ಮುರ್ಡೇಶ್ವರ: ಜನತಾ ವಿದ್ಯಾಲಯದ “ಸುವರ್ಣ ಮಹೋತ್ಸವ”ದ ಪ್ರಥಮ ಹಂತದ ಕಾರ್ಯಕ್ರಮದ ಉದ್ಘಾಟನೆ

Source: varthabhavan | By Arshad Koppa | Published on 14th September 2017, 8:45 AM | Coastal News | Special Report |

ಕೆನರಾ ವೆಲ್‍ಫೆರ್ ಟ್ರಸ್ಟ್ ನ ಜನತಾ ವಿದ್ಯಾಲಯ, ಮುರ್ಡೇಶ್ವರ ದ  ಶಾಲೆಯ “ಸುವರ್ಣ ಮಹೋತ್ಸವ” ದ ಪ್ರಥಮ ಹಂತದ ಕಾರ್ಯಕ್ರಮದ ಉದ್ಘಾಟನೆ  ಹಾಗೂ ಈ ಪ್ರಯುಕ್ತ ಕೆನರಾ ವೆಲ್‍ಫೆರ್ ಟ್ರಸ್ಟ್‍ನ  ಪ್ರೌಢಶಾಲೆಗಳ ಚರ್ಚಾ ಸ್ಪರ್ಧೆ, ನೂತನವಾಗಿ ನಿರ್ಮಿಸಿದ ಪ್ರೊಜೆಕ್ಟರ್ ಶಿಕ್ಷಣದ ಆರಂಭೋತ್ಸವ”, ಶಾಲಾ ಮಹಾದ್ವಾರದ ಗೋಪುರದ ಕಾಮಗಾರಿಗೆ ಚಾಲನೆ ಈ ಕಾರ್ಯಕ್ರಮಗಳು ಶಾಲಾ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶ್ರೀ ಮಂಕಾಳ ಎಸ್. ವೈದ್ಯ, ಮಾನ್ಯ ಶಾಸಕರು, ಭಟ್ಕಳ ವಿಧಾನಸಭಾಕ್ಷೇv, ಕಾರ್ಯಕ್ರಮದ ಅಧ್ಯಕ್ಷರಾಗಿ, ಶ್ರೀ ಎಸ್. ಎಸ್. ಕಾಮತ್, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ, ಜನತಾ ವಿದ್ಯಾಲಯ, ಮುರ್ಡೇಶ್ವರ, ಮುಖ್ಯ ಅಥಿತಿಗಳಾಗಿ ಶ್ರೀಮತಿ ನಾಗರತ್ನ ಪಡಿಯಾರ, ಮಾನ್ಯ ಅಧ್ಯಕ್ಷರು, ಗ್ರಾಮ ಪಂಚಾಯತ ಮಾವಳ್ಳಿ 2, ಶ್ರೀಮತಿ ಸಿಂಧು ಭಾಸ್ಕರ ನಾಯ್ಕ, ಮಾನ್ಯ ಸದಸ್ಯರು, ಜಿಲ್ಲಾ ಪಂಚಾಯತ ಉತ್ತರ ಕನ್ನಡ,  ಜನಾಬ್ ಮೊಹಿಶಿನ್ ಜುಕ್ಕಾ, ಮಾನ್ಯ ಸದಸ್ಯರು, ತಾಲೂಕಾ ಪಂಚಾಯತ ಭಟ್ಕಳ, ಶ್ರೀ  ಗೋಪಾಲ ನಾಯ್ಕ, ಮಾನ್ಯ ಆದ್ಯಕ್ಷರು, ಎ.ಪಿ.ಎಮ್.ಸಿ. , ಭಟ್ಕಳ- ಹೊನ್ನಾವರ, ಶ್ರೀ ಕೆ. ವಿ. ಶೆಟ್ಟಿ, ಆಡಳಿತಾಧಿಕಾರಿಗಳು, ಕೆನರಾ ವೆಲ್‍ಫೆರ್ ಟ್ರಸ್ಟ್, ಅಂಕೋಲಾ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಸುಬ್ರಾಯ ನಾಯ್ಕ, ಜಮಾತ್-ಈ- ಮುಸ್ಲಿಂಮಿನ್, ಮುರ್ಡೇಶ್ವರದ ಪಧಾಧಿಕಾರಿಗಳಾದ ಡಾ. ಅಮೀನುದ್ಧಿನ್ ಗೌಡಾ, ಜನಾಬ್ ಶಬ್ಬರ್ ಶೇಖ್, ಜನಾಬ್ ಮಥೀನ್ ಶೇಖ್, ಜನಾಬ್ ಜಹೂರ್‍ಹಾಜಿ ಅಮೀನ್, ಜನಾಬ್ ಸೈಫುಲ್ಲಾ ಅಕ್ತರ್, ಜನಾಬ್ ನೀಲಗಿರಿ ಸಿದ್ಧಿ ಮೊಹಮದ್, ಜನಾಬ್ ಮನ್ನಾ ವಾಸೀಮ್ ಅಹಮದ್, ಜನಾಬ್ ಮಹಮದ್ ಗಂಗಾವಳಿ, ಜನಾಬ್ ಜುಬೇರ್ ಮನ್ನಾ, ಹಾಗೂ ಲಯನ್ಸ್ ಕ್ಲಬ್, ಮುರ್ಡೇಶ್ವರದ ಅಧ್ಯಕ್ಷರಾದ ಲಯನ್ ಶ್ರೀ ಮಂಜುನಾಥ ನಾಯ್ಕ, ಉದ್ಯಮಿಗಳಾದ ಶ್ರೀ ಈಶ್ವರ ನಾಯ್ಕ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ಡಿ. ಉಳ್ಳಿಕಾಶಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಪ್ರಾರಂಭದಲ್ಲಿ, ಶಾಲಾ ಮಹಾದ್ವಾರದ ಗೋಪುರದ ಕಾಮಗಾರಿಗೆ ಚಾಲನೆ ನೀಡುವ ಸಂಕೇತವಾಗಿ, ಶ್ರೀ ಮಹಾಗಣಪತಿ ಪೂಜೆಯನ್ನು ನೆರವೇರಿಸಿ, ಸ್ವ-ಮನಸ್ಸಿನಿಂದ, ಫಲಾಪೇಕ್ಷೆಯಿಲ್ಲದೆ, ಶಾಲಾ ಮಹಾದ್ವಾರ ಗೋಪುರದ ಕಾಮಗಾರಿಯನ್ನು ವಹಿಸಿಕೊಂಡ ಶ್ರೀ ರಾಜು ನಾಯ್ಕ, ಶಿಲ್ಪಿಗಳಿಗೆ ಶಾಸಕರಾದ ಶ್ರೀ ಮಂಕಾಳ ಎಸ್. ವೈದ್ಯ ರವರು ಶಾಲು ಹೊದೆಸಿ, ಸನ್ಮಾನಿಸಿದರು, ನಂತರ , ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸುಬ್ರಾಯ ನಾಯ್ಕ ಗುಮ್ಮನಹಕ್ಲು, ರವರು, ಪ್ರಸಾದ, ವೀಳ್ಯ – ತಾಂಬೂಲಗಳನ್ನು ನೀಡಿ,  ಶಿಲ್ಪಿ ಶ್ರೀ ರಾಜು ನಾಯ್ಕರªರನ್ನು  ಕಾಮಗಾರಿಗೆ  ಚಾಲನೆ ನೀಡುವಂತೆ ವಿನಂತಿಸಿದರು. ಈ ಮಧ್ಯ, ಕೆನರಾ ವೆಲ್‍ಫೆರ್ ಟ್ರಸ್ಟಿನ ಆಡಳಿತಾಧಿಕಾರಿಗಳಾದ ಶ್ರೀ ಕೆ. ವಿ. ಶೆಟ್ಟಿ ರವರು ಕೂಡಾ, ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಶಾಸಕರಾದ ಶ್ರೀ ಮಂಕಾಳ ವೈದ್ಯ ರವರಿಗೆ, ಪ್ರಸಾದ ನೀಡುವುದರ ಮೂಲಕ ಶಾಲು ಹೊದೆಸಿ, ಸನ್ಮಾನಿಸಿದರು.  ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಶಿಲ್ಪಿ ಬಂಧುಗಳಿಗೆ  ಪ್ರಸಾದ ಹಾಗೂ ಧೋತರ ನೀಡುವುದರ ಮುಲಕ ಗೌರವಿಸಲಾಯಿತು. ಅಧ್ಯಕ್ಷರಾದ ಶ್ರೀ ಎಸ್.ಎಸ್.ಕಾಮತ್‍ರವರು, “ಸುವರ್ಣ ಮಹೋತ್ಸವ”ದ ಚಾಲನೆಗೆ ಸಹಕಾರ ನೀಡಲು, ಪೂಜಾ ಸ್ಥಳ ಕ್ಕೆ ಆಗಮಿಸಿದ ಗಣ್ಯರನ್ನು ಹೃದಯ ಪುರ್ವಕವಾಗಿ ಅಭಿನಂದಿಸಿದರು. ನಂತರ ಶಾಸಕ ಶ್ರೀ ಮಂಕಾಳ ವೈದ್ಯ ರವರು ರಿಬ್ಬನ್ ಕತ್ತರಿಸುವುದರ ಮೂಲಕ ಪ್ರೊಜೆಕ್ಟರ್ ಶಿಕ್ಷಣದ ಆರಂಭೋತ್ಸವ ವನ್ನು ನೆರವೇರಿಸಿದರು. 

