ಶಿರೂರು:  ಪರಿಸರ ಜಾಗೃತಿಗಾಗಿ ಅಭಿಯಾನ....ಸಾವಿರ ಮರಗಳಿಗೆ ಕಾಳು ನೀರು ಯೋಜನೆ

Source: manju | By Arshad Koppa | Published on 24th February 2017, 3:18 PM | Coastal News | Special Report |

ಶಿರೂರು: ಜೆ.ಸಿ.ಐ ಶಿರೂರು, ಜ್ಯೂನಿಯರ್ ಜೇಸಿ ಶಿರೂರು ಇದರ ವತಿಯಿಂದ ಪರಿಸರ ಜಾಗೃತಿ ಹಾಗೂ ಪಕ್ಷಿಗಳ ಸಂಕುಲ ರಕ್ಷಣೆಗಾಗಿ ಹಕ್ಕಿಯ ಕೂಗಿಗೆ ದ್ವನಿಯಾಗುವ ಶೀರ್ಷಿಕೆಯ ಸಾವಿರ ಮರಗಳಿಗೆ ಕಾಳುನೀರು ಯೋಜನೆಗೆ ಜೇಸಿ ವಲಯಾಧ್ಯಕ್ಷ ಸಂತೋಷ.ಜಿ ಚಾಲನೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಮಾತನಾಡಿ ಆಧುನಿಕತೆಯ ಧಾವಂತದಲ್ಲಿ ಪರಿಸರ ನಾಶದ ಪ್ರಮಾಣ ಅತ್ಯದಿಕವಾಗಿದೆ.ಇದರಿಂದಾಗಿ ಪರಿಸರ ಅಸಮತೋಲನದ ಜೊತೆಗೆ ವನ್ಯಜೀವಿ ಮತ್ತು ಪಕ್ಷಿ ಸಂಕುಲಗಳು ಅಳಿವಿನ ಅಂಚಿಗೆ ಸಾಗಿದೆ.ಅನೇಕ ಪಕ್ಷಿ ಪ್ರಭೇದಗಳು ಈಗಾಗಲೇ ಅವನತಿ ಹೊಂದಿದೆ.ಮಾತ್ರವಲ್ಲದೆ ಆಹಾರದ ಕೊರತೆ ಕಾಣುತ್ತಿದೆ.ಹೀಗಾಗಿ ಈ ವರ್ಷ ಜೆಸಿಐ ವಲಯ 15ರ ಮೂಲಕ ಸರಳ ವಿಧಾನದ ಮೂಲಕ ಪರಿಸರ ರಕ್ಷಣೆಯ ಅಭಿಯಾನಕ್ಕೆ ಪ್ರಾರಂಭಗೊಂಡಿದೆ.ಸಾರ್ವಜನಿಕರು, ವಿದ್ಯಾರ್ಥಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಬಹುದಾಗಿದೆ.ಶಿರೂರು ಜೆಸಿಯ  ಕಾರ್ಯಕ್ರಮ ಪರಿಕಲ್ಪನೆ ಶ್ಲಾಘನೀಯವಾಗಿದೆ ಎಂದರು.

ಪಕ್ಷಿ ಸಂಕುಲ ರಕ್ಷಣೆಗೆ ಸಾರ್ವಜನಿಕರು ಕೈಜೋಡಿಸಬಹುದಾಗಿದೆ: ಜೆಸಿಐ ಸಂಸ್ಥೆ ರೂಪಿಸಿದ ಈ ಯೋಜನೆಯಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದೆ.ಯಾವುದೇ ಖರ್ಚಿಲ್ಲದೆ ಸರಳ ವಿಧಾನದ ಮೂಲಕ ಅಳವಡಿಸಬಹುದಾಗಿದೆ.ಈಗಾಗಲೇ ಉಪಯೋಗಿಸಿ ಎಸೆದ ತಂಪು ಪಾನಿಯಾದ ಬಾಟಲಿ ಅಥವಾ ತೆಂಗಿನ ಚಿಪ್ಪುಗಳಿಗೆ ದಾರವನ್ನು ಕಟ್ಟಿ ಮನೆಯಂಗಳದಲ್ಲಿರುವ ಮರಗಳಿಗೆ ಪೋಣಿಸಬೇಕು.ಪ್ರತಿನಿತ್ಯ ಒಂದಿಷ್ಟು ಕಾಳು ಹಾಗೂ ನೀರನ್ನು ನೀಡುವುದರಿಂದ ಪಕ್ಷಿಗಳಿಗೆ ಸಮೀಪದಲ್ಲೆ ಆಹಾರ ನೀಡಿದಂತಾಗುತ್ತದೆ.ಇದರಿಂದ ಪಕ್ಷಿ ಸಂಕುಲ ರಕ್ಷಣೆಯ ಜೊತೆಗೆ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದಾಗಿದೆ.ಶಿರೂರು ಜೆಸಿಐ ಅಧ್ಯಕ್ಷ ಅರುಣ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು.ಈ ಸಂಧರ್ಭದಲ್ಲಿ ವಲಯಾದಿಕಾರಿಗಳಾದ ನಿತೀನ್ ಅವಭೃತ್, ಮರಿಯಪ್ಪ, ಶ್ರೀನಿವಾಸ,ಸ್ಥಾಪಕಾಧ್ಯಕ್ಷ ಮೋಹನ್ ರೇವಣಕರ್,ನಿಕಟಪೂರ್ವಾಧ್ಯಕ್ಷ ಪ್ರಸಾದ ಪ್ರಭು, ಹರೀಶ ಶೇಟ್,ಶ್ರೀಕಾಂತ ಕಾಮತ್,ಕೃಷ್ಣಮೂರ್ತಿ ಶೇಟ್,ಜೂನಿಯರ್ ಜೇಸಿ ಲೋಕೇಶ್ ಪೂಜಾರಿ ಹಾಗೂ ಶಿರೂರು ಜೆಸಿಐ ಸದಸ್ಯರು ಹಾಜರಿದ್ದರು.

ಪ್ರಕಾಶ ಮಾಕೋಡಿ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ಪಾಂಡುರಂಗ ಅಳ್ವೆಗದ್ದೆ ವಂದಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...