತ ಕಲ್ಲು ತೂರಾಟ ನಡೆಸಿರುವುದರಿಂದ ಕನಿಷ್ಠ ನಾಲ್ವರು ಪೊಲೀಸರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

“ಸುಮಾರು 200 ಪ್ರತಿಭಟನಾಕಾರರು ಕ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ನಾವು ಅಶ್ರುವಾಯು ಶೆಲ್ ಹಾಗೂ ರಬ್ಬರ್ ಗುಂಡುಗಳನ್ನು ಪ್ರಯೋಗಿ ಸಬೇಕಾಯಿತು. ಹಿಂಸಾಚಾರಕ್ಕೆ ಸಂಬಂಧಿಸಿ 33 ಮಂದಿ ಪ್ರತಿಭಟನಾಕಾರರನ್ನು ಬಂಧಿಸಿದ್ದೇವೆ' ಎಂದು ಪೊಲೀಸ್ ಅಧಿಕಾರಿ ನೂರುಲ್ ಇಸ್ಲಾಮ್ ಹೇಳಿದ್ದಾರೆ.