ವಿಶೇಷ ಲೇಖನ:ಆಟದ ಬಯಲು ಒಂದು ವಿಶಾಲವಾದ ಶಾಲೆಯಿದ್ದಂತೆ

Source: jagadish | By Arshad Koppa | Published on 25th August 2017, 9:37 PM | Sports News | Special Report |

 “ಶರೀರಮಾದ್ಮಂ ಖಲು ಧರ್ಮಸಾಧನಂ” ಎಂಬುದೊಂದು ಪುರಾತನ ನುಡಿ; ಬಹಳ ಅರ್ಥ ಪೂರ್ಣವಾದ ಮಾತು ಇದಾಗಿದೆ. ಯಾವುದೇ ಸಾಧನೆಯ ಸಿದ್ಧಿ ಆರೋಗ್ಯ ಪೂರ್ಣ ಶರೀರದಿಂದ ಮಾತ್ರ ಸಾಧ್ಯ. ನಿಜವಾದ ದೇವರ ಪೂಜೆಯೇ ಶರೀರವನ್ನು ಸ್ವಾಸ್ಥ್ಯ ಪೂರ್ಣವಾಗಿ ಇಟ್ಟು ಕೊಳ್ಳುವುದಾಗಿದೆ. ನಮ್ಮ ದೇಹವು ಆರೋಗ್ಯ ಪೂರ್ಣ, ಸ್ವಾಸ್ಥ್ಯ ಪೂರ್ಣವಾಗಿರಲು ಕ್ರೀಡೆಗಳು ಮುಖ್ಯವಾದ ಪಾತ್ರವಹಿಸುತ್ತವೆ.


    ನಮ್ಮ ಆರೋಗ್ಯವು ಆರೋಗ್ಯ ಪೂರ್ಣವಾಗಿರಲು ಆಹಾರ, ನೀರು, ವಸತಿ, ಆಮ್ಲಜನಕ, ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದವು ಕ್ರೀಡೆಗಳು, ಆಟ-ಪಾಠ, ಯೋಗಾಸನಗಳು, ವಾಯುವಿಹಾರಗಳು, ವ್ಯಾಯಾಮ, ಆಟಗಳು ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಬೆಳವಣ ಗೆಗೆ ಅವಶ್ಯಕವಾಗಿವೆ. ಶರೀರಕ್ಕೆ ವ್ಯಾಯಾಮವು, ಬುದ್ಧಿಗೆ ಕಸರತ್ತನ್ನು ಹಾಗು ಮನಸ್ಸಿಗೆ ಮನರಂಜನೆಯನ್ನು ನೀಡುವುದು ಕ್ರೀಡೆಗಳು. ಪರಸ್ಪರರನ್ನು ಅರಿತು, ಕಲೆತು, ಹೊಂದಾಣ ಕೆ ಮಾಡಿಕೊಳ್ಳುವ, ಸಹಕಾರದ ಪರಸ್ಪರ ಪ್ರೀತಿ-ವಿಶ್ವಾಸದ ಭಾವವನ್ನು, ಭಾವೈಕ್ಯತೆಯನ್ನು, ದೇಶ ಪ್ರೇಮವನ್ನು ಕ್ರೀಡೆಗಳು ಕಲಿಸಿಕೊಡುತ್ತವೆ. ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುವಲ್ಲಿ ಅವುಗಳ ಪಾತ್ರ ಹಿರಿದಾದುದು. ಕ್ರೀಡೆಗಳು ಮೈಮನಸುಗಳಿಗೆ ಉಲ್ಲಾಸ ಕೊಡುತ್ತವೆ. ಶಾರೀರಿಕ ಬೆಳವಣ ಗೆಗೆ ಇವು ಪೂರಕ.
    ಆಟದ ಬಯಲು ಒಂದು ವಿಶಾಲವಾದ ಶಾಲೆಯಿದ್ದಂತೆ. ಅದು ನಮಗೆ ಅನೇಕ ಪಾಠವನ್ನು ಕಲಿಸಿಕೊಡತ್ತದೆ. ಸ್ನೇಹಪರ ಭಾವನೆ, ಸ್ಪರ್ಧಾತ್ಮಕ ಭಾವನೆ ಹಾಗೂ ಸಹಕಾರ ಮನೋಭಾವವನ್ನು ಅದು ಕಲಿಸಿಕೊಡುತ್ತದೆ. ಶಾರೀರಿಕ ಸಂಪತ್ತು ಭೌದ್ಧಿಕ ವಿಕಸನದ ಅಡಿಪಾಯವಾಗಿದೆ.
    ಮನುಷ್ಯ ತನ್ನ ಆಹಾರಕ್ಕಾಗಿ, ನೆಲೆಗಾಗಿ, ಒಟ್ಟಿನಲ್ಲಿ ಇರುವಿಕೆಗಾಗಿ ನಡೆಸುತ್ತಿದ್ದ ಉದ್ದೇಶಪೂರ್ವಕ ಚಟುವಟಿಕೆಗಳಿಗೆಲ್ಲ ಕ್ರೀಡೆಯ ಹಿನ್ನೆಲೆ ಇದೆ. ಆಹಾರ ಪಡೆಯಲು ಮನುಷ್ಯ, ಪ್ರಾಣ ಗಳನ್ನು ಕೊಲ್ಲ ಬೇಕಾಗಿತ್ತು. ಕುದುರೆ ಓಟ, ರಥ ಸ್ಪರ್ಧೆ, ಮನುಷ್ಯರ ನಡುವಿನ ಮಲ್ಲಯುದ್ಧಗಳು ರಣರಂಗದ ಸಿದ್ಧತೆಗಾಗಿ ರೂಢಿಸಿಕೊಂಡ ಚಟುವಟಿಕೆಗಳು. ಪ್ರಾಚಿನ ರೋಮಿನ ಹೆಸರಾಂತ ರಥ ಸ್ಪರ್ಧೆ ಯುದ್ಧ ಋತುವಿನ ಸನ್ನಾಹವಾಗಿದ್ದಿತ್ತು.
    ಭಾರತದಲ್ಲಿ ಕ್ರೀಡಾ ಸಂಪ್ರದಾಯ ವೇದಕಾಲದಿಂದ ಬಂದಿದೆ. ಬಾಣಗಳ ಗುರಿ ಸಾಧಿಸುವುದು, ಬರ್ಚಿ ಎಸೆತ, ಕುದುರೆ ಸವಾರಿ, ರಥ ಓಟ, ಪಗಡಿ ಆಟ ಮುಂತಾದ ಚಟುವಟಿಕೆಗಳಲ್ಲಿ ಆರ್ಯರು ತೊಡಗುತ್ತಿದ್ದರು. ಪ್ರಾಣಾಯಾಮ, ಯೋಗಾಸನ, ಸೂರ್ಯ ನಮಸ್ಕಾರಗಳು ಇವರ ಶಾರೀರಿಕ ಚಟುವಟಿಕೆಗಳಾಗಿದ್ದವು. ಪುರಾಣಗಳಲ್ಲಿ ಅರ್ಜುನ, ರಾಮ, ಲಕ್ಷ್ಮಣ ಮುಂತಾದವರು. ಧನುರ್ವಿದ್ಯೆ, ಬಾಹು ಬಲಗಳಿಗೆ ಹೆಸರಾದವರು. ಮೊಹೆಂಜೋದಾರೋ-ಹರಪ್ಪ ಸಂಸ್ಕøತಿಯ ಕಾಲದಲ್ಲಿ ಈಜು ಒಂದು ಮೆಚ್ಚಿನ ಕ್ರೀಡೆಯಾಗಿದ್ದಿತು.


