ಕಾರವಾರ: ಮತದಾರರ ಗೊಂದಲ ನಿವಾರಣೆಗೆ 24/7 ಉಚಿತ ಸಹಾಯವಾಣಿ 1950

Source: S O News | By I.G. Bhatkali | Published on 3rd April 2024, 6:42 PM | Coastal News |

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬAದಿಸಿದAತೆ, ನನ್ನ ಮತ ಯಾವ ಮತಗಟ್ಟೆಯಲ್ಲಿದೆ, ಅಲ್ಲಿನ ವಿಳಾಸ ಯಾವುದು, ನನ್ನ ಕ್ರಮ ಸಂಖ್ಯೆ ಯಾವುದು, ಗುರುತಿನ ಚೀಟಿಯಲ್ಲಿ ವಿಳಾಸ ಬದಲಾವಣೆಗೆ ನೀಡಿದ್ದ ಅರ್ಜಿ ಏನಾಗಿದೆ, ಎಪಿಕ್ ಕಾರ್ಡ್ ತಿದ್ದುಪಡಿಗೆ ನೀಡಿದ್ದ ಅರ್ಜಿಯಂತೆಯೇ ನನ್ನ ತಿದ್ದುಪಡಿ ಅಗಿದೆಯೇ, ಯುವ ಮತದಾರನಾದ ನನಗೆ ಹೊಸ ಎಪಿಕ್ ಕಾರ್ಡ್ ಯಾವಾಗ ಬರಲಿದೆ ಮುಂತಾದ ಎಪಿಕ್ ಕಾರ್ಡ್ ಮತ್ತು ಚುನಾವಣೆ ಕುರಿತ ಸಾರ್ವಜನಿಕರ ಎಲ್ಲಾ ಸಂದೇಹಗಳನ್ನು ಪರಿಹರಿಸಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಕಛೇರಿಯಲ್ಲಿ ತೆರೆಯಲಾಗಿರುವ 24*7 ಕಾರ್ಯ ನಿರ್ವಹಿಸುವ ಮತದಾರರ ಉಚಿತ ಸಹಾಯವಾಣಿ ಸಂಖ್ಯೆ. 1950 ನೆರವು ನೀಡುತ್ತಿದೆ.


ಜಿಲ್ಲಾಧಿಕಾರಿ ಕಚೇರಿಯಲ್ಲಿ 24*7 ಕಾರ್ಯ ನಿರ್ವಹಿಸುತ್ತಿರುವ ಈ ಉಚಿತ ಸಹಾಯವಾಣಿ 1950 ನಲ್ಲಿ ಕರ್ತವ್ಯ ನಿರ್ವಹಣೆಗಾಗಿ 3 ಪಾಳಿಯಲ್ಲಿ ಸಿಬ್ಬಂದಿಗಳು

ಮತದಾನ ಮತ್ತು ಎಪಿಕ್ ಕಾರ್ಡ್ ಸೇರಿದಂತೆ , ಜಿಲ್ಲೆಯಲ್ಲಿನ ಚುನಾವಣಾ ಸಂಬಂದಿತ ಸಾರ್ವಜನಿಕರ ಎಲ್ಲಾ ಗೊಂದಲ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ 24*7 ಕಾರ್ಯ ನಿರ್ವಹಿಸುವ ಉಚಿತ ಸಹಾಯವಾಣಿ ಸಂಖ್ಯೆ 1950 ನ್ನು ತೆರೆಯಲಾಗಿದೆ.

ಸಾರ್ವಜನಿಕರು ಯಾವುದೇ ಸಮಯದಲ್ಲಿ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು ಅಲ್ಲದೇ ಯಾವುದೇ ಸಮಸ್ಯೆಗಳಿದ್ದಲ್ಲಿ ಕರೆ ಮಾಡಿ ತಿಳಿಸಬಹುದಾಗಿದೆ. ಸಾರ್ವಜನಿಕರ ಎಲ್ಲಾ ಕರೆಗಳನ್ನು ದಾಖಲಿಸಿ, ಅವರ ಕೋರಿರುವ ಎಲ್ಲಾ ಸಮರ್ಪಕವಾದ ಮಾಹಿತಿಯನ್ನು ನೀಡಲಾಗುತ್ತಿದೆ. ಹಿರಿಯ ನಾಗರೀಕರು ಮತ್ತು ವಿಕಲಚೇತನರು ಮತದಾನದ ದಿನದಂದು ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ನೆರವು ಕೋರುತಿದ್ದು, ಅವರಿಗೆ ಎಲ್ಲಾ ರೀತಿಯ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು.: ಗಂಗೂಬಾಯಿ ಮಾನಕರ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ.

ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಪ್ರತಿಯೊಂದು ಕರೆಗಳನ್ನೂ ದಾಖಲಿಸಿಕೊಂಡು, ಅವರ ಗೊಂದಲ ಮತ್ತು ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

