ಪಟ್ಟಣದಲ್ಲಿ ಜಿ೨ ಮಾದರಿಯ ಮನೆಗಳ ನಿರ್ಮಾಣ : ಹೆಬ್ಬಾರ

Source: sonews | By sub editor | Published on 11th June 2017, 10:21 PM | Coastal News | Incidents |

ಮುಂಡಗೋಡ : ಸಿದ್ದರಾಮಾಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಯಾರೂ ಹಸಿವೆಯಿಂದ ಬಳಲಬಾರದು  ಹಾಗೂ ಸೂರು ಇಲ್ಲದೆ ಕೊರಗಬಾರದೆಂದು ತಿರ್ಮಾನಕ್ಕೆ ಬಂದಿದ್ದು ಆ ಪ್ರಯುಕ್ತ ಸರಕಾರವು ಉಚಿತವಾಗಿ ಅಕ್ಕಿ  ನೀಡುತ್ತಿದೆ ಹಾಗೂ ಪುಕ್ಕಟೆಯಾಗಿ ಮನೆ ನೀಡುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು .
ಅವರು ಪಟ್ಟಣ ಪಂಚಾಯತ್ ಆವರಣದಲ್ಲಿ ಪ.ಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಪಟ್ಟಾವಿತರಣೆ ಮಾಡಿ ಮಾತನಾಡುತ್ತಿದ್ದರು.
ಬರುವ ದಿನಗಳಲ್ಲಿ ೧೦ ಲಕ್ಷಕ್ಕಿಂತ ಅಧಿಕ ಮನೆಗಳನ್ನು ಬಡವರಿಗಾಗಿ ಪುಕ್ಕಟೆಯಾಗಿ ನೀಡಲಾಗುವುದು. ನಮ್ಮ ಸರಕಾರ ಬಡವರ ಪರವಾಗಿದೆ ಅದಕ್ಕಾಗಿ ಉಚಿತವಾಗಿ ಅಕ್ಕಿ, ವಿದ್ಯಾರ್ಥಿಗಳಿಗೆ ಹಾಲು ಪುಸ್ತಕ, ಶಾದಿಭಾಗ್ಯ, ಪುಕ್ಕಟೆಯಾಗಿ ಮನೆ ಹಾಗೂ ಇನ್ನೂ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ
ಕ್ಷೇತ್ರದ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲ ವಾರ್ಡ್‌ಗಳನ್ನು ಪಕ್ಷಾತೀತವಾಗಿ ಅಭಿವೃದ್ದಿ ಪಡಿಸುತ್ತೇವೆ. ಮುಂಡಗೋಡ ಪಟ್ಟಣದಲ್ಲಿ ಸುಮಾರು ೭೦೦-೮೦೦ ಜನರಿಗೆ ಮನೆಗಳ ಅವಶ್ಯಕತೆ ಇದೆ ಎಂದ ಅವರು ಪಟ್ಟಣದ ಸ್ಲಂ ಪ್ರದೇಶಗಳ ಅಭಿವೃದ್ದಿ ಪಡಿಸಿ ಅಲ್ಲಿ ವಾಸಿಸುವ ಒಂದು ಮನೆಗೆ ಸುಮಾರು ೫ ಲಕ್ಷ ರೂ ಬೆಲೆಯ  ೨೦೦ ಮನೆಗಳನ್ನು  ನಿರ್ಮಾಣ ಮಾಡಲಾಗುವುದು
ಬರುವಂತ ದಿನಗಳಲ್ಲಿ ಹುಬ್ಬಳ್ಳಿ ಯಲ್ಲಿ ಸರಕಾರದಿಂದ ನಿರ್ಮಿತವಾಗಿರುವ ಜಿ೨ ಮಾದರಿಯಲ್ಲಿ ಮನೆಗಳನ್ನು ಕಟ್ಟಲಾಗುವುದು ಎಂದರು. ನಮ್ಮ ಅಧಿಕಾರವಧಿಯಲ್ಲಿ ಮುಂಡಗೋಡ ಪಟ್ಟಣ ಅಭಿವೃದ್ದಿಯಾಗಿದೆ ಎಂದು ಪರ‌ಊರಿನವರು ಹೇಳುತ್ತಿರುವುದು ಕೇಳಿಬರುತ್ತಿದೆ ಎಂದರು
ಬ್ಲಾಕ್ ಕಾಂಗೈ ಅಧ್ಯಕ್ಷ ಹಾಗೂ ಜಿಲ್ಲಾಪಂಚಾಯತ್ ಸದಸ್ಯ ರವಿಗೌಡಾ ಪಾಟೀಲ, ಜಿಪಂ ಸದಸ್ಯ ಎಲ್.ಟಿ.ಪಾಟೀಲ, ತಾಪಂ ಅಧ್ಯಕ್ಷೆ ದ್ರಾಕ್ಷಾಯಣಿ ಸುರಗೀಮಠ, ಪಪಂ ಅಧ್ಯಕ್ಷ ಮಹ್ಮದರಫೀಕ ಇನಾಮದಾರ, ಎಪಿ‌ಎಮ್‌ಸಿ ಅಧ್ಯಕ್ಷ ದೇವು ಪಾಟೀಲ, ಮಾರ್ಕೇಟಿಂಗ ಸೊಸೈಟಿ ಅಧ್ಯಕ್ಷ ಪಿ.ಎಸ್.ಸಂಗೂರಮಠ,ಎಚ್.ಎಮ್.ನಾಯಕ, ಎಪಿ‌ಎಮ್‌ಸಿ ಸದಸ್ಯ ಮಂಜುನಾಥ ವೆರ್ಣೇಕರ, ಪ.ಪಂ ಸದಸ್ಯರಾದ ಅಲ್ಲಿಖಾನ ಪಠಾಣ, ಲತೀಫ ನಾಲಬಂದ, ಎನ್.ಡಿ.ಕಿತ್ತೂರ ಯುವ ಧುರಿಣ ಮಹಮ್ಮದಗೌಸ ಮಕಾನದಾರ, ಇರ್ಫಾನ್ ಸವಣೂರ, ಆಸೀಫ ಮಕಾನದಾರ, ಜೈನೊ ಬೆಂಡಿಗೇರಿ, ರಾಮಣ್ಣ ಪಾಲೇಕರ, ಮೌನೇಶ್ವರ ಕೊರವರ, ಶಕುಂತಲಾ ತಳವಾರ ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ಪ.ಪಂ ಸದಸ್ಯರು ಮತ್ತು ಸಿಬ್ಬಂದಿಗಳು ಸೇರಿದಂತೆ ಮುಂತಾದ ಕಾಂಗೈಕಾರ್ಯಕರ್ತರು ಉಪಸ್ಥಿತರಿದ್ದರು
 

Read These Next

ದಾವಣಗೆರೆ: ಯುವಕನ ಬರ್ಬರ ಕೊಲೆ

ದಾವಣಗೆರೆ: ಯುವಕನೋರ್ವನನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಹರಿಹರ ತಾಲೂಕಿನ ವಿದ್ಯಾನಗರ ಎಂಬಲ್ಲಿ ಇಂದು ...

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...