    ಕ್ರೀಡೆಗಳ ಮಹತ್ವ, ಕ್ರೀಡಾ ಕೌಶಲ್ಯಗಳನ್ನು ಮಕ್ಕಳಲ್ಲಿ, ಯುವಕರಲ್ಲಿ ಹಾಗೂ ಸಾಮಾನ್ಯ ಜನರಲ್ಲಿ ಮುಡಿಸಲು ನಮ್ಮ ಭಾರತ ದೇಶದಲ್ಲಿ ಅಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತೆವೆ. ಪೌರಾಣ ಕ ಹಾಕಿ ಆಟಗಾರ, ಮೇಜರ್ ಧ್ಯಾನ್ ಚಂದ್ ಸಿಂಗ್ ಅವರ ಜನ್ಮ ದಿನವಾಗಿದೆ. ಅವರು ಭಾರತ ಕಂಡ ಮಹಾನ್ ಹಾಕಿ ಆಟಗಾರ, ಧ್ಯಾನಚಂದ್ ಚಿಕ್ಕ ವಯಸ್ಸಿನಲ್ಲೇ ಸೈನ್ಯವನ್ನು ಸೇರಿದರು ಮತ್ತು ಅವರ ಕೋಚ್ ಪಂಕಜ್ ಗುಪ್ತಾರಿಂದ ಹಾಕಿ ಆಟ ಕಲಿತು ತಕ್ಷಣ ಚೆಂಡಿನ ಡ್ರಿಬ್ಲಿಂಗ್ ಮತ್ತು ಗೋಲ ಗಳಿಸುವಲ್ಲಿ ಪರಿಣ ತರಾದರು. ಮುಂದೆ ಭಾರತ ದೇಶದ ಹಾಕಿ ತಂಡಕ್ಕೆ ನಾಯಕರಾದರು. ತಮ್ಮ ಕ್ರೀಡಾ ವೃತ್ತಿ ಜೀವನದಲ್ಲಿ ಧ್ಯಾನಚಂದ್ ಇವರು ಮೂರು ಓಲಂಪಿಕ್ಸ್‍ನಲ್ಲಿ ಭಾರತ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟರು ನಂತರ ಭಾರತ ಸರಕಾರವು ಅವರಿಗೆ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.
    ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಅದರಲ್ಲಿಯೂ 19ನೇಯ ಶತಮಾನದ ಉತ್ತರಾರ್ಧದಿಂದೀಚೆಗೆ ಆಧುನಿಕ ಕ್ರೀಡಾ ಚಟುವಟಿಕೆಗಳು ಭಾರತದ ಶಾಲೆ, ಕಾಲೇಜುಗಳಲ್ಲಿ ರೂಢಿಗೆ ಬಂದವು. ಕ್ರಿಕೆಟ್, ಫುಟ್ ಬಾಲ್, ಹಾಕಿ ಕಲಿಸಲ್ಪಟ್ಟವು. ಸ್ವಾತಂತ್ರ್ಯನಂತರ ಎಲ್ಲ ಬಗೆಯ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯಿತು. ನಮ್ಮ ದೇಶದಲ್ಲಿ ಕ್ರಿಕೆಟ್‍ಗೆ ಇದ್ದ ಪ್ರೋತ್ಸಾಹ ಬೇರೆ ಕ್ರೀಡೆಗಳಿಗಿಲ್ಲ.
    ಕ್ರೀಡೆಗಳ ಸೌಲಭ್ಯಗಳ ಕೊರತೆ ನಮ್ಮ ದೇಶದಲ್ಲಿ ಹೆಚ್ಚಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ನಾವು ತೀರ ಹಿಂದೆ ಬಿದ್ದಿದ್ದೇವೆ. ಕ್ರೀಡೆಗಳಲ್ಲಿ ಪರಿಣ ತ ಹಾಗೂ ಪ್ರತಿಭಾನ್ವಿತ ಕ್ರೀಡಾಪುಗಳನ್ನು ಗುರುತಿಸುವಲ್ಲಿ ನಾವು ವಿಫಲರಾಗಿದ್ದೇವೆ. ಕ್ರೀಡೆಗಳಲ್ಲಿ ಕೆಟ್ಟ ರಾಜಕೀಯ, ಭ್ರಷ್ಟಾಚಾರ, ಪ್ರಭಾವ ಬೀರುವ ತಂತ್ರ ದೂರವಾಗಬೇಕು. ಕ್ರೀಡೆಗಳಿಂದ ಲಭಿಸುವ ಎಲ್ಲ ಪ್ರಯೋಜನಗಳನ್ನು ಪಡೆದುಕೊಂಡು ರಾಷ್ಟ್ರವು ಸ್ವಾಸ್ಥಮಯ ಅಭಿವೃದ್ಧಿಯನ್ನು ಸಾಧಿಸುವಂತಾಗ ಬೇಕು. ಸರ್ವರೂ ಆರೋಗ್ಯ ಪೂರ್ಣ ಆಯುಷ್ಯವಂತರಾಗಬೇಕು.
    ಇಂದಿನ ಮಕ್ಕಳು, ವಿದ್ಯಾರ್ಥಿಗಳು, ಯುವಕರು ಮೊಬೈಲ್, ಕಂಪ್ಯೂಟರ್, ಅಂತರ್ಜಾಲದಲ್ಲಿ ಆಟವಾಡುತ್ತಾರೆ. ಆದರೆ ದೇಹಕ್ಕೆ ದಂಡಿಸುವ, ವ್ಯಾಯಾಮ ಆಗುವ ಯಾವುದೇ ಕ್ರೀಡೆಯನ್ನು ಆಡುವುದಿಲ್ಲ ಆದರಿಂದ ಇಂದಿನ ಮಕ್ಕಳು ಹಳೆಕಾಲದ ಮಕ್ಕಳ ಹಾಗೆ ಸದೃಢವಾಗಿರುವುದಿಲ್ಲ. ಆದ್ದರಿಂದ ಶಾಲೆ , ಕಾಲೇಜುಗಳಲ್ಲಿ ಕ್ರೀಡೆಯ ಮಹತ್ವವನ್ನು ತಿಳಿಸಿ, ಕ್ರೀಡೆ, ಆಟಗಳಲ್ಲಿ ಭಾಗವಹಿಸಲು ತಿಳಿಸಬೇಕು.

