ಮಾರ್ಗರಿಟಾ ದ್ವೀಪ: ಭಾರತದ ಪ್ರಗತಿಗೆ ಅಡ್ಡಿಯಾಗಿರುವ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕ್ರಮ-ನ್ಯಾಮ್ ಮೇಳದಲ್ಲಿ ಉಪರಾಷ್ಟ್ರಪತಿ ಅನ್ಸಾರಿ ಆಗ್ರಹ

Source: so english | By Arshad Koppa | Published on 19th September 2016, 8:46 AM | Global News |

ಮಾರ್ಗರಿಟಾ ದ್ವೀಪ, ವೆನೆಜ್ಯೂಲಾ, ಸೆ ೧೯: ಹದಿನೇಳನೇ ನ್ಯಾಮ್ (Non-Aligned Movement (NAM) Summit) ಸಮ್ಮೇಳನದಲ್ಲಿ ಭಾರತದ ಪರವಾಗಿ ಭಾಗವಸುತ್ತಿರುವ ತಂಡದ ಪ್ರಮುಖರಾಗಿ ಆಗಮಿಸಿರುವ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಭಯೋತ್ಪಾದನೆ ಭಾರತದ ಅಭಿವೃದ್ದಿಗೆ ಕಂಟಕವಾಗಿದ್ದು ಈ ಬಗ್ಗೆ ಕಠಿಣ ಕ್ರಮವನ್ನು ಆಗ್ರಹಿಸಿದರು. 

ಈ ಸಮ್ಮೇಳನದಲ್ಲಿ ಒಟ್ಟು 120 ರಾಷ್ಟ್ರಗಳು ಭಾಗವಹಿಸುತ್ತಿದ್ದು ಪರಸ್ಪರ ಸಹಕಾರ ಮತ್ತು ಪ್ರೋತ್ಸಾಹಗಳ ಮೂಲಕ ಬೆದರಿಕೆ, ಪೀಡೆಯನ್ನು ನಿರ್ಮೂಲನೆ ಮಾಡಲು ಯತ್ನಿಸುತ್ತಿವೆ. 

ಈ ಸಂದರ್ಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿಗಳು ಭಾರತದ ಅಭಿವೃದ್ದಿಗೆ ಭಯೋತ್ಪಾದನೆಯೇ ಪ್ರಮುಖ ಅಡ್ಡಿಯಾಗಿದ್ದು, ಮಾನವ ಹಕ್ಕುಗಳನ್ನು ಬೇಕಾಬಿಟ್ಟಿಯಾಗಿ ಉಲ್ಲಂಘಿಸಲಾಗುತ್ತಿದೆ. ಈ ಪರಿಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕಾಗಿದೆ ಎಂದು ತಿಳಿಸಿದರು. 

ಭಯೋತ್ಪಾದನೆಯ ವಿರುದ್ದ ಸಮರ ಸಾರಲು ಇದು ಸಕಾಲವಾಗಿದ್ದು ಇದಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಭಯೋತ್ಪಾದನೆಯ ಹುಟ್ಟಡಗಿಸಬೇಕಾಗಿದೆ ಎಂದು ತಿಳಿಸಿದರು. ಈ ಸಮ್ಮೇಳನದಲ್ಲಿ ಪ್ರಧಾನಿ ಮೋದಿಯವರು ಉಪಸ್ಥಿತರಿಲ್ಲ. 
 

Read These Next