ಅಕಸ್ಮೀಕವಾಗಿ  ಬಿದ್ದು  ವ್ಯಕ್ತಿಯ ಸಾವು

Source: sonews | By sub editor | Published on 9th March 2018, 11:36 PM | Coastal News | Don't Miss |

ಮುಂಡಗೋಡ : ಆಕಸ್ಮಿಕ ವಾಗಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಬೆಡಸ್‍ಗಾಂವ ಪಂಚಾಯತ್ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದಲ್ಲಿ ಜರುಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಮೃತ ಪಟ್ಟವನನ್ನು ಬಾಳೆಕೊಪ್ಪದ ನಿವಾಸಿ ಬಸವರಾಜ ಠಾಣೇಕರ(40) ಎಂದು ತಿಳಿದು ಬಂದಿದೆ

ಮೃತನು ಮೂಲತಃ  ಹಳಿಯಾಳ ತಾಲೂಕಿನವರಾಗಿದ್ದು ಕಳೆದ ಒಂದು ವರ್ಷದಿಂದ ಕೂಲಿ ಕೆಲಸಕ್ಕೆ ಬಂದು ಬಾಳೆಕೊಪ್ಪದ ಹುಲಗವ್ವಾ ಹುಲ್ಲವಾರ ಎಂಬವರ ಮನೆಯಲ್ಲಿ ಉಳಿದುಕೊಂಡಿದ್ದನು ಎನ್ನಲಾಗಿದೆ. ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಸರಾಯಿ ಚಟ ಹಚ್ಚಿಕೊಂಡಿದ್ದನು ಎಂದು ಹೇಳಲಾಗುತ್ತಿದೆ. ದಿನಾಂಕ ಮಾರ್ಚ್ 5 ರಂದು ಶಿರಸಿ ಮಾರಿಕಾಂಬ ಜಾತ್ರೆಗೆ ಹೋಗಿ ಬರುವುದಾಗಿ ಹೇಳಿಹೋದವನು ಗ್ರಾಮಕ್ಕೆ ಹಾಯ್ದ ರಸ್ತೆಯ ಪಕ್ಕದಲ್ಲಿರುವ ಜಗದೀಶ ಬೆಕ್ಕೊಡ್ ಎಂಬುವರ ಬಾಳೆ ತೋಟದ ಹತ್ತಿರ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸ ದೂರಿನಲ್ಲಿ ತಿಳಿಸಲಾಗಿದೆ
 

Read These Next

ಭಟ್ಕಳದಲ್ಲಿ ಹೆದ್ದಾರಿಗೆ ಮತ್ತೆ ಹೊಸ ರೂಪ ನೀಡಿದ ಪ್ರಾಧಿಕಾರ, ಫ್ಲೈ ಓವರ್ರೂ ಇಲ್ಲ, ಅಂಡರ್ ಪಾಸೂ ಇಲ್ಲ; 30ಮೀ.ಗೆ ಸೀಮಿತ

ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಗೆ ವೇಗ ದೊರಕಿರುವಂತೆಯೇ, ಭಟ್ಕಳ ಶಹರ ವ್ಯಾಪ್ತಿಯಲ್ಲಿ ನೂತನ ಹೆದ್ದಾರಿ ನಿರ್ಮಾಣಕ್ಕೆ ...