ಕೋಲಾರ:ಎತ್ತಿನಹೊಳೆ ನೀರಿನಿಂದ  ಜಲಾಭಿಷೇಕದ ಸುಳ್ಳು ಆಶ್ವಾಸನೆ ನೀಡಿದ ಶಾಸಕರ ಧೋರಣೆಗೆ ಖಂಡನೆ

Source: shabbir | By Arshad Koppa | Published on 16th August 2017, 7:50 AM | State News | Guest Editorial |

ಕೋಲಾರ ,ಆ.15: ಜಿಲ್ಲೆಯ ಜನರಿಗೆ ಕುಡಿಯಲು ಶುದ್ದ ನೀರು ನೀಡಲು 3 ದಶಕದಿಂದ ಜನರನ್ನು ಮರಳು ಮಾಡುತ್ತಾ ಓಟ್ ರಾಜಕಾರಣ ಮಾಡಿಕೊಂಡು ಯಾಮಾರಿಸಿ ದಿನಕೊಂದು ಉಸರವಳ್ಳಿ ಬಣ್ಣದ ಮಾತನಾಡುತ್ತಾ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಸರ್ಕಾರ ಮತ್ತು ಸಚಿವರ ನಾಟಕವನ್ನು ಖಂಡಿಸಿ ರೈತ ಸಂಘದಿಂದ ಜಿಲ್ಲೆಗೆ ನೀರು ತಂದು ಕೆರೆಗಳು ತುಂಬಿಸಿ   ಮಾತು ಉಳಿಸಿಕೊಂಡಿರುವ ಸಚಿವರಿಗೆ 14ರ ರಾತ್ರಿ ಹೊಸ ಬಸ್ ನಿಲ್ದಾಣದಲ್ಲಿ ಯರ್‍ಗೊಳ್, ಕೆ,ಸಿ,ವ್ಯಾಲಿ, ಎತ್ತಿನಹೊಳೆ ನೀರಿನಿಂದ  ಜಲಾಭಿಷೇಕ ಮಾಡಿ ಮಾತು ತಪ್ಪಿದ ಸಚಿವರ ಮಾಯಲಮಾರಾಟಿ  ದೋರಣೆಯನ್ನು ಖಂಡಿಸಲಾಯಿತು.


ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ 3 ದಶಕದಿಂದ ದಿನಕೊಂದು ನೀರಾವರಿ ಯೋಜನೆಯ ಹೆಸರಿನಲ್ಲಿ ಜನರಿಗೆ ನಾಮಹಾಕಿ ಯೋಜನೆಗಳ ಹಣವನ್ನು ಲೂಟಿ ಮಾಡಿ ಯರ್‍ಗೊಳ್ ಯೋಜನೆಯನ್ನು ದುರುಪಯೋಗ  ಮಾಡಿಕೊಂಡು  ಸಮಯಕ್ಕೆ ತಕ್ಕಂತೆ ಎತ್ತಿನಹೊಳೆ, ಕೆ.ಸಿ.ವ್ಯಾಲಿ ಎಂದು ಇಲ್ಲದ ನಾಟಕವಾಡಿ ಯೋಜನೆಗಳನ್ನು ರಾಜಕಾರಣಕ್ಕೆ ಬಲಿ ನೀಡುತ್ತಿದ್ದಾರೆ. ಶುದ್ದ ಕುಡಿಯುವ ನೀರಂತೂ ಕೊಡಲು ಕೈಲಾಗದ ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಕೆ.ಸಿವ್ಯಾಲಿಯ ಮಲಮೂತ್ರ ನೀರು ಕೊಡಲು ದೊಂಬರಾಟವಾಡಿ ಈ ಯೋಜನೆಯನ್ನು ಯರ್‍ಗೋಳ್ ರೀತಿಯೇ ಲೂಟಿ ಯೋಜನೆ ಮಾಡಲು ಹೊರಟಿರುವುದು ಮತ್ತು ಜನರಿಗೆ ದಿನಕ್ಕೊಂದು ಮಾತು ಹೇಳಿ ಬಣ್ಣ ಬದಲಾಯಿಸುವ ಜಿಲ್ಲೆಯ ಹಿರಿಯ ಸಚಿವರಾದ ರಮೇಶ್ ಕುಮಾರ್ ರವರು ಜಿಲ್ಲೆಯ ಜನಕ್ಕೆ ಬಗೆಯುತ್ತಿರುವ ದೊಡ್ಡ ದ್ರೋಹವಾಗಿದೆ ಮತ್ತು ಜಿಲ್ಲೆಯನ್ನು ರಾಮರಾಜ್ಯ ಮಾಡುತ್ತೇನೆಂದು ಉತ್ತರಪೌರುಷ ತೋರಿಸಿ ಜಿಲ್ಲೆಯ ಲೂಟಿ ನಡೆಯುತ್ತಿದ್ದರೂ ಕಣ್ಮುಚ್ಚಿ ತಪಸ್ಸಿನ ಕಪಟ ನಾಟಕವನ್ನು ಬಿಟ್ಟು ಜನರು ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಮಾತನಾಡಿ ಜಿಲ್ಲೆಯಲ್ಲಿ ರೈತನ ಶೋಷಣೆಯೆನ್ನುವುದು ಮಿತಿಮೀರಿದ್ದು, ಸರ್ಕಾರಿ ಕಛೇರಿಗಳು ದಲ್ಲಾಳರ ಕಚೇರಿಗಳಾಗಿದ್ದು, ಕೆರೆ ಕುಂಟೆಗಳು ಮಂಗಮಾಯವಾಗುತ್ತಿದ್ದರೂ  ತುಟಿ ಬಿಚ್ಚದ ಸಚಿವರು ಜನರ ಕಿವಿಗೆ ಹೂವಿಟ್ಟು ಎಂದರಿಕಿ ಮಂಚೋಡು ಅನಂತರಾಮಯ್ಯ ಎಂಬ ರೀತಿ ಜನರನ್ನು ದಿಕ್ಕು ತಪ್ಪಿಸಿ, ಓಟ್ ರಾಜಕಾರಣದ ಗಿಮಿಕ್ ಮಾಡಲು ಮುಂದಾಗಿರುವ ಸಚಿವರು  ಜಿಲ್ಲೆಯ ಇಂದಿನ ಪರಿಸ್ಥಿತಿಯ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡರೆ ಸಚಿವರ ಘನತೆಗೆ ಶೋಭೆ ಸಲ್ಲುತ್ತಿತ್ತು. ಅದು ಬಿಟ್ಟು ಜಿಲ್ಲೆಯನ್ನು ರಾಮರಾಜ್ಯ ಮಾಡಿದ್ದೇವೆ, ಜಿಲ್ಲೆಯಲ್ಲಿ ಯಾವುದೇ ರೀತಿಯ ಭ್ರಷ್ಟಚಾರವಿಲ್ಲ ಜಿಲ್ಲೆಯ ಜನರಿಗೆ ನಾನು ಕೊಟ್ಟಿರುವ  ಕೊಡುಗೆ ಜಿಲ್ಲೆಯ ಜನರು ಮಲಮೂತ್ರ ಉಪಯೋಗಿಸಿ ಬಳಸಲು ಆಗದ ನೀರನ್ನು ಚಿನ್ನಾಪುರ ಕೆರೆಯ ಸುತ್ತಮುತ್ತಲಿಂದ ನೀರನ್ನು ಕೋಲಾರ ನಗರಕ್ಕೆ ಕೊಟ್ಟು ಜಿಲ್ಲೆಯ ಜನರನ್ನು ರೋಗರುಜಿನಗಳಿಗೆ ಹೀಡು ಮಾಡಿ ಅಭಿವೃದ್ದಿಯೆಂದುಕೊಂಡು ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಿ ತಮ್ಮ ಮೇಲೆ ಜಿಲ್ಲೆಯ ಜನರು ಇಟ್ಟಿರುವ ವಿಶ್ವಾಸಕ್ಕೆ ದ್ರೋಹ ಬಗೆಯದೆ ಕೆಲಸ ಮಾಡಿ ಎಂದು ಅಗ್ರಹಿಸಿದರು. 
    ಸಚಿವರ ಈ ಜಿಲ್ಲೆಗೆ ಮಾಡಿರುವ  ಪುಣ್ಯಕಾರ್ಯಗಳನ್ನು ಮೆಚ್ಚಿ ಕೆರೆ ಕುಂಟೆಗಳು ಮಲಮೂತ್ರ ನೀರಿನಿಂದ ತುಂಬಿಸಿ ಸಂಮೃದ್ದಿ ಮಾಡಿರುವ ಸಚಿವರಿಗೆ ಕೆರೆಗಳಲ್ಲಿನ ಯರ್‍ಗೊಳ್, ಎತ್ತಿನಹೊಳೆ, ಕೆಸಿವ್ಯಾಲಿಯ ನೀರಿನಿಂದ ಸ್ನಾನ ಮಾಡಿಸಿ ಸಚಿವರು ಇನ್ನಾದರೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ರೀತಿ ನಡೆದುಕೊಳ್ಳಿ ಎಂದು  ಆಗ್ರಹಿಸಲಾಯಿತು.
    ಈ ಹೋರಾಟದಲ್ಲಿ ಜಿಲ್ಲಾದ್ಯಕ್ಷೆ ಎ.ನಳಿನಿ, ಮರಗಲ್ ಶ್ರೀನಿವಾಸ್,ಉಮಾಗೌಡ, ರಂಜಿತ್‍ಕುಮಾರ್, ಪಾರುಕ್ ಪಾಷ, ಕೀಶೋರ್, ಸಾಗರ್, ರೆಡ್ಡಿ, ಸುಬ್ರಮಣ , ಈಕಂಬಳ್ಳಿ ಮಂಜು, ವೆಂಕಟಸ್ವಾಮಿಗೌಡ, ಕೊರಗಂಡಹಳ್ಳಿ ಮಂಜು, ಶಿವು, ಪುರುಷೋತ್ತಮ್, ಆನಂದರೆಡ್ಡಿ, ಮುಂತಾದವರಿದ್ದರು.

ಕೆ.ಶ್ರೀನಿವಾಸಗೌಡ


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ದಿನ ನಿತ್ಯದ ಅಗತ್ಯ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ

ಕೋಲಾರ: ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ವಸ್ತುಗಳಾದ ಡೀಜಲ್, ಪೆಟ್ರೋಲ್, ಗ್ಯಾಸ್‍ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ...

ಅಜರ್‍ಬೈಜಾನ್ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಭಾರತ ಗೌರವಿಸುತ್ತದೆ - ಮುನಿಯಪ್ಪ

ಕೋಲಾರ:  ಭಾರತ ಮತ್ತು ಅಜರ್‍ಬೈಜಾನ್ ನಮ್ಮ ಐತಿಹಾಸಿಕ ಸಂಬಂಧಗಳು ಮತ್ತು ಹಂಚಿಕೆ ಸಂಪ್ರದಾಯಗಳ ಆಧಾರದ ಮೇಲೆ ನಿಕಟ ಮತ್ತು ಸೌಹಾರ್ದಯುತ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...