ಕೆನರಾ ವೆಲ್‍ಫೆರ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯ ಡಾ. ದಿನಕರ ದೇಸಾಯಿಯವರ ಹುಟ್ಟುಹಬ್ಬದ ಪ್ರಯುಕ್ತ ವಾಗಿ ದೀಪ ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮಗಳನ್ನು ಆರಂಭಿಸಿ, ದೇಸಾಯಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಎಲ್ಲರೂ ಗೌರವವನ್ನು ಸಲ್ಲಿಸಿ, ಶಾಲಾ ವಿದ್ಯಾರ್ಥಿಗಳು ಪೂಜ್ಯ ದಿನಕರ ದೇಸಾಯಿಯವರು ಬರೆದ ಕವನಗಳನ್ನು ವಾಚಿಸಿ, ಪೂಜ್ಯರನ್ನು ಸ್ಮರಿಸಿದರು.  ಸಭಾಕಾರ್ಯಕ್ರಮದ ಪೂರ್ವದಲ್ಲಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ಡಿ. ಉಳ್ಳಿಕಾಶಿ ಯವರು, ಸಭಾಗಣ್ಯರನ್ನು ಪರಿಚಯಿಸಿ, ಎಲ್ಲರನ್ನು ಸ್ವಾಗತಿಸಿದರು. ಉದ್ಘಾಟಕರಾದ ಶ್ರೀ ಮಂಕಾಳ ಎಸ್. ವೈದ್ಯ ರವರು “ಸುವರ್ಣ ಮಹೋತ್ಸವ” ದ ಪ್ರಯುಕ್ತ ಹಮ್ಮಿಕೊಂಡಿರುವ ಶಾಲೆಯ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು, “ನÁನು ಕಲಿತ ಶಾಲೆಗೆ ಯಾವುದೇ ರೀತಿಯ ಕೊರತೆ ಬರಬಾರದು. ಈ ನಿಟ್ಟಿನಲ್ಲಿ ಏನು ಬೇಕಾದರೂ ನಾನು ಕೊಡಲು ಸಿದ್ಧನಿದ್ದೇನೆ.”ಎಂದು ಸಭೆಯಲ್ಲಿ ಘೋಷಿಸಿ, ಮುಂದುವರೆದು,  ಶಾಲೆಯ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಕುಳಿತು ಊಟ ಮಾಡಲು ಅನುಕೂಲವಾಗುವಂತೆ, ಕಟ್ಟಿಸುತ್ತಿರುವ ಭೋಜನಾಲಯದ ಕಮಗಾರಿಗಳನ್ನು ಅಕ್ಟೋಬರ್ 31 ರೊಳಗಾಗಿ ಪೂರೈಸಿ, ಶಾಲೆಗೆ ಹಸ್ತಾಂತರಿಸುವುದಾಗಿ ಭರವಸೆ ನೀಡಿ, ಕಂಪ್ಯೂಟರ್ ವಿಭಾಗವನ್ನು ಆರಂಭಿಸಲು, 10 ಕಂಪ್ಯೂಟರ್‍ಗಳನ್ನು ಒದಗಿಸುವುದಾಗಿ ಆಶ್ವಾಸನೆ ನೀಡಿದರು. 