ಈ ಸಹಾಯವಾಣಿ ಸಂಖ್ಯೆಗೆ ಜಿಲ್ಲೆಯ ಯಾವುದೇ ಮೂಲೆಯಿಂದ, ಯಾವುದೇ ಸಂದರ್ಭದಲ್ಲೂ ಕರೆ ಮಾಡಬಹುದಾಗಿದ್ದು, ಜಿಲ್ಲೆಯ ಸಾರ್ವಜನಿಕರು ಮಾತ್ರವಲ್ಲದೇ ಹೊರ ಜಿಲ್ಲೆಯಲ್ಲಿ ನೆಲೆಸಿರುವ ಜಿಲ್ಲೆಯ ಸಾರ್ವಜನಿಕರೂ ಕೂಡಾ ಕರೆ ಮಾಡುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಮತದಾನ ಯಾವಾಗ ನಡೆಯಲಿದೆ, ನಾಮಪತ್ರ ಸಲ್ಲಿಕೆ ಎಂದಿನಿಂದ  ಆರಂಭವಾಗಲಿದೆ ಎಂಬ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ಉಚಿತ ಸಹಾಯವಾಣಿ ಸಂಖ್ಯೆ 1950 ಗೆ ಮಾರ್ಚ್ 1 ರಿಂದ ಇಂದಿನವೆರೆಗೆ 240 ಕ್ಕೂ ಅಧಿಕ ಕರೆಗಳು ಬಂದಿದ್ದು, ಬಹುತೇಕ ಕರೆಗಳು ಯುವ ಮತದಾರರಿಂದಲೇ ಬಂದಿವೆ. ನಾವು ಈ ಬಾರಿ ಮತದಾನ ಮಾಡಬಹುದೇ, ನಮಗೆ ಹೊಸ ಎಪಿಕ್ ಕಾರ್ಡ್ ಯಾವಾಗ ದೊರೆಯಲಿದೆ ಎಂದು ಕರೆ ಮಾಡುವ ಮೂಲಕ ಮೊದಲ ಬಾರಿಗೆ ಚುನಾವಣೆಯಲ್ಲಿ ಮತ ಚಲಾಯಿಸಲು ಯುವ ಜನತೆ ಉತ್ಸಾಹ ತೋರುತ್ತಿದ್ದಾರೆ. ಇದಲ್ಲದೆ ಎಪಿಕ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ, ಹೆಸರು ತಿದ್ದುಪಡಿ, ತಮ್ಮ ಮತಗಟ್ಟೆಯ ವಿವರ, ಯಾವ ಶಾಲೆಯಲ್ಲಿ ನಮ್ಮ ಬೂತ್ ಇದೆ, ಎಪಿಕ್ ಕಾರ್ಡ್ ಇಲ್ಲದೇ ಮತ ಚಲಾಯಿಸಬಹುದಾ, ಎಪಿಕ್ ಹೊರತುಪಡಿಸಿ ಪರ್ಯಾಯ ಗುರುತಿನ ಚೀಟಿ ಯಾವುದು ಎಂಬ ಸಂದೇಹಗಳ ಜೊತೆಗೆ ತಮ್ಮ ವ್ಯಾಪ್ತಿಯ ಬಿ.ಎಲ್.ಓ ಗಳ ಕುರಿತು ಮಾಹಿತಿ ನೀಡುವಂತೆ ಕೂಡಾ ಕರೆಗಳು ಸ್ವೀಕೃತಗೊಳ್ಳುತ್ತಿವೆ .
ಲೋಕಸಭಾ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡುವ ಬಗ್ಗೆ ಕೂಡಾ ಹಿರಿಯ ನಾಗರೀಕರು ಮತ್ತು ವಿಕಲಚೇತನ ಮತದಾರರು ಸಹಾಯವಾಣಿಗೆ ಕರೆ ಮಾಡುತ್ತಿದ್ದು, ನಮಗೆ ಫಾರಂ 12ಡಿ ಯಾವಾಗ ನೀಡುತ್ತೀರಿ, ನಾವು ಮತದಾನ ಮಾಡುವ ದಿನಾಂಕ ಯಾವುದು ಎಂಬ ಬಗ್ಗೆ ಕರೆ ಮಾಡಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ತುರ್ತು ಮತ್ತು ಅಗತ್ಯ ಸೇವೆಗಳಿಗೆ ನೀಡಿರುವ ಮತದಾನದ ವ್ಯವಸ್ಥೆಯ ಬಗ್ಗೆ ಈಗಾಗಲೇ ತುರ್ತು ಮತ್ತು ಅಗತ್ಯ ಸೇವೆಗಳು ಎಂದು ಗುರುತಿಸಲಾಗಿರುವ ವಿವಿಧ ಇಲಾಖೆಗಳ ಮತ್ತು ವರ್ಗಗಳ ಮತದಾರರು ಸಹ ತಮ್ಮ ಮತದಾನ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ವಿಕಲಚೇತನ ಮತದಾರರು ಮತಗಟ್ಟೆಗಳಿಗೆ ತೆರಳಲು ತಮಗೆ ಅಗತ್ಯ ವಾಹನ ವ್ಯವಸ್ಥೆ ಮಾಡುವಂತೆ ಕೂಡಾ ಕರೆ ಮಾಡಿ ಮನವಿ ಸಲ್ಲಿಸುತ್ತಿದ್ದು, ಈ ಮನವಿಗಳ ಬಗ್ಗೆ ಸಂಬAದಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅವರಿಗೆ ಅಗತ್ಯ ವ್ಯವಸ್ಥೆಗಳನ್ನು ಒದಗಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ಸಾರ್ವಜನಿಕರು ವಿವಿಧ ಧಾರ್ಮಿಕ ಮತ್ತು ಕೌಟುಂಬಿಕ ಕಾಯಕ್ರಮಗಳನ್ನು ನಡಸಲು ಮತ್ತು ಈ ಬಗ್ಗೆ ಅಗತ್ಯವಿರುವ ಖರೀದಿಗಳನ್ನೂ ಮಾಡುವ ಕುರಿತಂತೆ ಸಹ ತಮ್ಮಲ್ಲಿರುವ ಗೊಂದಲಗಳಿಗೆ ಈ ಸಹಾಯವಾಣಿಗೆ ಕರೆ ಮಾಡಿ ತಮ್ಮ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ.
 

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...