                                        

ಜಗದೀಶ ವಡ್ಡಿನ
                                         ಗ್ರಂಥಪಾಲಕರು
                                      ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
                                        ಬಾಡ, ಕಾರವಾರ
                                        ಮೊ: 9632332185

Read These Next

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...

ಫಿಫಾ ವಿಶ್ವಕಪ್ 2018: ಸೌತ್ ಕೊರಿಯಾ vs ಸ್ವೀಡನ್: 60 ವಷರ್ಗಳ ಬಳಿಕ ಮೊದಲ ಪಂದ್ಯ ಗೆದ್ದ ಸ್ವೀಡನ್

ಮಾಸ್ಕೋ: ಫಿಫಾ ವಿಶ್ವಕಪ್ 2018ರ 'ಎಫ್' ಗುಂಪಿನ ಸೌತ್ ಕೊರಿಯಾ ಹಾಗೂ ಸ್ವೀಡನ್ ತಂಡಗಳ ನಡುವಣ ಪಂದ್ಯದಲ್ಲಿ ಸ್ವೀಡನ್ 1-0 ಅಂತರದ ಜಯಗಳಿಸಿ ...

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳದಿಂದ ಕಾಲು ಕೀಳಲು ಸಿದ್ಧವಾಗಿರುವ ದೂರದರ್ಶನ ಕೇಂದ್ರ..?

ಭಟ್ಕಳ: ಪ್ರಸಕ್ತ ಕಾಲಘಟ್ಟದಲ್ಲಿ ಭಟ್ಕಳ ಎಂಬ ಪುಟ್ಟ ಊರು ಬೆಳೆದು ನಿಂತಿದೆ. ಅಂತರಾಷ್ಟ್ರೀಯ ಆವಿಷ್ಕಾರಗಳನ್ನು ಕಾಣುವ ತವಕ ...

ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರ

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಬೆಳವಣಿಗೆಗಳು ಕೇಂದ್ರದಲ್ಲಿ ಹಾಲೀ ಅಧಿಕಾರದಲ್ಲಿರುವ ಪಕ್ಷದ ಆಳ್ವಿಕೆಯ ವಿರುದ್ಧ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...

ಸಾವಿನ ಕೂಪ ದ ಲ್ಲಿ ಗಣಿಗಾರಿಕೆ

ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಗಣಿಕಾರ್ಮಿಕರ ಸಾವುಗಳು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಪ್ರತಿಪಾದಕರಿಗೆ ನಾಚಿಕೆ ...