ನಂತರ ಮಾತನಾಡಿದ ಗ್ರಾಮ. ಪಂ. ಮಾವಳ್ಳಿ 2 ರ ಆದ್ಯಕ್ಷರಾದ ಶ್ರೀಮತಿ ನಾಗರತ್ನ ಪಡಿಯಾರರವರು, ಶಾಲಾ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, “ಸುವರ್ಣ ಮಹೋತ್ಸವ” ಕ್ಕೆ ಪಂಚಾಯತದ ವತಿಯಿಂದ ಸಂಪೂಣ್ ಸಹಕಾರ ನೀಡುವುದಾಗಿ ತಿಳಿಯಪಡಿಸಿದರು. ಶ್ರೀಮತಿ ಸಿಂಧೂ ಭಾಸ್ಕರ ನಾಯ್ಕ ರವರು ಮಾತನಾಡಿ, ಜಿಲ್ಲಾ ಪಂಚಾಯತದ ಸಹಕಾರದಲ್ಲಿ, ಶಾಲೆಗೆ ಅವಶ್ಯವಿರುವ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಾಗಿ, ಆಶ್ವಾಸನೆ ನೀಡಿದರು. ತಾಲೂಕಾ ಪಂಚಾಯತ್‍ದ ಸದಸ್ಯರಾದ ಜನಾಬ್ ಮೊಹಿಶಿನ್ ಜುಕ್ಕಾ ರವರು ಮಾತನಾಡಿ, ತಾಲೂಕಾ ಪಂಚಾಯತದ ವತಿಯಿಂದ ಎಲ್ಲಾ ಸಹಕಾರ ನೀಡುವುದಾಗಿ, ತಿಳಿಯಪಡಿಸಿ, ಕಾರ್ಯಕ್ರಮದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. 

ಕೆನರಾ ವೆಲಫೆರ್ ಟ್ರಸ್ಟ್‍ನ ಆಡಳಿತಾಧಿಕಾರಿಗಳಾದ ಶ್ರೀ ಕೆ. ವಿ. ಶೆಟ್ಟಿಯವರು ಈ ಶಾಲೆಯ ಶಾಲಾಬಿವೃದ್ಧಿ ಸಮಿತಿಯ ಸದಸ್ಯರ ಹಾಗೂ ಸಿಬ್ಬಂದಿಗಳ “ಸುವರ್ಣ ಮಹೋತ್ಸವ”ದ ಬಗೆಗಿನ ಕೆಲಸ ಕಾರ್ಯಗಳನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಾ, ಈ ಶಾಲೆಯ ಮಾತೃ ಸಂಸ್ಥೆ, ಕೆನರಾ ವೆಲ್‍ಫೆರ್ ಟ್ರಸ್ಟ್ ನ ಧ್ಯೇಯೋದ್ಧೇಶಗಳನ್ನು ಸಭೆಗೆ ತಿಳಿಯಪಡಿಸಿ, ಶಾಲೆಗೆ ಅತೀ ಹೆಚ್ಚಿನ ಸಹಕಾರ ನೀಡುವುದಾಗಿ ಘೋಷಿಸಿದರು. ಜಮಾತ್ –ಈ- ಮುಸ್ಲಿಮಿನ್ ಪರವಾಗಿ, ಡಾ|| ಅಮಿನುದ್ಧೀನ್ ಗಾಡಾ ರವರು ಮಾತನಾಡಿ, “ಸುವರ್ಣ ಮಹೋತ್ಸವ” ಕ್ಕೆ ಸಂಪೂರ್ಣ ಸಹಕಾರ ನೀಡುವುದಾಗ ಸಭೆಗೆ ಆಗಮಿಸಿದ ಎಲ್ಲಾ ಮುಸ್ಲೀಂ ಬಂಧುಗಳ ಪರವಾಗಿ, ಕಾರ್ಯಕ್ರಮದ ಕುರಿತು, ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಶುಭಹಾರೈಸಿದರು. 

ಕೊನೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಎಸ್. ಎಸ್. ಕಾಮತ್ ರವರು ಮಾತನಾಡಿ, ಸುವರ್u ಮಹೋತ್ಸವ ದ ಹಂತ ಹಂತದ ಕಾರ್ಯಕ್ರಮಗಳನ್ನು ವಿವರಿಸಿ, ಪ್ರಥಮ ಹಂತದ ಕಾರ್ಯಕ್ರಮ ಕೆನರಾ ವೆಲ್‍ಫೆರ್ ಟ್ರಸ್ಟಿನ ಪ್ರವಢಶಾಲೆಗಳಿಗಾಗಿ, ದ್ವಿತೀಯ ಹಂತದ ಕಾರ್ಯಕ್ರಮ ಭಟಕಳ ತಾಲೂಕಿನ ಪ್ರೌಢಶಾಲೆಗಳಿಗಾಗಿ, ತೃತೀಯ ಹಂತದ ಕಾರ್ಯಕ್ರಮ ನಮ್ಮ ಶಾಲೆಯ ಆಸ್ರಿತ ಪ್ರಾಥಮಿಕ ಶಾಲೆಗಳಿಗಾಗಿ, ನಾಲ್ಕನೇ ಹಂತದ ಕಾರ್ಯಕ್ರಮ ಗೌರವಾನ್ವಿತ ಶಿಕ್ಷಣ ಪ್ರೇಮಿಗಳ ಸಲುವಾಗಿ, ಐದನೇ ಹಂತದ ಕಾರ್ಯಕ್ರಮವನ್ನು ಕೊನೆಯ ಕಾರ್ಯಕ್ರಮವನ್ನಾಗಿ, ವೈಭವಪೂರಿತವಾಗಿ, “ಸುವರ್ಣ ಮಹೋತ್ಸವ”ದ ಕಾರ್ಯಕ್ರಮವನ್ನು  ಡಿಸೆಂಬರ್ ತಿಂಗಳ ಕೊನೆಯೊಳಗಾಗಿ, ಮುಗಿಸುವ ನಿರೀಕ್ಷೆ  ವ್ಯಕ್ತಪಡಿಸಿದರು. ಹಾಗೂ ಈವರೆಗೆ ಸಹಕರಿಸಿದ ಎಲ್ಲರನ್ನೂ ಹೃದಯಪೂರ್ವಕವಾಗಿ ಅಭಿನಂದಿಸಿ, ಎಲ್ಲರ ಸಹಕಾರ ಕೋರಿದರು. ಈ ಕಾರ್ಯಕ್ರಮವನ್ನು ಶಾಲಾ ಸಹಶಿಕ್ಷಕರಾದ ಶ್ರೀ ಮಹೇಶ ನಾಯ್ಕ ನಿರೂಪಿಸಿದರು. ಶ್ರೀಮತಿ ಆಶಾ ಕಲ್ಮನೆ ಆಭಾರಮನ್ನಿಸಿದರು. ನಂತರ ಕೆನರಾ ವೆಲ್‍ಫೆರ್ ಟ್ರಸ್ಟಿನ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ “ಚರ್ಚಾ ಸ್ಪರ್ಧೆ” ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...