ಮುಂಡಗೋಡ: ಹೋರಿ  ಭಾರಿ ಜಬರದಸ್ತ ಐತಿ ಕೊರಳಿನ ಕೊಬ್ರಿಗೆ ಕೈ ಹಾಕಾಕ ಕೊಡಂಗಿಲ್ಲಾ ದಾರಿ ಬಿಡಿ

Source: nazir | By Arshad Koppa | Published on 22nd October 2017, 8:10 AM | Coastal News | Special Report |


ಮುಂಡಗೋಡ : ಏ ಹುಡುಗ್ರಾ ಹುಷಾರು ಈ  ಹೋರಿ  ಭಾರಿ ಜಬರದಸ್ತ ಐತಿ ಕೊರಳಿನ ಕೊಬ್ರಿಗೆ ಕೈ ಹಾಕಾಕ ಕೊಡಂಗಿಲ್ಲಾ, ದಾರಿ ಬಿಡಿ ನೋಡಿ ಹಿಡಿರಿ ಯಾರ್ ಕೊರಳಿನ ಕೊಬ್ರೀಗೆ ಕೈ ಹಾಕತಾರ ನೋಡುವ ಎಂದು ಸ್ವಲ್ಪ ಧ್ಯಾನಕೊಟ್ಟು ಕೇಳ್ರೀ ಈ ನಮ್ಮ ಹೋರಿಯನ್ನು ಯಾರ್ ಕೊರಳಿನ ಕೊಬ್ರಿ ಮುರಿದು ತಂದುಕೊಡುತ್ತಾರ ಅವರಿಗೆ ಸಾವಿರ ರೂ ಬಹುಮಾನ. ಸಾಹಸಿ ಯುವಕರನ್ನು ಹುರಿದುಂಬಿಸುವ ಕಾರ್ಯಕ್ರಮ ನಿರೂಪಣೆ ಮಾಡುವವನ ಮಾತು ಯುವಕರನ್ನು ಹುರಿದುಂಬಿಸಲಾಗುತ್ತಿತ್ತು.

ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಹಳೂರ ಓಣಿಯಲ್ಲಿ ಶುಕ್ರವಾರ ಅಯೋಜಿಸಲಾಗಿದ್ದ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಹೋರಿಗಳನ್ನು ಓಡಿಸುವಾಗ ಕೇಳಿಬಂದ ಶಬ್ದ. ಹೋರಿಗಳನ್ನು, ಎತ್ತುಗಳನ್ನು ಕೊರಳಿಗೆ ಕೊಬ್ರಿ ಮಾಲೆ, ಗಂಟೆಗಳ ಮಾಲೆ, ಕೊಂಬುಗಳಿಗೆ ವಿವಿಧ ನಮೂನೆ ಬಟ್ಟೆಗಳ ಚಿತ್ತಾರದಿಂದ, ಬಣ್ಣ ಬಣ್ಣದಿಂದ ಅಲಂಕರಿಸಿ, ವಿವಿಧ ನಮೂನೆಯ ಬಣ್ಣ ಬಣ್ಣದ ರಿಬ್ಬನ್ ಬಲೂನಗಳಿಂದ ಗಳಿಂದ ದೇಹದ ಕೆಲವು ಭಾಗಗಳಿಗೆ ಬಣ್ಣವನ್ನು ಲೇಪಿಸಿ ಶೃಂಗರಿಸಿ ದನಬೇದರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ದನಗಳನ್ನು ನೋಡುವುದೇ ಒಂದು ಭಾಗ್ಯ. ಶೃಂಗಾರಗೊಂಡ ದನಗಳು ಓಡುವುದನ್ನು ನೋಡುವುದು, ಅವುಗಳ ಕೊಬ್ರೀ, ಹಾಗೂ ಹೊರಿಯನ್ನು ಹಿಡಿಯಲು ಕೈ ಹಾಕುವ ಯುವ ಹಾಗೂ ಕೊಬ್ರೀ ಹರಿಯಲೆಂದೇ ಬೆನ್ನಟ್ಟುವ ಸಾಹಸಿಗರ ದೃಶ್ಯ ರೋಮಾಂಚನ ವೇನಿಸುತ್ತಿದೆ. ಕಣ್ಣು ಬಿಟ್ಟು ಕಣ್ಣು ತೆಗೆಯದೊರಳಗೆ ಸೂಂಯ್ ಎಂದು ಓಡುವ ಹೋರಿ ದಡ ಮುಟ್ಟಿಬಿಟ್ಟಿರುತ್ತದೆ. ದನ ಓಡುವಾಗ ಯಾರ್ ಸೀಗದೇ ಓಡುತ್ತಿರುವಾಗ ಸಹಾಸಿಗಳು ದನ ಹಿಡೆದೆ ಬಿಟ್ಟೇವು ಎನ್ನುವಂತೆ  ಹೂಯ್ ಹೂಯ್  ಎಂದು ಶಬ್ದ ಮಾಡುತ್ತಿರುವಾಗ ದನ ಎಲ್ಲರನ್ನೂ ಸಾಹಸಿಗಳನ್ನು  ಭೇದಿಸಿ ಹೋಗುವುದನ್ನು ನೋಡುವುದೇ ಒಂದು ರೊಮಾಂಚನದ ಹಬ್ಬ. ಹೋರಿ ಯಾರ್ ಕೈಗೂ ಸೀಗದೇ ಓಡಿದರೆ ಆ ಹೋರಿ ಮಾಲಿಕ ಆನಂದ ಭಾಷ್ಪ ಹಾಕಿ ತನ್ನ ಸಂಗಡಿಗರೊಂದಿಗೆ ಕೆಕೆ ಹಾಕುವುದು ಕುಣಿಯುವುದು ನೋಡಬಹುದಾಗಿದೆ. ನೂರಾರು  ಯುವಕರು ಕೊಬ್ಬರಿ ಹರಿಯಲು ನಿಂತಿದ್ದರೆ ಸಾವಿರಾರು ಜನರು ಹೋರಿ ಓಟ ಹಾಗೂ ಯುವಕರ ಸಾಹಸ  ಕಣ್ತುಂಬಿಕೊಳ್ಳಲು  ಎರಡು ಬದಿಗಳಲ್ಲಿ ಮನೆಗಳ ಮಾಳಿಗೆಯಲ್ಲಿ ನೆರೆದಿದ್ದರು. ನ್ಯಾಸರ್ಗಿ ಮುತ್ತು, ಮುಂಡಗೋಡ ಕಿಂಗ್ , ಅಂದಾನಿ, 108 ಸೇರಿದಂತೆ ಹಲವು ಹೆಸರುಗಳಿಂದ ಗುರುತಿಸಿ ಕೊಂಡಿದ್ದ ಹೋರಿಗಳು ಒಂದಕ್ಕಿಂತ ಒಂದು ಶರವೇಗದಲ್ಲಿ ಓಡುತ್ತಿದ್ದವು.
ಪ್ರತಿವರ್ಷ ದೀಪಾವಳಿ ಹಬ್ಬದಲ್ಲಿ  ದನ ಬೆದರಿಸುವ ಕಾರ್ಯ ನಡೆಯುತ್ತಿದೆ. ರೈತರು ಖುಷಿಯಿಂದ ಕಾರ್ಯಕ್ರಮ ದಲ್ಲಿ ಪಾಲ್ಗೋಳತ್ತಾರೆ. ರೈತರ ಪಾಲಿಗೆ ಸಂತಸದ ಹಬ್ಬವಾಗಿದ್ದು. ಅವರವರ ಹೋರಿ ಗೆದ್ದಾಗ ಗೆದ್ದಂತೆ ರೈತರು ಸಂಭ್ರಮಿಸುತ್ತಾರೆ ಇಂತಹ ಸಂಭ್ರಮ ನೋಡುವುದು ಈ ಹೋರಿ ಬೇದರಿಸುವ ಹಬ್ಬದಲ್ಲಿ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತರಿಂದ ಹೇಳುತ್ತಿರುವ ಮಾತು
ಜನಪದ ಕ್ರೀಡೆಗಳಲ್ಲಿ  ಒಂದಾದ ಹೋರಿಬೇದರಿಸುವ ಕ್ರೀಡೆ ಗ್ರಾಮಾಂತರ ಕ್ರೀಡೆಯಾಗಿದ್ದು ಈ ಬಯಲು ಸೀಮೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಹಬ್ಬ ಮುಂಡಗೋಡ ನಲ್ಲಿ ಪ್ರತಿ ದೀಪಾವಳಿಯ ಹಬ್ಬದ ಪಾಡ್ಯ ಹಬ್ಬದ ದಿನದೊಂದು ದನಬೇದರಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ತಾಲೂಕಿನ ಪಾಳಾ ಗ್ರಾಮದಲ್ಲಿ ರಾಜ್ಯಮಟ್ಟದ ದನಬೇದರಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ದನಬೇದರಿಸುವ ಹಳ್ಳಿ ಕ್ರೀಡೆ ಮುಂಡಗೋಡ ಉಳಿಸಿಕೊಂಡು ಬರುವ ನಿಟ್ಟಿನಲ್ಲಿ ಸಾಗಿದೆ
ಚಿತ್ರ ಮತ್ತು ವರದಿ : ನಝೀರುದ್ದಿನ ಎ. ತಾಡಪತ್ರಿ

Read These Next

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...