ಭಟ್ಕಳದಲ್ಲಿ ಆಮ್ಲಜನಕ ಪೂರೈಕೆ ನಿಭಾಯಿಸಲು ಶತಪ್ರಯತ್ನ; ದಿನದಿಂದ ದಿನಕ್ಕೆ ಬೇಡಿಕೆ ಏರಿಕೆ; ಕೊರೊನಾ ತಡೆ ಲಸಿಕೆಯೂ ಖಾಲಿ

Source: S O News service | By I.G. Bhatkali | Published on 6th May 2021, 1:17 PM | Coastal News |

ಭಟ್ಕಳ: ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನವನ್ನು ಮುಂದುವರೆಸಿದ್ದಾರೆ.

ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ 28 ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.  13-16 ಸೋಂಕಿತರಿಗಷ್ಟೇ ಆಮ್ಲಜನಕ ಪೂರೈಕೆ ಅಗತ್ಯವಿತ್ತಾದರೂ ಮಂಗಳವಾರದ ವೇಳೆಗೆ ದಿಢೀರನೇ 20 ದಾಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರು ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಟ್ಕಳದಲ್ಲಿ ಆಮ್ಲಜನಕದ ಬೇಡಿಕೆ

ಭಟ್ಕಳ ಉಪವಿಭಾಗದಲ್ಲಿ ಆಮ್ಲಜನಕ ಕೊರತೆಯಾಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಭಟ್ಕಳಕ್ಕೆ ಹತ್ತಿರ ಅಂದರೆ ಕುಮಟಾದಿಂದ ಆಮ್ಲಜನಕ ಪೂರೈಕೆಗೆ ಚಾಲನೆ ನೀಡಿದ್ದೇವೆ. ಆಮ್ಲಜನಕ ಬೇಡಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ನೊಡೆಲ್ ಅಧಿಕಾರಿಯೋರ್ವರನ್ನು ನಿಯೋಜಿಸಲಾಗಿದೆ.
 - ಮಮತಾದೇವಿ, ಸಹಾಯಕ ಆಯುಕ್ತರು ಭಟ್ಕಳ

ಹೆಚ್ಚುತ್ತಿದ್ದಂತೆಯೇ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕುಂದಾಪುರದ ಜೊತೆಗೆ ಕುಮಟಾದ ಖಾಸಗಿ ಏಜೆನ್ಶಿಯಿಂದಲೂ ಆಮ್ಲಜನಕ ತರಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪರಿಣಾಮವಾಗಿ ಬುಧವಾರದ ಹೊತ್ತಿಗೆ 26 ಜಂಬೋ ಆಮ್ಲಜನಕ (ಅನಿಲ) ಸಿಲೆಂಡರ್‍ಗಳ ಜೊತೆಗೆ 135 ಕ್ಯುಬಿಕ್ ಲೀಟರ್ ದ್ರವ ರೂಪದ ಆಮ್ಲಜನಕವನ್ನು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಶೇಖರಿಸಿಟ್ಟುಕೊಳ್ಳಲಾಗಿದೆ. 

ಬುಧವಾರ ಮತ್ತೊಂದು ಸಾವು:
ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಬುಧವಾರ ತಾಲೂಕಿನಲ್ಲಿ 163 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ. ತಾಲೂಕಿನ ಜಾಲಿ ಪಟ್ಟಣ ಪಂಚಾಯತ ಕಾರಗದ್ದೆಯ 45 ವರ್ಷದ ಕೊರೊನಾ ಸೋಂಕಿತ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಕಳೆದ 15 ದಿನಗಳ ಅವಧಿಯಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಕೊರೊನಾ ಸೋಂಕಿತರ ಸಂಖ್ಯೆ 5ಕ್ಕೆ ಏರಿದೆ. ಬುಧವಾರ ಸಂಜೆ ಜಾಲಿ ಪಟ್ಟಣ ಪಂಚಾಯತ ವತಿಯಿಂದ ಮೃತರ ಮನೆಗೆ ಸೋಡಿಯಮ್ ಹೈಪೋಕ್ಲೋರೈಟ್ ಸಿಂಪಡಿಸಲಾಗಿದೆ.

 ಲಸಿಕೆಯೂ ಖಾಲಿ:
ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಲಸಿಕೆ ಬೇಡಿಕೆಯೂ ಹೆಚ್ಚಿದೆ. ಈಗಾಗಲೇ ತಾಲೂಕಿನ 60 ವರ್ಷ ಮೇಲ್ಪಟ್ಟ 4646 ಮಂದಿ ಮೊದಲನೆ ಡೋಸ್, 1390 ಜನರು 2ನೇ ಡೋಸ್, 45 ವರ್ಷ ಮೇಲ್ಪಟ್ಟ 4322 ಜನರು ಮೊದಲ ಡೋಸ್, 322 ಜನರು 2ನೇ ಡೋಸ್ ಹಾಗೂ ಇತರೇ 2977 ಜನರು ಕೊರೊನಾ ತಡೆ ಲಸಿಕೆ ಪಡೆದುಕೊಂಡಿದ್ದಾರೆ. ಈ ನಡುವೆ ಬುಧವಾರ ಲಸಿಕೆ ಸಂಪೂರ್ಣ ಖಾಲಿಯಾಗಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಇದನ್ನು ಖಚಿತಪಡಿಸಿರುವ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಇನ್ನು 2-3 ದಿನಗಳಲ್ಲಿ ಲಸಿಕೆ ಪೂರೈಕೆಯಾಗಬಹುದು ಎಂದು ತಿಳಿಸಿದ್ದಾರೆ.              

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...