ಭಟ್ಕಳ: ನಿಯಂತ್ರಣ ತಪ್ಪಿ ಉರುಳಿಬಿದ್ದ ಆಯಿಲ್ ಟ್ಯಾಂಕರ್

Source: sonews | By Staff Correspondent | Published on 19th November 2018, 5:21 PM | Coastal News |

ಭಟ್ಕಳ: ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ವಾಹನಕ್ಕೆ ಅಪಘಾತ ಸಂಭವಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಆಯಿಲ್ ಟ್ಯಾಂಕ್ ಉರುಳಿ ಬಿದ್ದ ಪರಿಣಾಮ ಮುಗುಲಿ ಹೊಂಡ ಬಳಿಯ ರಾ.ಹೆ. 66 ರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾದ ಘಟನೆ ರವಿವಾರ ರಾತ್ರಿ ಜರಗಿದೆ.

ಕೂಡಲೆ ಕಾರ್ಯಪ್ರವೃತ್ತಗೊಂಡ ಸ್ಥಳಿಯ ಆಝಾದ್ ಸ್ಪೋಟ್ರ್ಸ್ ಸೆಂಟರ್ ನ ಸದಸ್ಯರೂ ಟ್ಯಾಂಕರ್ ನ್ನು ಬದಿಗೆ ಸರಿಸಿ ಸುಗಮ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟರು.

ಬೆಳಗಾವಿಯಿಂದ ಮಂಗಳೂರು ಗೆ ಹೋಗುತ್ತಿದ್ದ ಆಯಿಲ್ ಟ್ಯಾಂಕರ್ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಗುಳಿ ಹೊಂಡ ರಾ.ಹೆ.66ರಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ವಾಹನವನ್ನು ಅಪಘಾತದಿಂದ ತಡೆಯಲು ಹೋಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಈ ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...