ಕೆ.ಸಿ ರೆಡ್ಡಿ ಸ್ಮಾರಕ ನಿರ್ಮಾಣಕ್ಕಾಗಿ 200 ಕೋಟಿ ರೂಪಾಯಿ ಮೀಸಲಿಡಲು ಕೆ.ಹೆಚ್.ಮುನಿಯಪ್ಪ ಮನವಿ

Source: sonews | By Staff Correspondent | Published on 5th February 2019, 11:46 PM | State News | Don't Miss |

ಕೋಲಾರ: ಮೈಸೂರು ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿಗಳಾದ ದಿವಂಗತ ಕೆ.ಸಿ ರೆಡ್ಡಿ ರವರ ಸ್ಮಾರಕ ನಿರ್ಮಾಣಕ್ಕಾಗಿ 200 ಕೋಟಿ ರೂಪಾಯಿಗಳನ್ನು ಹಾಗೂ ಆ ಸ್ಥಳವನ್ನು ಐತಿಹಾಸಿಕ ಪ್ರವಾಸ ಸ್ಥಳವನ್ನಾಗಿಸಲು 100 ಕೋಟಿ ರೂಪಾಯಿಗಳನ್ನು ಮೀಸಲಿಡಲು ಕೋಲಾರ ಲೋಕಸಭಾ ಕ್ಷೇತ್ರದ ಸದಸ್ಯರಾದ ಕೆ.ಹೆಚ್.ಮುನಿಯಪ್ಪ ರವರು ಮನವಿ ಮಾಡಿದ್ದಾರೆ.
    
ಈ ಸ್ಮಾರಕವು ಕರ್ನಾಟಕ ಏಕೀಕರಣ ಮತ್ತು 1939ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಪ್ರತೀಕವಾಗಿದೆ. ನಮ್ಮ ತಂದೆಯವರು ಸಹ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದು, ಅವರ ಕುಟುಂಬದಿಂದ ಬಂದ ನಾನು ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಸ್ವತಂತ್ರ್ಯ ಭಾರತದ ಮೈಸೂರು ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿಗಳಿಗೆ ಕೊಡುವ ಗೌರವ ಇದಾಗಿರುತ್ತದೆ. ಕೆ.ಸಿ ರೆಡ್ಡಿ ರವರು 1952ರಲ್ಲಿ ಪ್ರಪ್ರಥಮ ಪ್ರಜಾಪ್ರಭುತ್ವ ಚುನಾವಣೆಯಲ್ಲಿ ಗೆದ್ದು ಪ್ರಥಮ ಮುಖ್ಯಮಂತ್ರಿಗಳಾಗಿದ್ದರು. ಆದ್ದರಿಂದ ಅವರನ್ನು ಗೌರವಿಸಲು ಅವರು ಹುಟ್ಟಿದ ಸ್ಥಳವನ್ನು ಐತಿಹಾಸಿಕ ಪ್ರವಾಸ ಸ್ಥಳವನ್ನಾಗಿಸಲು ನೂರು ಕೋಟಿ ರೂಪಾಯಿಗಳು ಹಾಗೂ ಅವರ ಸ್ಮಾರಕಕ್ಕೆ 200 ಕೋಟಿ ರೂಪಾಯಿಗಳನ್ನು ಮುಂದಿನ ಬಜೆಟ್‍ನಲ್ಲಿ ಮೀಸಲಿಡಬೇಕೆಂದು ತಮ್ಮಲ್ಲಿ ಕೋರುತ್ತೇವೆ.
    
ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ 170.69 ಕೋಟಿ ರೂಗಳ 2019-20ನೇ ಸಾಲಿನಲ್ಲಿ ಬಜೆಟ್‍ನಲ್ಲಿ ಮೀಸಲು ಮಾಡಿ ಅನಕೂಲ ಮಾಡಿಕೊಡಬೇಕೆಂದು ಸಂಸದರಾದ ಕೆ.ಹೆಚ್ ಮುನಿಯಪ್ಪ ರವರು ಮನವಿ ಮಾಡಿದ್ದಾರೆ.
ನನ್ನ ಮತ ಕ್ಷೇತ್ರದ ಕೋಲಾರ ಪಟ್ಟಣದಲ್ಲಿ ಹೊಸದಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು 2017ನೇ ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭಗೊಂಡಿದ್ದು, 2018-19ನೇ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಿರುತ್ತಾರೆ. ಈ ವಿಶ್ವವಿದ್ಯಾಲಯಕ್ಕೆ ಜಮೀನು, ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿದೆ. 
    
ಆದ್ದರಿಂದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ 170.69 ಕೋಟಿ ರೂಗಳ 2019-20ನೇ ಸಾಲಿನಲ್ಲಿ ಬಜೆಟ್‍ನಲ್ಲಿ ಮೀಸಲಿಡಬೇಕೆಂದು ಅವರು ಮನವಿ ಮಾಡಿದ್ದಾರೆ.
    
ಕರ್ನಾಟಕ ರಾಜ್ಯದ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ರೈಲ್ವೇ ಕೋಚ್ ಪ್ಯಾಕ್ಟರಿ ಅನುದಾನ ಕೊಡಬೇಕೆಂದು ಸಂಸದರಾದ ಕೆ.ಹೆಚ್ ಮುನಿಯಪ್ಪ ರವರು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದ್ದಾರೆ.
    
ನಿಮ್ಮ ಚರ್ಚೆಯಲ್ಲಿ ರೈಲ್ವೇ(ಆರ್.ಸಿ.ಎಫ್) ರೈಲ್ವೇ ಇಲಾಖೆಯಲ್ಲಿ ಈಗಾಗಲೇ ಅನುಮತಿ ಕೊಟ್ಟಿರುವ ಹಾಗೆ ಐದು ವರ್ಷಗಳಲ್ಲಿ ರೈಲ್ವೆ ಕೋಚ್ ಪ್ಯಾಕ್ಟರಿಯನ್ನು ಕಟ್ಟಲು ಅನುಮತಿಸುವ ಬಗ್ಗೆ ತಾವು ಉದಾರ ಹೊಂದಬೇಕು. 2013 ರಿಂದ 2018ಕ್ಕೆ ಮುಕ್ತಾಯವಾಗಿದ್ದು ಮತ್ತೆ 2024ರವರೆಗೆ ಕಾಮಗಾರಿಯನ್ನು ಮುಂದುವರೆಸಲು ಸಂಸದರೇ ಖುದ್ದಾಗಿ ನವೀಕರಣ ಮಾಡಿಸಿದ್ದಾರೆ. ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಈಗಾಗಲೇ ಕರ್ನಾಟಕ ಸರ್ಕಾರ ಹಣಕಾಸು ನೆರವು ಆರ್.ಸಿ.ಎಫ್‍ಗೆ ಘೋಷಣೆ ಮಾಡಿದೆ. ಈಗ ರೈಲ್ವೆ ಇಲಾಖೆಯು ತುಂಬಾ ಉತ್ಸುಕವಾಗಿದ್ದು ಆ ಪ್ಯಾಕ್ಟರಿಯನ್ನು ಮುಂದುವರೆಸಲು ಸುಮಾರು 500 ಕೋಟಿ ರೂಪಾಯಿಗಳನ್ನು ಅದಕ್ಕಾಗಿ ಮೀಸಲಿಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. 

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...