ಮುಂಡಗೋಡ :  ಸಾಲಮನ್ನಾ ಕಾಂಗ್ರೆಸ್ ಸರಕಾರದ ಮಹತ್ಸಾದನೆ : ಶಿವರಾಮ ಹೆಬ್ಬಾರ

Source: nazir | By Arshad Koppa | Published on 24th June 2017, 8:34 AM | Coastal News | Special Report |

ಮುಂಡಗೋಡ : ರಾಜ್ಯ ರೈತರ 8500 ಕೋಟಿ ಸಾಲಮನ್ನಾ ಮಾಡಿ ಪ್ರತಿ  ರೈತರ 50 ಸಾವಿರ ರೂ ಸಾಲಮನ್ನಾ ಮಾಡುವ ಅಭೂತ ಪೂರ್ವ ನಿರ್ಣಯ ವಿಧಾನ ಸಭೆಯಲ್ಲಿ ತೆಗೆದುಕೊಂಡಿದ್ದು ನಮಗೆ ಹರ್ಷವಾಗುತ್ತಿದೆ. ಇದು ಕಾಂಗ್ರೆಸ್ ಸರಕಾರದ ಮಹತ್ಸಾದನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು
ಅವರು ಬುಧವಾರ ರಾತ್ರಿ ಮುಂಡಗೋಡ ನ ಶಿವಾಜಿ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಹಿಹಂಚಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.


 ಸಹಕಾರಿ ಸಂಘಗಳಲ್ಲಿ ರೈತರು ಮಾಡಿದ 50 ಸಾವಿರ ರೂಪಾಯಿ ವರೆಗಿನ  ಸಾಲವನ್ನು ರಾಜ್ಯ ಸಿದ್ದರಾಮಯ್ಯ ಕಾಂಗ್ರೆಸ್ ಸರಕಾರ ಮನ್ನಾ ಮಾಡಿದೆ. ರೈತನ ಕಷ್ಟಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಸರಕಾರ ರೈತರ ಕುರಿತು ಕಾಂಗ್ರೆಸ್ ಪಕ್ಷಕ್ಕೆ ಕಾಳಜಿ ಇದೆ ಎಂದು ಎತ್ತಿ ತೋರಿಸಿದ್ದೇವೆ. ಇದರಿಂದ ರೈತ ವರ್ಗ ಹರ್ಷ ವ್ಯಕ್ತಪಡಿಸುತ್ತಿದೆ. ಅನ್ನ ಕೊಡುವ ಧಣಿಗೆ(ರೈತ) ನಾವು ಎಂದೂ ಮೋಸಮಾಡುವುದಿಲ್ಲ


ರೈತರ ಕುರಿತು ಮೊಸಳೆ ಕಣ್ಣಿರು ಹಾಕುತ್ತಿರುವ  ಬಿಜೆಪಿ, ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ 50 ಸಾವಿರ ರೂ ಸಾಲ ಮನ್ನಾಮಾಡಲಿ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಯ ಸಾಲವನ್ನು ಕೇಂದ್ರ ಸರಕಾರ ಮಾಡಬೇಕಾಗುತ್ತದೆ ಎಂದರು
ಬಿಜೆಪಿಗೆ ರೈತ ಕುರಿತು ಕಾಳಜಿ ಇದ್ದರೆ ಬರುವ ದಿನಗಳಲ್ಲಿ ಬಿಜೆಪಿಯು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಯ ರೈತರ 50 ಸಾವಿರ ರೂ ಸಾಲವನ್ನು ಮನ್ನಾ ಮಾಡಲಿ ಎಂದ ಅವರು ಸಾಲಮನ್ನಾ ಮಾಡದಿದ್ದರೆ ಬ್ಯಾಂಕ್ ಗಳ ಮುಂದೆ ರೈತರ ಜತೆಗೂಡಿ ಧರಣಿ ಸತ್ಯಾಗ್ರಹ ಹೂಡುತ್ತೇವೆ ಎಂದು ಬಿಜೆಪಿಯನ್ನು ಎಚ್ಚರಿಸಿದರು. ಕೇಂದ್ರ ಸರಕಾರವು ರೈತರ ಸಾಲವನ್ನು ಮಾಡದೇ ಇದ್ದರೆ ರೈತರ ಕುರಿತು ಬಿಜೆಪಿ ಮಾತನಾಡುವ ನೈತಿಕ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ.
ಈ ಸಂದರ್ಭದಲ್ಲಿ  ಬ್ಲಾಕ್ ಅಧ್ಯಕ್ಷ ರವಿಗೌಡಾ ಪಾಟೀಲ, ಪಿ.ಎಸ್.ಸಂಗೂರಮಠ, ಎಚ್.ಎಮ್.ನಾಯಕ್, ಪ್ರಶಾಂತ ಲಮಾಣಿ,ಪ.ಪಂ ಅಧ್ಯಕ್ಷ ರಫೀಕ ಇನಾಮದಾರ, ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ರಾಬರ್ಟ ಲೋಬೊ  ಕೃಷ್ಣಾ ಹಿರೇಹಳ್ಳಿ, ಎಪಿಎಮ್‍ಸಿ ಅಧ್ಯಕ್ಷ ದೇವು ಪಾಟೀಲ, ಪ.ಪಂ ಸದಸ್ಯರಾದ ಅಲ್ಲಿಖಾನ ಪಠಾಣ, ,ಸಂಜು ಪೀಶೆ, ಲತೀಫ ನಾಲಬಂದ ರಾಮಣ್ಣ ಪಾಲೇಕರ, ಮಹ್ಮದಗೌಸ ಮಕಾನದಾರ,ಸಿದ್ದಪ್ಪಾ ಹಡಪದ,ಆಸೀಫ ಮಕಾನದಾರ, ಮಂಜುನಾಥ ಕಟಗಿ ಇರ್ಫಾನ ಸವಣೂರ, ತಾ.ಪಂ ಸದಸರಾದ ಗಣಪತಿ ಭೋವಿ, ಮಹ್ಮದಜಾಫರ ಜ್ಞಾನದೇವ ಗುಡಿಯಾಳ,ಜೈನೋ ಬೆಂಡಿಗೇರಿ ಮುಂತಾದವರು ಇದ್ದರು 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...