ಲಂಡನ್: ಮಗುವಿನ ಜೀವ ಉಳಿಸುವ ಶಸ್ತ್ರ ಚಿಕಿತ್ಸೆಗಾಗಿ ಹದಿನೈದು ಘಂಟೆ ಹೃದಯ ಬಡಿತ ನಿಲ್ಲಿಸಿದ ವೈದ್ಯರು

Source: so english | By Arshad Koppa | Published on 30th August 2016, 8:22 AM | Global News |

ಲಂಡನ್, ಆ ೨೯: ಲಂಡನ್ ನಲ್ಲಿ ಜನಿಸಿದ ಮಗುವಿನ ಹೃದಯದಲ್ಲಿ ದೊಡ್ಡದೊಂದು ತೂತಿದ್ದು ಇದರಿಂದ ಒಳ್ಳೆಯ ರಕ್ತ ಕೆಟ್ಟ ರಕ್ತ ಮಿಶ್ರಣಗೊಂಡು ಮಗುವಿನ ಪ್ರಾಣಕ್ಕೇ ಅಪಾಯವಿತ್ತು. ಒಂಭತ್ತು ತಿಂಗಳ ಬಳಿಕ ಅತ್ಯಂತ ಅಪರೂಪದ ಮತ್ತು ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆಯ ಮೂಲಕ ಈ ತೂತನ್ನು ಸರಿಪಡಿಸಿದ ವೈದ್ಯರು ದಾಖಲೆ ಸಾಧಿಸಿದ್ದಾರೆ.

ಸುಮಾರು ಹದಿನೈದು ಘಂಟೆಯ ಕಾಲ ನಡೆದ ಈ ಶಸ್ತ್ರಕ್ರಿಯೆ ನಾಥನ್ ಬೈರ್ನ್ ಎಂಬ ಒಂಭತ್ತು ತಿಂಗಳ ಮಗುವಿನ ಮೇಲೆ ನಡೆಸಲಾಗಿದ್ದು ಈ ಅವಧಿಯಲ್ಲಿ ಹೃದಯ ಬಡಿತವನ್ನು ಪೂರ್ಣವಾಗಿ ನಿಲ್ಲಿಸಿರುವುದು ಒಂದು ದಾಖಲೆಯಾಗಿದೆ. 

ಶಸ್ತ್ರಕ್ರಿಯೆಯ ಹೊರತಾಗಿ ಸಾವು ನಿಶ್ಚಿತವಾಗಿದ್ದ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಈ ಶಸ್ತ್ರಕ್ರಿಯೆ ಏಳು ಘಂಟೆಗಳ ಅವಧಿಯದ್ದಾಗಿರುತ್ತದೆ. ಆದರೆ ಪರಿಸ್ಥಿತಿ ವಿಪರೀತಕ್ಕೆ ತಿರುಗಿದ ಕಾರಣ ಹದಿನೈದು ಘಂಟೆಗಳಿಗಷ್ಟು ಹೆಚ್ಚು ಸಮಯವನ್ನು ತೆಗೆದುಕೊಳ್ಳಲಾಗಿತ್ತು. ಮಗು ಇನ್ನೂ ತೀವ್ರ ನಿಗಾ ಘಟಕದಲ್ಲಿದ್ದು ಅಪಾಯದಿಂದ ಪಾರಾಗಿದೆ. ಮಗುವಿನ ತಾಯಿ ಲೆಸ್ಲಿ ಈ ಬಗ್ಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. 


 

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...