ಕಾರವಾರ-ಅಂಕೋಲಾ ನೀರು ಸರಬರಾಜು 158.62 ಕೋಟಿ ರೂ.ವೆಚ್ಚದ ವಿಶೇಷ ಯೋಜನೆಗೆ ಸಚಿವ ಸಂಪುಟ ಅಸ್ತು

Source: sonews | By Sub Editor | Published on 13th September 2017, 9:58 PM | Coastal News | State News | Don't Miss |

ಬೆಂಗಳೂರು : ಬಹುದಿನಗಳ ಬೇಡಿಕೆಯಾದ ಕಾರವಾರ ಮತ್ತು ಅಂಕೋಲಾ ಪಟ್ಟಣಗಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಗಂಗಾವಳಿ ನದಿಗೆ ಬ್ಯಾರೇಜನ್ನು ನಿರ್ಮಿಸಲು 158.62 ಕೋಟಿ ರೂ.ವೆಚ್ಚದ ವಿಶೇಷ ಯೋಜನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಮುಖ್ಯವಾಗಿ ಬೇಸಿಗೆಯಲ್ಲಿ ಕರಾವಳಿ ಭಾಗದ ನದಿಗಳಲ್ಲಿ ನೀರಿನ ಪ್ರಮಾಣ ತೀವ್ರ ಇಳಿಮುಖವಾಗಿ ಪ್ರತಿವರ್ಷವೂ ಕಾರವಾರ, ಅಂಕೋಲಾ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಗಂಗಾವಳಿ ನದಿಗೆ ಬ್ಯಾರೇಜನ್ನು ನಿರ್ಮಿಸಿ ನೀರಿನ ಅಭಾವವಿರುವ ಈ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು 158.62 ಕೋಟಿ ರೂ.ವೆಚ್ಚದ ವಿಶೇಷ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಅವರು ಹೇಳಿದ್ದಾರೆ.

ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಚಿವ ಸಂಪುಟ ಸಭೆಯಲ್ಲಿ ಯೋಜನೆಯ ಜಾರಿಗೆ ಹಸಿರು ನಿಶಾನೆ ನೀಡಲಾಗಿದೆ. ಈ ಯೋಜನೆ ಜಾರಿಗೊಂಡಲ್ಲಿ ಕಾರವಾರ, ಅಂಕೋಲಾ ಪಟ್ಟಣಗಳಲ್ಲದೆ ಸುತ್ತಮುತ್ತಲಿನ ಅಮದಳ್ಳಿ, ಚೆಂಡಿಯಾ, ತೋಡೂರು, ಅರ್ಗಾ, ಬೇಲೇಕೇರಿ, ಅವರ್ಸಾ, ಶಿರಕುಳಿ, ಅಗಸೂರು, ವಂದಿಗೆ-ಶೆಟಗೇರಿ, ಬೊಬ್ರುವಾಡ, ಹಾರವಾಡ, ಬೆಳಂಬಾರ, ಹಟ್ಟಿಕೇರಿ ಮುಂತಾದ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರದೇಶಗಳ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಲಸಂಪನ್ಮೂಲ ಇಲಾಖೆಗಳೂ ಈ ಪ್ರಸ್ತಾವನೆಗೆ ಈಗಾಗಲೇ ಒಪ್ಪಿಗೆ ಸೂಚಿಸಿವೆ ಎಂದು ಆರ್.ವಿ. ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಹಿಂದೂಗಳನ್ನು ಭಟ್ಕಳದಿಂದ ಓಡಿಸಲು ಕಾಂಗ್ರೇಸ್ ಸರ್ಕಾರ ಪ್ರಯತ್ನಿಸುತ್ತಿದೆ-ಶೋಭಾ ಆರೋಪ

ಭಟ್ಕಳ: ಸಿದ್ಧರಾಮಯ್ಯನವರ ಸರ್ಕಾರ ಹಿಂದೂಗಳನ್ನು ಭಟ್ಕಳದಿಂದ ಓಡಿಸುವ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ...

ಹಿಂದೂಗಳನ್ನು ಭಟ್ಕಳದಿಂದ ಓಡಿಸಲು ಕಾಂಗ್ರೇಸ್ ಸರ್ಕಾರ ಪ್ರಯತ್ನಿಸುತ್ತಿದೆ-ಶೋಭಾ ಆರೋಪ

ಭಟ್ಕಳ: ಸಿದ್ಧರಾಮಯ್ಯನವರ ಸರ್ಕಾರ ಹಿಂದೂಗಳನ್ನು ಭಟ್ಕಳದಿಂದ ಓಡಿಸುವ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ...

ಶ್ರೀನಿವಾಸಪುರ: ಎತ್ತಿನಹೊಳೆ ಹೊಳೆ ಯೋಜನೆ ಹೆಸರಿನಲ್ಲಿ ಹಲವಾರು ಕಾಮಗಾರಿಯ ನೆಪದಲ್ಲಿ ವಂಚನೆ-ಜಿ.ಕೆ.ವೆಂಕಟಶಿವಾರೆಡ್ಡಿ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಘೋಷ್ಠಿಯಲ್ಲಿ ಮಾಜಿ ಶಾಸಕ ಹಾಗೂ ಕೋಲಾರಜಿಲ್ಲಾ ಜೆಡಿಎಸ್ ಅಧ್ಯಕ್ಷ ...

ಕೋಲಾರ:ಪಿಯು ವಿಧ್ಯಾರ್ಥಿಗಳಿಗೆ ಪರೀಕ್ಷೆಗೆ ಭಾಷಾಮಾಧ್ಯಮ ಕಡ್ಡಾಯ ವಿರೋಧಿಸಿದ ಎಬಿವಿಪಿ

ಆಂಗ್ಲದಲ್ಲಿ SSLC ವರೆಗೂ ವ್ಯಾಸಂಗ ನಡೆಸಿದವರಿಗೆ ತೊದರೆಯಾಗುತ್ತದೆ ಆದ್ದರಿಂದ ಕೂಡಲೇ ಈ ನಿರ್ಧಾರವನ್ನು ಕೈ ಬಿಡಬೇಕು ಇಲ್ಲವಾದರೇ ...

ಹಿಂದೂಗಳನ್ನು ಭಟ್ಕಳದಿಂದ ಓಡಿಸಲು ಕಾಂಗ್ರೇಸ್ ಸರ್ಕಾರ ಪ್ರಯತ್ನಿಸುತ್ತಿದೆ-ಶೋಭಾ ಆರೋಪ

ಭಟ್ಕಳ: ಸಿದ್ಧರಾಮಯ್ಯನವರ ಸರ್ಕಾರ ಹಿಂದೂಗಳನ್ನು ಭಟ್ಕಳದಿಂದ ಓಡಿಸುವ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ...