ಕಾರವಾರ: ಭೂಮಿಯ ರಕ್ಷಣೆ ಯುವ ಪೀಳಿಗೆಯ ಜವಾಬ್ದಾರಿ - ನ್ಯಾ ದೇವೇಂದ್ರ ಪಂಡಿತ 

Source: varthabhavan | By Arshad Koppa | Published on 23rd April 2017, 10:28 AM | Coastal News | Special Report |

“ಇಂದಿನ ಪರಿಸ್ಥಿತಿಯಲ್ಲಿ ಭೂಮಿಯ ರಕ್ಷಣೆಯ ಬಗ್ಗೆ ಎಲ್ಲರೂ ಚಿಂತಿಸಬೇಕಾಗಿದ್ದು ಮುಂದಿನ ಪೀಳಿಗೆ ಈ ಭೂಮಿಯಮೇಲೆ ಇರಬೇಕಾದರೆ ಇಂದೇ ಎಚ್ಚತ್ತು ಕಾರ್ಯನಿರತರಾಗಬೇಕಿದ್ದು ಈ ಎಚ್ಚರಿಕೆಯ ಗಂಟೆಯನ್ನು ಯುವ ಪೀಳಿಗೆ ತಮ್ಮ ಜವಾಬ್ದಾರಿಯನ್ನಾಗಿ ಸ್ವೀಕರಿಸಬೇಕು” ಎಂದು ನ್ಯಾಯಮೂರ್ತಿ ಶ್ರೀ ದೇವೇಂದ್ರ ಪಂಡಿತ್ ನುಡಿದರು. ಅವರು ವಿಶ್ವ ಭೂಮಿ ದಿನಾಚರಣೆಯ ಪ್ರಯಕ್ತ ಆಯೋಜಿಸಲಾದ ಕಾರ್ಯಕ್ರಮ ಉದ್ಘಾಟಿಸುತ್ತಾ ವಿದ್ಯಾರ್ಥಿಗಳಿಗೆ ಭೂಮಿಯ ಮಹತ್ವ ಮತ್ತು ಹಿಂದಿನಿಂದ ಬಂದಿರುವ ಪರಂಪರೆಯನ್ನು ವಿವರಿಸಿದರು.
ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರ, ಕರ್ನಾಟಕ ಅರಣ್ಯ ಇಲಾಖೆ, ಕಾರವಾರ ವಿಭಾಗ, ಕರ್ನಾಟಕ ರಾಜ್ಯ ಕಾನೂನು ಸೇವಾ ಸಮಿತಿ, ಬಾಪೂಜಿ ಕಲಾ ಮತ್ತು ವಾಣ ಜ್ಯ ಮಹಾವಿದ್ಯಾಲಯ, ಸದಾಶಿವಗಡ, ಶ್ರೀಮತಿ ಸುಮತಿ ನಾಯಕ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ ಸಾಯನ್ಸ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರವಾರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ವಿಶ್ವ ಭೂಮಿ ದಿನಾಚರಣೆಯನ್ನು ಯಶಸ್ವಿಯಾಗಿ ಹಮ್ಮಿಕೊಂಡಿತು. 


ಜಿಲ್ಲಾ ನ್ಯಾಯಾಧೀಶರಾದ ವಿಠ್ಠಲ್ ಎಸ್. ದಾರವಾಡಕರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೀತಾಅಶೋಕ ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಬಿ. ಶಿವಕುಮಾರ, ಹಿರಿಯ ಸಿವಿಲ್ ನ್ಯಾಯಾಧೀಶರು, ಅಮರನಾಥ ಕೆ. ಕೆ, ಹಿರಿಯ ಸಿವಿಲ್ ನ್ಯಾಯಾಧೀಶರು, ಸಿ. ದೆವೇಂದ್ರ ಪಂಡಿತ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ, ಡಿ.ಎಲ್.ಎಸ್.ಎ, ಮಹೇಶ ಚಂದ್ರಕಾಂತ, ಸಿವಿಲ್ ನ್ಯಾಯಾಧೀಶರು, ಜೆ.ಎಮ್.ಎಫ್.ಸಿ., ವಿವೇಕ ಗ್ರಾಮೋಪಾಧ್ಯಾಯೆ, ಹಿರಿಯ ನ್ಯಾಯಾಧೀಶರು, ಜೆ.ಎಮ್.ಎಫ್.ಸಿ. ಭಾಗವಹಿಸಿದರು. ತದನಂತರ 10.30ರಿಂದ ಬಾಪೂಜಿ ಕಲಾ ಮತ್ತು ವಾಣ ಜ್ಯ ಮಹಾವಿದ್ಯಾಲಯದಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 


ಜಿಲ್ಲಾ ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿಗಳಾದ ವಿ. ಎನ್. ನಾಯಕ ಇವರು ಕಾರ್ಯಕ್ರಮವನ್ನು ಕುರಿತು ಪ್ರಾಸ್ತಾವಿಕ ಮಾತನಾಡಿದರು. ಭೂಮಿ ದಿನಾಚರಣೆಯ ಮಹತ್ವ, ಅದನ್ನು ಆಚರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ದೇವೆಂದ್ರ ಪಂಡಿತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಭೂಮಿಯನ್ನು ರಕ್ಷಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ. ನೀರಿನ ಮಾಲಿನ್ಯ, ವಾತಾವರಣ ಮಾಲಿನ್ಯಕ್ಕೆ ಅನೇಕ ಕಾನೂನುಗಳಿದ್ದೂ ಅವುಗಳನ್ನು ಮಾಲಿನ್ಯ ಮಾಡದಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. 
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾವಂತ ಎಸ್.ಬಿ, ಸಹಾಯಕ ಅರಣ್ಯಾಧಿಕಾರಿಗಳು, ಕಾರವಾರ ವಿಭಾಗ ಇವರು ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಗಿಡ ನೆಟ್ಟು ಭೂಮಿ ರಕ್ಷಣೆಗೆ ಸಹಕರಿಸಬೇಕು ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಭಾಕರ ರಾಣೆ, ಅಧ್ಯಕ್ಷರು, ಬಿ.ಜಿ.ವಿ.ಎಸ್. ಸದಾಶಿವಗಡ ಇವರು ಭೂಮಿ ದಿನಾಚರಣೆಯ ಬಗ್ಗೆ ಮಾತನಾಡಿದರು. ಬಾಪೂಜಿ ಮಹಾವಿದ್ಯಾಲಯದ ಪ್ರಾಂಶುಪಾಲರು ಮಹೇಶ ಗೋಳಿಕಟ್ಟೆ ಎಲ್ಲರಿಗೆ ಸ್ವಾಗತ  ಕೋರಿದರು. 
ಆಕಾಶ ನಾಯಕ ಎಲ್ಲರನ್ನು ವಂದಿಸಿದರು. ನಮೃತಾ ಬಾಂದೇಕರ ಕಾರ್ಯಕ್ರಮ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಕೆ.ಡಿ.ನಾಯ್ಕ, ವಲಯ ಅರಣ್ಯಾಧಿಕಾರಿಗಳು, ಕಾರವಾರ ವಿಭಾಗ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಬಾಪೂಜಿ ಕಾಲೇಜಿನ ವಿದ್ಯಾರ್ಥಿಗಳು, ಶ್ರೀಮತಿ ಸುಮತಿ ನಾಯಕ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ ಸಾಯನ್ಸ್ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕರು, ಸದಸ್ಯರು ಭಾಗವಹಿಸಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...