ಪೊಲೀಸ್ ಕಾನ್ಸ್ಟೇಬಲ್ ಪತ್ನಿ ಸೇರಿದಂತೆ ೧೩ ಮಂದಿಗೆ ಕೊರೋನಾ ಸೋಂಕು

Source: sonews | By Staff Correspondent | Published on 8th July 2020, 8:07 PM | Coastal News |

•    ಇದುವರೆಗೆ ೨೦೮ ಕೋವಿಡ್  ಪ್ರಕರಣಗಳು ೫೮ ಮಂದಿ ಗುಣ ಮುಖ

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಕೊರೋನಾ ಸೋಂಕು ನಿಲ್ಲುವ ಸೂಚನೆ ನೀಡುತ್ತಿಲ್ಲ. ಬುಧವಾರ ೧೩ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಇದುವರೆಗೂ ೨೦೮ ಪ್ರಕರಣಗಳು ತಾಲೂಕಿನಲ್ಲಿ ದೃಢಪಟ್ಟಂತಾಗಿದೆ. ಇದರಲ್ಲಿ ೫೮ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, ೧೪೯ ಸಕ್ರೀಯ ಪ್ರಕರಣಳಿವೆ. 

‘ಕೊರೋನಾ ವಾರಿಯರ್’ ಆಗಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ 26 ವರ್ಷದ ಪತ್ನಿ ಹಾಗೂ ಒಂದು ವರ್ಷದ ಗಂಡು ಮಗುವಿಗೂ ಸೋಂಕು ತಗುಲಿದ್ದು ಪೊಲೀಸ್ ಇಲಾಖೆಯಲ್ಲಿ ಆತಂಕವನ್ನುಂಟು ಮಾಡಿದರೆ, ಉಳಿದಂತೆ, ಖಾಸಗಿ ಆಸ್ಪತ್ರೆಯ 24 ವರ್ಷದ ಸಿಬ್ಬಂದಿ, 43, 56 ವರ್ಷದ ಮಹಿಳೆಯರು, 24, 25 ವರ್ಷದ ಯುವತಿಯರು, 13, 9, 13 ವರ್ಷದ ಬಾಲಕಿಯರು, 5, 6 ವರ್ಷದ ಬಾಲಕರಿಗೆ ಸೋಂಕು ದೃಢಪಟ್ಟಿದೆ.

ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ೫೫ ವರ್ಷದ ವ್ಯಕ್ತಿ ಕೋವಿಡ್-೧೯ ಸೋಂಕು ಹಿನ್ನೆಲೆಯಲ್ಲಿ ಮೃತಪಟ್ಟಿರುವುದಾಗಿ ಮಾಹಿತಿ ದೊರಕಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...