ಮುಂಡಗೋಡ:ಶಿಕ್ಷಣ ಸಚಿವರ ನಡೆ ಖಂಡಿಸಿ ಎಬಿವಿಪಿ ಯಿಂದ ಪ್ರತಿಭಟನೆ

Source: nazir | By Arshad Koppa | Published on 26th July 2017, 8:16 AM | Coastal News | Guest Editorial |

ಮುಂಡಗೋಡ:  ಕಾಲೇಜಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಿಗೆ ಪ್ರತಿ ಬಂದಿಸುವ, ಶಿಕ್ಷಣ ಸಚಿವರ ನಡೆ ಖಂಡಿಸಿ ಹಾಗೂ ಸರಕಾರಿ ಕಾಲೇಜ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನವರು ಸೋಮವಾರ ಪಟ್ಟಣದಲ್ಲಿ ಪ್ರತಿಭಟಸಿ ನಂತರ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ರಾಜ್ಯ ಸರ್ಕಾರದ ಈ ಕ್ರಮ ಸಂವಿಧಾನದತ್ತ ಆಶಯಗಳಿಗೆ ವಿರುದ್ಧವಾಗಿದ್ದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಾರಕವಾಗಿದೆ. ಕಾಂಗ್ರೆಸ್ ಸರ್ಕಾರ ಕಾಲೇಜುಗಳಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ವಿದ್ಯಾರ್ಥಿಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಸರ್ಕಾರದ ಈ ನಡೆಯನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರದ ಈ ಕ್ರಮವು ಡಾ.ಬಿ.ಆರ್ ಅಂಬೇಡ್ಕರರವರ ರಚಿಸಿದ ಸಂವಿಧಾನದ ಆಶಯಕ್ಕೆ ಮಾಡಿದ ಅಪಮಾನವಾಗಿದೆ. ವಿದ್ಯಾರ್ಥಿ ಸಂಘಟನೆಗಳನ್ನು  ಪ್ರತಿಭಂದಿಸುವ ಉತ್ಸಕದಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆತರುತ್ತಿದೆ. ಸಂಘಟನೆಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳಿಗೆ  ಬಿಟ್ಟ ವಿಚಾರವಾಗಿದೆ. ಕಾಲೇಜ ಕ್ಯಾಂಪಸ್ ನಾಯಕತ್ವದಿಂದ ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಅನೇಕರು ನಾಯಕರಾಗಿ ಬೆಳದಿದ್ದಾರೆ ತಮ್ಮ ಪಕ್ಷದಲ್ಲೇ ಅನೇಕರು ವಿದ್ಯಾರ್ಥಿ ನಾಯಕರಾಗಿ ಹೊರಬಂದಿರುವುದನ್ನು ಶಿಕ್ಷಣ ಸಚಿವರು ಮರೆತ್ತಿದ್ದಾರೆ. ರಾಜ್ಯದ ಯುವ ಮತದಾರರ ಮೇಲೆ ಕಣ ್ಣಟ್ಟಿರುವ ಕಾಂಗ್ರೆಸ್ ಸರ್ಕಾರ ಕ್ಯಾಂಪಸ್‍ಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಿಗೆ ಅವಕಾಶ ನೀಡದಂತೆ ಪ್ರತಿಭಂದಿಸಲು ಮುಂದಾಗಿದೆ. ಆ ಮೂಲಕ ಅಡ್ಡದಾರಿಯಲ್ಲಿ ವಿದ್ಯಾರ್ಥಿಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಎಂದು ಮನವಿಯಲ್ಲಿ ದೂರಿದ್ದಾರೆ.


ಈ ಸಂದಂರ್ಭದಲ್ಲಿ ಎಬಿವಿಪಿ ಶಿರಶಿ ವಿಭಾಗ ಸಂಘಟನ ಕಾರ್ಯದರ್ಶಿ ಸಿದ್ದು, ನಗರ ಕಾರ್ಯದರ್ಶಿ ಗಣೆಶ ಶಿರಾಲಿ, ಅರ್ಪಿತಾ, ರಂಜಿತ, ಸವಿತಾ, ಶಾಂತ, ಪೈಬ ಅಕ್ಯಯಾ, ಮಂಜುನಾಥ, ಪ್ರವೀಣ, ಆನಂದ, ಗೌತಮ್, ಸೇರಿದಂತೆ ಮುಂತಾದವರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...